ಮಂಗಳೂರು(ಸೆ.13): ದ.ಕ.ಜಿಲ್ಲೆಯಲ್ಲಿ ಹದಗೆಟ್ಟಎಲ್ಲ ರಸ್ತೆಗಳನ್ನು ಅಕ್ಟೋಬರ್‌ ಒಳಗೆ ದುರಸ್ತಿಪಡಿಸಿ ಸಂಚಾರ ಯೋಗ್ಯವಾಗಿ ಪರಿವರ್ತಿಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಸಂಬಂಧಿತ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಗಳೂರು ಪಂಪ್‌ವೆಲ್‌ ಮೇಲ್ಸೇತುವೆ ಡಿಸೆಂಬರ್‌ಗೆ ಪೂರ್ಣ..?

ಮಾಣಿ-ಮೈಸೂರು, ಬಿ.ಸಿ.ರೋಡ್‌-ಸುರತ್ಕಲ್‌, ಮೂಲ್ಕಿ-ಹೆಜಮಾಡಿ, ನಂತೂರು-ತಲಪಾಡಿ, ಬಿ.ಸಿ.ರೋಡ್‌-ಗುಂಡ್ಯ, ಕುಲಶೇಖರ-ಕಾರ್ಕಳ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಮಾತ್ರವಲ್ಲ ಲೋಕೋಪಯೋಗಿ ರಸ್ತೆಗಳೂ ಮಳೆಗಾಲದಲ್ಲಿ ದುಸ್ಥಿತಿಗೆ ತಲುಪಿವೆ. ಈ ರಸ್ತೆಗಳನ್ನು ಮಳೆಗಾಲ ಮುಗಿದ ಕೂಡಲೇ ದುರಸ್ತಿಗೊಳಿಸಬೇಕು ಎಂದಿದ್ದಾರೆ.

ನೇತ್ರಾವತಿ ನದಿಗೆ ಬಿದ್ದು 10 ಕಿಮೀ ಬಳಿಕ ಸಿಕ್ಕ ವೃದ್ಧೆ!

ಹಣಕಾಸಿನ ಕೊರತೆ ಇದ್ದರೆ, ಪೂರ್ವ ಮಂಜೂರಾತಿ ಪಡೆದು ದುರಸ್ತಿ ಕಾಮಗಾರಿ ನಡೆಸಬೇಕು. ಯಾವುದೇ ಕಾರಣಕ್ಕೂ ತಾಂತ್ರಿಕ ಕಾರಣ ಅಥವಾ ಹಣಕಾಸಿನ ನೆಪ ಹೇಳಿ ಕಾಮಗಾರಿ ನಡೆಸದೆ ಇರಬಾರದು. ಕೇಂದ್ರ ಮಾತ್ರವಲ್ಲ ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ಬೇಕಾದರೆ ನನ್ನ ಗಮನಕ್ಕೆ ತರಬೇಕು. ನಾನು ಅನುದಾನ ಒದಗಿಸಿಕೊಡುತ್ತೇನೆ ಎಂದು ನಳಿನ್‌ ಕುಮಾರ್‌ ಭರವಸೆ ನೀಡಿದರು.