Asianet Suvarna News Asianet Suvarna News

Chikkamagaluru: ತೋಟದಲ್ಲಿ ಕೆಲಸ ಮಾಡುವಾಗ ಕಾರ್ಮಿಕನ ಮೇಲೆ ಕರಡಿ ದಾಳಿ: ಗಂಭೀರ ಗಾಯ

ತೋಟದಲ್ಲಿ ಕೆಲಸ ಮಾಡುವಾಗ ಕಾರ್ಮಿಕನೊಬ್ಬನ ಮೇಲೆ ಕರಡಿ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ  ಕಳಸ ತಾಲ್ಲೂಕಿನ ಬಿಳಗಲ್ ತೋಟದಲ್ಲಿ ನಡೆದಿದೆ.

bear attack on worker in chikkamagaluru district gvd
Author
First Published Sep 1, 2022, 9:56 PM IST

ಚಿಕ್ಕಮಗಳೂರು (ಸೆ.01): ತೋಟದಲ್ಲಿ ಕೆಲಸ ಮಾಡುವಾಗ ಕಾರ್ಮಿಕನೊಬ್ಬನ ಮೇಲೆ ಕರಡಿ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ  ಕಳಸ ತಾಲ್ಲೂಕಿನ ಬಿಳಗಲ್ ತೋಟದಲ್ಲಿ ನಡೆದಿದೆ.

ಕೆಲಸ ಮಾಡುವಾಗ ಕಾರ್ಮಿಕನ ಮೇಲೆ ಕರಡಿ ದಾಳಿ: ತೋಟದಲ್ಲಿ ಕೆಲಸ ಮಾಡುವಾಗ ಕೂಲಿ ಕಾರ್ಮಿಕನ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ಬಿಳಗಲ್‍ನ ಕಾಫಿತೋಟದಲ್ಲಿ ನಡೆದಿದೆ. ಕರಡಿ ದಾಳಿಗೊಳಗಾದ ಕೂಲಿ ಕಾರ್ಮಿಕನನ್ನ ಬೆಳ್ಳಪ್ಪ ಎಂದು ಗುರುತಿಸಲಾಗಿದೆ. ಕಾರ್ಮಿಕ ಬೆಳ್ಳಪ್ಪ ತೋಟದಲ್ಲಿ ಕೆಲಸ ಮಾಡುವ ವೇಳೆ ಮರಿಗಳೊಂದಿಗೆ ತೋಟಕ್ಕೆ ಬಂದ ಕರಡಿ ಏಕಾಏಕಿ ದಾಳಿ ಮಾಡಿದೆ. ಕೂಡಲೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇತರೆ ಕಾರ್ಮಿಕರು ಅವರನ್ನ ಆಸ್ಪತ್ರೆಗೆ ಸೇರಿದ್ದಾರೆ. 

ಆದರೆ, ಕರಡಿ ದಾಳಿಯಿಂದ ಬೆಳ್ಳಪ್ಪನವರ ಒಂದು ಕಾಲು ಗಂಭೀರ ಗಾಯವಾಗಿದೆ. ಮಂಡಿಯಿಂದ ಕೆಳಬಾಗದಲ್ಲಿ ಮಾಂಸಖಂಡಗಳನ್ನ ಸಂಪೂರ್ಣವಾಗಿ ಕಿತ್ತು ಹಾಕಿದೆ. ಕೂಡಲೇ ಅವರನ್ನ ಕಳಸ ತಾಲೂಕು ಆಸ್ಪತ್ರೆ ದಾಖಲಿಸಿ ಗಂಭೀರ ಗಾಯಗೊಂಡಿದ್ದ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿ ಅವಾಂತರ: ಸುಮಲತಾ ಅಂಬರೀಶ್‌

ಕರಡಿ ಸೆರೆಗೆ ಜಂಪರದೊಡ್ಡಿಯಲ್ಲಿ ಮೊಕ್ಕಾಂ: ಸುರಪುರ ತಾಲೂಕಿನ ಕಕ್ಕೇರಾ ಹೋಬಳಿಯ ವ್ಯಾಪ್ತಿಯಲ್ಲಿ ಕರಡಿಯೊಂದು ಇಬ್ಬರ ಮೇಲೆ ದಾಳಿ ನಡೆಸಿದ್ದು, ಓರ್ವ ಯುವಕನ ಸ್ಥಿತಿ ಗಂಭೀರವಾಗಿದ್ದರೆ ಮತ್ತೊಬ್ಬರು ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಕಕ್ಕೇರಾ ಪುರಸಭೆಗೆ ಒಳಪಡುವ ಪುಳಾರದೊಡ್ಡಿಯಲ್ಲಿ ಕುರಿ ದೊಡ್ಡಿಯ ಹತ್ತಿರ ಯುವಕ ಯಂಕಪ್ಪ ಐದುಬಾವಿ ಮಲಗಿದ್ದಾಗ ಕರಡಿ ದಾಳಿ ಮಾಡಿದ್ದು, ಬಲಗೈ ಹಾಗೂ ಮುಖದ ಎಡಭಾಗದ ಎಲಬು ಮುರಿದಿದೆ. ಮುಖದ ಎಡಭಾಗವನ್ನು ತೀವ್ರವಾಗಿ ಪರಿಚಿದೆ. 

ಯುವಕನು ಕಿರುಚುತ್ತಿದ್ದಂತೆ, ಜನರು ಕಿರುಚುತ್ತಿದ್ದಂತೆ ಕರಡಿ ಕಾಲ್ಕಿತ್ತಿದೆ. ತೀವ್ರವಾಗಿ ಗಾಯಗೊಂಡ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಯುವಕನನ್ನು ರಾಯಚೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಜಂಪರದೊಡ್ಡಿಯಲ್ಲಿ ಕರಡಿಯೊಂದಿಗೆ ಸೆಣಸಾಡಿ ಜೀವ ಉಳಿಸಿಕೊಂಡ ರುದ್ರಪ್ಪ ಲಿಂಗಸುಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿ ಬಂದಿದ್ದಾನೆ. ವಿಷಯ ತಿಳಿಯುತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮ ಅಧ್ಯಕ್ಷ, ಶಾಸಕ ನರಸಿಂಹನಾಯಕ (ರಾಜೂಗೌಡ), ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಸೇರಿಕೊಂಡು ಕರಡಿ ಸೆರೆ ಹಿಡಿಯಲು ರಾತ್ರಿ ಹೊತ್ತಿನಲ್ಲೇ ಯತ್ನಿಸಿದರು. ಸುಮಾರು ಎರಡು ಗಂಟೆಗಳ ಕಾಲ ಶೋಧಿಸಿದರು. ಜಾಂಬುವಂತ ಮಾತ್ರ ಎಲ್ಲೂ ಕಾಣಲಿಲ್ಲ. ಅಧಿಕಾರಿಗಳನ್ನು ಹಿಂದೆ ಬಿಟ್ಟು ಸ್ವತಃ ಧೈರ್ಯವಾಗಿ ಮುಂದೆ ಸಾಗಿ ಟಾಚ್‌ರ್‍ ಹಾಕಿ ಕರಡಿಯನ್ನು ತಡಕಾಡಿದರು.

ADGP ಅಲೋಕ್‌ಕುಮಾರ್ ವಿರುದ್ಧ ಶಾಸಕ ಅಭಯ್ ಪಾಟೀಲ್, ಪ್ರಮೋದ್ ಮುತಾಲಿಕ್ ಗರಂ!

ಬಳಿಕ ಮಾತನಾಡಿದ ಶಾಸಕ ರಾಜೂಗೌಡ, ಸುರಪುರ ತಾಲೂಕಿನಲ್ಲಿ ಇಬ್ಬರ ಮೇಲೆ ಕರಡಿ ದಾಳಿ ನಡೆದಿರುವುದು ದುರ್ದೈವದ ಸಂಗತಿಯಾಗಿದೆ. ಗಾಯಾಳುಗಳಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ಕರಡಿ ಮತ್ತೊಬ್ಬರ ಮೇಲೆ ದಾಳಿ ಮಾಡುವ ಮುನ್ನವೇ ಸೆರೆಹಿಡಿದು ಜನರ ಜೀವ ಸಂರಕ್ಷಿಸಬೇಕೆಂದು ಅಧಿಕಾರಿಗಳಿಗೆ ಖಡಕ್‌ ಆಗಿ ಸೂಚಿಸಿದ ಅವರು, ಕಕ್ಕೇರಾ ಹೋಬಳಿಯ ಜನರು ಭಯ ಪಡುವ ಅಗತ್ಯವಿಲ್ಲ. ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಹಿಡಿಯಲು ಶ್ರಮಿಸುತ್ತಿದ್ದಾರೆ. ಕರಡಿ ಕಂಡಕೂಡಲೇ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

Follow Us:
Download App:
  • android
  • ios