ಕಾವೇರಿ ತಟದಲ್ಲಿ ಪ್ರವಾಹ ಉಂಟಾಗದಂತೆ ಎಚ್ಚರ ವಹಿಸಿ: ಶಾಸಕ ಮಂಥರ್ ಗೌಡ
ಮಳೆಗಾಲ ಅವಧಿಯಲ್ಲಿ ಯಾವುದೇ ಸಂದರ್ಭ ಕಾವೇರಿ ಮತ್ತು ಹಾರಂಗಿ ತಟದಲ್ಲಿ ಪ್ರವಾಹ ಉಂಟಾಗದಂತೆ ಎಚ್ಚರ ವಹಿಸಲು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕುಶಾಲನಗರ (ಜು.2) ಮಳೆಗಾಲ ಅವಧಿಯಲ್ಲಿ ಯಾವುದೇ ಸಂದರ್ಭ ಕಾವೇರಿ ಮತ್ತು ಹಾರಂಗಿ ತಟದಲ್ಲಿ ಪ್ರವಾಹ ಉಂಟಾಗದಂತೆ ಎಚ್ಚರ ವಹಿಸಲು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹಾರಂಗಿ ಪ್ರವಾಸಿ ಮಂದಿರದಲ್ಲಿ ನಡೆದ ಕಾವೇರಿ ನೀರಾವರಿ ನಿಗಮ, ಅರಣ್ಯ ಇಲಾಖೆ ಮತ್ತು ವಿದ್ಯುತ್ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ಯಾವುದೇ ಸಂದರ್ಭ ನದಿ ನೀರು ಬಡಾವಣೆಗಳಿಗೆ ನುಗ್ಗದಂತೆ ಎಚ್ಚರವಹಿಸುವುದು. ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಾಡುವ ಸಂದರ್ಭ ನಿಯಮಗಳನ್ನು ಪಾಲಿಸುವುದು. ನದಿ ತಟದ ಬಡಾವಣೆಗಳು ಪ್ರವಾಹ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸುವಂತೆ ಸೂಚನೆ ನೀಡಿದರು.
ಆರ್ ಅಶೋಕ್ ಡಿಎನ್ಎ ಬಗ್ಗೆ ಮಾತನಾಡಲು ಮೆಡಿಕಲ್ ಓದಿದ್ದಾರೆಯೇ? ಶಾಸಕ ಮಂತರ್ ಗೌಡ ಪ್ರಶ್ನೆ
ಹಾರಂಗಿ ಜಲಾಶಯದ ಹೂಳೆತ್ತುವ ಯೋಜನೆ ವಿಳಂಬವಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು, ಇಲ್ಲವಾದಲ್ಲಿ ಗುತ್ತಿಗೆದಾರರನ್ನು ಬದಲಾಯಿಸಲು ಸರ್ಕಾರದ ಗಮನಕ್ಕೆ ತರುವಂತೆ ಸಲಹೆ ನೀಡಿದರು.
ಹಾರಂಗಿ ಯೋಜನೆಗಳಿಗೆ ಸಂಬಂಧಿಸಿದಂತೆ ಇರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಶಾಸಕರು ಮಾಹಿತಿ ಪಡೆದರು. ಯಾವುದೇ ಕಾಮಗಾರಿಗಳು ವಿಳಂಬವಾಗದೆ ಇರುವಂತೆ ಗಮನಹರಿಸಬೇಕು. ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಕಿವಿಮಾತು ಹೇಳಿದರು. ಜನರಿಂದ ದೂರು ಬರದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದ ಶಾಸಕರು ತಪ್ಪು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
Kodagu: ವೈಯಕ್ತಿಕ ಟೀಕೆ ಬಿಟ್ಟು ಅಭಿವೃದ್ಧಿ ಬಗ್ಗೆ ಹೇಳಿ: ಅಪ್ಪಚ್ಚು ರಂಜನ್‌ಗೆ ಮಂತರ್ ಗೌಡ ಸವಾಲು
ಕಚೇರಿಗಳಲ್ಲಿ ಯಾವುದೇ ರೀತಿಯ ಅನಾವಶ್ಯಕ ದುಂದು ವೆಚ್ಚ ಗಳಿಗೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದ ಶಾಸಕರು, ಸರ್ಕಾರಿ ಹಣ ಪೋಲಾಗದಂತೆ ಎಚ್ಚರವಹಿಸುವಂತೆ ತಿಳಿಸಿದರು.
ಕುಶಾಲನಗರ ಸಾಯಿ ಬಡಾವಣೆ, ಕುವೆಂಪು ಬಡಾವಣೆ ಪ್ರವಾಹದಿಂದ ಜನರಿಗೆ ಸಮಸ್ಯೆ ಆಗದಂತೆ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ರಘುಪತಿ, ಕಾರ್ಯಪಾಲಕ ಅಭಿಯಂತರದ ಪುಟ್ಟಸ್ವಾಮಿ, ಅರಣ್ಯ ಇಲಾಖೆ ಡಿಎಫ್‌ಒ ಪೂವಯ್ಯ ಮತ್ತಿತರ ಅಧಿಕಾರಿಗಳು ಇದ್ದರು.