ಬೆಂಗಳೂರು (ಅ.20):  ಆರ್ಥಿಕ ಸಂಕಷ್ಟನಿಭಾಯಿಸಲು ಮೂಲೆ ನಿವೇಶನಗಳನ್ನು ಹರಾಜಿಗಿಟ್ಟು ಆದಾಯ ಸಂಗ್ರಹಕ್ಕೆ ಮುಂದಾಗಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಖಾತೆ ಬದಲಾವಣೆ, ಖಾಲಿ ನಿವೇಶನಗಳ ಮೇಲೆ ದುಬಾರಿ ದಂಡ ವಿಧಿಸುವ ಮೂಲಕ ನಿವೇಶನಗಳ ಮಾಲಿಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ.

ಕೋವಿಡ್‌-19 ಪಿಡುಗಿನಿಂದ ಜನ ಸಾಮಾನ್ಯರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ನಡುವೆಯೇ ಬಿಡಿಎ, ಖಾತಾ ವರ್ಗಾವಣೆ, ನಿವೇಶನ ನೋಂದಣಿ, ಖಾಲಿ ನಿವೇಶನಗಳ ದಂಡ ಮತ್ತು ನಿರ್ವಹಣೆ ಶುಲ್ಕವನ್ನು ಪರಿಷ್ಕರಿಸಿದ್ದು ದ್ವಿಗುಣ ಮಾಡಿ ಆದೇಶಿಸಿದೆ. ಇದರಿಂದ ಆರ್ಥಿಕ ಸಂಕಷ್ಟದಿಂದ ಮನೆ ಕಟ್ಟಲಾಗದೆ ನಿವೇಶನಗಳನ್ನು ಖಾಲಿ ಬಿಟ್ಟಮಾಲಿಕರು ಮತ್ತು ನಿವೇಶನಗಳನ್ನು ನೋಂದಣಿ ಮಾಡಿಕೊಳ್ಳುವವರು ದ್ವಿಗುಣ ಶುಲ್ಕವನ್ನು ಪಾವತಿಸಬೇಕಾಗಿದೆ.

BDAಗೆ ತಲೆನೋವಾದ ಬೃಹತ್‌ ರಸ್ತೆ ಕಾಮಗಾರಿ ಭೂ ವಿವಾದ ..

ಬಿಡಿಎದಿಂದ ನಿವೇಶನಗಳನ್ನು ಖರೀದಿಸಿದ ಐದು ವರ್ಷಗಳ ಒಳಗಾಗಿ ಮಾಲಿಕರು ಮನೆ ಅಥವಾ ಕಟ್ಟಡಗಳನ್ನು ಕಟ್ಟಿಕೊಳ್ಳಬೇಕು. ಇಲ್ಲದಿದ್ದರೆ ದಂಡ ವಿಧಿಸುವ ನಿಯಮ ಬಿಡಿಎನಲ್ಲಿ ಇದೆ. ಒಂದು ವೇಳೆ ಮಾಲಿಕರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದರೆ ಬಿಡಿಎಗೆ ಮನವಿ ಪತ್ರ ನೀಡಿದರೆ ಒಂದರೆಡು ವರ್ಷ ಅವಧಿ ವಿಸ್ತರಿಸುವ ವ್ಯವಸ್ಥೆಯೂ ಇದೆ. ಆದರೆ ನಿಗದಿತ ಅವಧಿಯಲ್ಲಿ ಮನೆಗಳನ್ನು ಕಟ್ಟದಿದ್ದರೆ ದಂಡ ಹಾಕಲಾಗುತ್ತದೆ.
 
ಸುತ್ತಳತೆ ಹಿಂದಿನ ಶುಲ್ಕ (.) ಪರಿಷ್ಕೃತ ದರ(.)

ಖಾಲಿ ನಿವೇಶನಕ್ಕೆ ದಂಡ

20/30 5 ಸಾವಿರ 5 ಸಾವಿರ

20/30 ಜಾಸ್ತಿ 30/40ಕ್ಕಿಂತ ಕಡಿಮೆ 10 ಸಾವಿರ 15 ಸಾವಿರ

30/40 40 ಸಾವಿರ 60 ಸಾವಿರ

30/40ಕ್ಕಿಂತ ಹೆಚ್ಚು 40/60ಕ್ಕಿಂತ ಕಡಿಮೆ 80 ಸಾವಿರ 1.20 ಲಕ್ಷ

40/60ಕ್ಕಿಂತ ಹೆಚ್ಚು 50/80ಕ್ಕಿಂತ ಕಡಿಮೆ 2.50 ಲಕ್ಷ 3.75 ಲಕ್ಷ

50/80ಕ್ಕಿಂತ ಹೆಚ್ಚು 4 ಲಕ್ಷ 6ಲಕ್ಷ

ಖಾತಾ ವರ್ಗಾವಣೆ

ನಿವೇಶನ ಅಳತೆ ಹಳೇ ಶುಲ್ಕ ಪರಿಷ್ಕೃತ

20/40 500 1 ಸಾವಿರ

30/40 2 ಸಾವಿರ 4 ಸಾವಿರ

40/60 5 ಸಾವಿರ 10 ಸಾವಿರ

50/80 10 ಸಾವಿರ 20 ಸಾವಿರ

50/80ಕ್ಕಿಂತ ಹೆಚ್ಚು 15 ಸಾವಿರ 30 ಸಾವಿರ

ವಿಭಾಗ ಹಿಂದಿನ ದರ ಪರಿಸ್ಕೃತ ದರ

ಫ್ಲಾಟ್‌ ಖರೀದಿ ಎಸ್ಸಿ/ಎಸ್ಟಿ ಇತರೆ ಎಸ್ಟಿ/ಎಸ್ಟಿ ಇತರೆ

ಅರ್ಜಿ ಶುಲ್ಕ 200 400 500 1 ಸಾವಿರ

ನೋಂದಣಿ ಶುಲ್ಕ 100 200 500 1 ಸಾವಿರ

ನಿವೇಶನ ಖರೀದಿ ಎಸ್ಸಿ/ಎಸ್ಟಿ ಇತರೆ ಎಸ್ಟಿ/ಎಸ್ಟಿ ಇತರೆ

ಅರ್ಜಿ ಶುಲ್ಕ 200 400 500 1 ಸಾವಿರ

ನೋಂದಣಿ ಶುಲ್ಕ

20/30 200 1 ಸಾವಿರ 1 ಸಾವಿರ 1,500

30/40 2 ಸಾವಿರ 2 ಸಾವಿರ 3 ಸಾವಿರ 5 ಸಾವಿರ

40/60 4 ಸಾವಿರ 4 ಸಾವಿರ 5 ಸಾವಿರ 10 ಸಾವಿರ

50/80 5 ಸಾವಿರ 5 ಸಾವಿರ 7 ಸಾವಿರ 15 ಸಾವಿರ

ನಿರ್ವಹಣೆ ಶುಲ್ಕ(ಆಸ್ತಿ ತೆರಿಗೆಯೊಂದಿಗೆ ಸಂಗ್ರಹ)

20/30 .100/ತಿಂಗಳು

20/30 ಜಾಸ್ತಿ 30/40ಕ್ಕಿಂತ ಕಡಿಮೆ .150/ತಿಂಗಳು

30/40ಕ್ಕಿಂತ ಹೆಚ್ಚು 40/60ಕ್ಕಿಂತ ಕಡಿಮೆ .200/ತಿಂಗಳು

40/60ಕ್ಕಿಂತ ಹೆಚ್ಚು 50/80ಕ್ಕಿಂತ ಕಡಿಮೆ .250/ತಿಂಗಳು

50/80ಕ್ಕಿಂತ ಹೆಚ್ಚು .300 ರು./ತಿಂಗಳು

ಕೋವಿಡ್‌ ಸಂದರ್ಭದಲ್ಲಿ ದರ ಪರಿಷ್ಕೃರಿಸುವ ಅಗತ್ಯವಿರಲಿಲ್ಲ. ಬಿಡಿಎ ಲೇಔಟ್‌ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುತ್ತಿಲ್ಲ. ಈವರೆಗೂ ಒಂದು ಯೋಜನೆಯನ್ನೂ ಶೇ.100ರಷ್ಟುಪೂರ್ಣ ಮಾಡಿಲ್ಲ. ಆದರೆ, ಬಿಡಿಎದಿಂದ ನಿವೇಶನ ಖರೀದಿಸಿದ ತಪ್ಪಿಗೆ ಮನಸ್ಸಿಗೆ ಬಂದಂತೆ ದಂಡ ಹಾಕಿದರೆ ಕಟ್ಟಬೇಕಾದ ಪರಿಸ್ಥಿತಿ ಮಾಲಿಕರದ್ದು. ಸದ್ಯದ ಪರಿಸ್ಥಿತಿಯಲ್ಲಿ ಪರಿಷ್ಕೃತ ದರವನ್ನು ರದ್ದು ಮಾಡಿ ಹಳೆಯದನ್ನೇ ಮುಂದುವರೆಸಲಿ.

-ಸೂರ್ಯಕಿರಣ್‌, ವಕ್ತಾರ, ನಾಡಪ್ರಭು ಕೆಂಪೇಗೌಡ ಲೇಔಟ್‌ ಓಪನ್‌ ಫೋರಂ.