Asianet Suvarna News Asianet Suvarna News

ಬೆಂಗಳೂರು: ಕೆಂಪೇಗೌಡ ಲೇಔಟ್‌ಗಾಗಿ ಅರಣ್ಯ ಜಾಗ ಒತ್ತುವರಿ ಮಾಡಿದ್ದ ಬಿಡಿಎ..!

ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಯನ್ನು ಸಂಪರ್ಕಿಸುವ ಸುಮಾರು 10.7 ಕಿ.ಮೀ. ಉದ್ದದ ಮೇಜರ್‌ ಆರ್ಟಿರಿಯಲ್‌ ರಸ್ತೆಯ ನಿರ್ಮಾಣಕ್ಕೆ ಅಡ್ಡಿಯುಂಟಾಗಿದ್ದ ಈ ವಿವಾದಿತ ಭೂಮಿಯನ್ನು ವಶಕ್ಕೆ ಪಡೆದಿದ್ದರಿಂದ 1 ಕಿ.ಮೀ. ರಸ್ತೆಯ ನಿರ್ಮಾಣ ಕಾಮಗಾರಿ ಸುಗಮವಾಗಿ ನಡೆಯಲು ಅನುಕೂಲವಾಗಲಿದೆ.  

BDA Encroached Forest Land for Kempegowda Layout in Bengaluru grg
Author
First Published Sep 14, 2023, 7:58 AM IST

ಬೆಂಗಳೂರು(ಸೆ.14): ನಾಡಪ್ರಭು ಕೆಂಪೇಗೌಡ ಬಡಾವಣೆ (ಎನ್‌ಪಿಕೆಎಲ್‌) ನಿರ್ಮಾಣ ಸಂಬಂಧ ಬಾಕಿಯಿದ್ದ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿರುವ ಬಿಡಿಎ, ಮೇಜರ್‌ ಆರ್ಟಿರಿಯಲ್‌ ರಸ್ತೆ(ಎಂಎಆರ್‌) ನಿರ್ಮಾಣ ಕಾಮಗಾರಿಗೆ ಅಗತ್ಯವಿದ್ದ 15 ಎಕರೆ ಭೂಮಿಯನ್ನು ವಶಪಡಿಸಿಕೊಂಡಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಭೇಟಿ ಕೊಟ್ಟ ಬೆನ್ನಲ್ಲೇ ಬಿಡಿಎ ವಿಶೇಷ ಕಾರ್ಯಪಡೆ, ಎಂಜಿನಿಯರ್‌ಗಳು, ಭೂಸ್ವಾಧೀನ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರ ನೆರವಿನಿಂದ ಭೂಸ್ವಾಧೀನಕ್ಕೆ ಅಧಿಸೂಚನೆಯಾಗಿದ್ದರೂ ಭೂಮಾಲಿಕರು ತೆರವುಗೊಳಿಸದ 10 ಆಸ್ತಿಗಳಲ್ಲಿ ಇದ್ದ ಕಟ್ಟಡಗಳು, ಬೇಲಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದರು. ಕೆಂಚನಪುರದಲ್ಲಿ 1.20 ಎಕರೆ, ಕನ್ನಳ್ಳಿಯಲ್ಲಿ 5.11 ಎಕರೆ ಮತ್ತು ಸೂಲಿಕೆರೆಯಲ್ಲಿ 8.09 ಎಕರೆ ಭೂಮಿ ವಶಕ್ಕೆ ಪಡೆಯಲಾಗಿದೆ.

Bengaluru: ಕೆಂಪೇಗೌಡ ಲೇಔಟ್‌ನಲ್ಲಿ ಭೂಸ್ವಾಧೀನವೇ ಮುಗಿದಿಲ್ಲ

ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಯನ್ನು ಸಂಪರ್ಕಿಸುವ ಸುಮಾರು 10.7 ಕಿ.ಮೀ. ಉದ್ದದ ಮೇಜರ್‌ ಆರ್ಟಿರಿಯಲ್‌ ರಸ್ತೆಯ ನಿರ್ಮಾಣಕ್ಕೆ ಅಡ್ಡಿಯುಂಟಾಗಿದ್ದ ಈ ವಿವಾದಿತ ಭೂಮಿಯನ್ನು ವಶಕ್ಕೆ ಪಡೆದಿದ್ದರಿಂದ 1 ಕಿ.ಮೀ. ರಸ್ತೆಯ ನಿರ್ಮಾಣ ಕಾಮಗಾರಿ ಸುಗಮವಾಗಿ ನಡೆಯಲು ಅನುಕೂಲವಾಗಲಿದೆ ಎಂದು ಬಿಡಿಎ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಭೂ ಮಾಲಿಕರ ತೀವ್ರ ವಿರೋಧ

ಬಿಡಿಎ ಅಧಿಕಾರಿಗಳು ಭೂಸ್ವಾಧೀನಕ್ಕೆ ಮುಂದಾಗುತ್ತಿದ್ದಂತೆ ಕನ್ನಳ್ಳಿ, ಕೆಂಚನಾಪುರ ಮತ್ತು ಸೂಲಿಕೆರೆಯಲ್ಲಿ ಭೂಮಾಲಿಕರ ಕುಟುಂಬಗಳು ಭಾರೀ ವಿರೋಧ ವ್ಯಕ್ತಪಡಿಸಿದವು. ಹೀಗಾಗಿ ಬೆಳಗ್ಗೆ 9 ಗಂಟೆಗೆ ಆರಂಭವಾಗಬೇಕಿದ್ದ ಭೂಸ್ವಾಧೀನ ಪ್ರಕ್ರಿಯೆಗೆ ಅಡಚಣೆಯುಂಟಾಗಿದ್ದು, ಮಧ್ಯಾಹ್ನದ ನಂತರ ಪೊಲೀಸರು ಮಧ್ಯಪ್ರವೇಶಿಸಿ ಬಿಗುವಿನ ವಾತಾವರಣ ತಿಳಿಗೊಳಿಸಿದರು. ಬಿಡಿಎ ಅಧಿಕಾರಿಗಳು ಭೂಮಾಲಿಕರ ಮನವೊಲಿಸಲು ಸಾಕಷ್ಟುಶ್ರಮಿಸಬೇಕಾಯಿತು. ನಂತರ ಮೂರು ಹಳ್ಳಿಗಳಲ್ಲಿ ಒಟ್ಟು 15 ಎಕರೆ ಭೂಮಿಯನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಂಡರು.

ಬೆಂಗಳೂರು: ಕೆಂಪೇಗೌಡ ಲೇಔಟ್‌ ರಸ್ತೆಗೆ 3 ಅಂಡರ್‌ಪಾಸ್‌

ಪರಿಹಾರ ಕೊಟ್ಟಿದ್ದರೂ ಭೂಮಿ ಕೊಟ್ಟಿರಲಿಲ್ಲ

ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆಯಾದ ನಂತರ ಭೂಮಿ ಬಿಡಿಎ ಸ್ವತ್ತು. ಯೋಜನೆಗೆ ನಿಗದಿಪಡಿಸಿದ ಭೂಮಿಯ ಮಾಲಿಕರಿಗೆ ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ನಿವೇಶನಗಳನ್ನು ಕೊಡಲಾಗುತ್ತಿದೆ. ಈಗಾಗಲೇ ಅನೇಕರಿಗೆ ನಿವೇಶನ ನೀಡುವ ಕುರಿತು ಪ್ರಸ್ತಾವನೆ ಕಳುಹಿಸಲಾಗಿದೆ. ಕೆಲವರು ನಿವೇಶನ ನೋಂದಣಿ ಮಾಡಿಸಿಕೊಳ್ಳುವುದಷ್ಟೇ ಬಾಕಿ ಇದ್ದು, ಇನ್ನು ಕೆಲವರಿಗೆ ನಿವೇಶನ ಹಂಚಿಕೆ ಕುರಿತು ಪ್ರಸ್ತಾವನೆ ಕಳುಹಿಸಲಾಗಿದೆ. ಹೀಗಿದ್ದರೂ ಭೂಮಾಲಿಕರು ಭೂಮಿ ನೀಡಲು ನಿರಾಕರಿಸಿದ್ದರು. ತಮ್ಮ ಹೆಸರಿಗೆ ಮಂಜೂರಾದ ಭೂಮಿಯ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ವಾದಿಸುತ್ತಿದ್ದಾರೆ ಹೊರತು ನೋಂದಣಿ ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ.

ಪ್ರಸ್ತುತ ಮಾಗಡಿ ರಸ್ತೆ-ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಜರ್‌ ಆರ್ಟಿರಿಯಲ್‌ ರಸ್ತೆಯಲ್ಲಿ ಈಗಾಗಲೇ 7.71 ಕಿ.ಮೀ. ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಈ ಪೈಕಿ ಒಟ್ಟು 2 ಕಿ.ಮೀ. ಕಾರ್ಯ ಪೂರ್ಣಗೊಂಡಿದೆ. ಇನ್ನೂ ಸುಮಾರು 2 ಕಿ.ಮೀ ರಸ್ತೆಗೆ ಅಗತ್ಯವಿರುವ ಭೂಮಿ ಸ್ವಾಧೀನವಾಗಿಲ್ಲ. ಭೂವಿವಾದಗಳನ್ನು ಬಗೆಹರಿಸಿಕೊಂಡು ಭೂಮಾಲಿಕರಿಗೆ ಭೂಮಿಯನ್ನು ಶೀಘ್ರವೇ ವಶಕ್ಕೆ ಪಡೆಯುವುದಾಗಿ ಎಂಜಿನಿಯರ್‌ಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

Follow Us:
Download App:
  • android
  • ios