Asianet Suvarna News Asianet Suvarna News

ಸೋಂಕಿತರ ಅಂತ್ಯಕ್ರಿಯೆ ವೆಚ್ಚ ಭರಿಸಲಿದೆ BBMP

ಇನ್ನು ಮುಂದೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯ ವೆಚ್ಚವನ್ನು ಬಿಬಿಎಂಪಿಯೇ ಭರಿಸಲಿದ್ದು, ಸೋಂಕಿತರ ಅಂತ್ಯಕ್ರಿಯೆಗೆ ನಗರದ ನಾಲ್ಕು ಕಡೆ ವಿದ್ಯುತ್‌ ಚಿತಾಗಾರ ನಿಗದಿಗೊಳಿಸಿದೆ.

BBMP to look after funerals of covid19 victims
Author
Bangalore, First Published Jul 26, 2020, 9:01 AM IST

ಬೆಂಗಳೂರು(ಜು.26): ಇನ್ನು ಮುಂದೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯ ವೆಚ್ಚವನ್ನು ಬಿಬಿಎಂಪಿಯೇ ಭರಿಸಲಿದ್ದು, ಸೋಂಕಿತರ ಅಂತ್ಯಕ್ರಿಯೆಗೆ ನಗರದ ನಾಲ್ಕು ಕಡೆ ವಿದ್ಯುತ್‌ ಚಿತಾಗಾರ ನಿಗದಿಗೊಳಿಸಿದೆ.

"

ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ವಿಳಂಬವಾಗುತ್ತಿದೆ, ಒಂದೇ ಕಡೆ ಕೋವಿಡ್‌ ಹಾಗೂ ಸಹಜ ಕಾರಣಗಳಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ ಎಂಬ ಆಕ್ಷೇಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು: ಕೋವಿಡ್‌ ಆರೈಕೆ ಕೇಂದ್ರ ಪರಿಶೀಲಿಸಿದ ಸಚಿವ ಸೋಮಣ್ಣ

ಪ್ರಮುಖವಾಗಿ ಕೊರೋನಾ ಸೋಂಕಿತ ಮೃತದೇಹದ ಅಂತ್ಯಕ್ರಿಯೆ ಶುಲ್ಕ 250 ರು. ವಿನಾಯಿತಿ ನೀಡಲಾಗಿದೆ. ಜೊತೆಗೆ ಪ್ರತಿ ಸೋಂಕಿನ ಶವ ಸಂಸ್ಕಾರ ನೆರವೇರಿಸುವ ಸಿಬ್ಬಂದಿಗೆ 500 ರು. ಪ್ರೋತ್ಸಾಹ ಧನ, ಶವ ಸಂಸ್ಕಾರಕ್ಕೆ ಬಳಸುವ ಚಟ್ಟಕ್ಕೆ 900 ರು. ಹಾಗೂ ಶವ ಸಂಸ್ಕಾರದ ಬೂದಿ ಸಂಗ್ರಹಿಸುವ ಪಾತ್ರೆ ಅಥವಾ ಮಡಿಕೆಗೆ 100ರು. ಶುಲ್ಕವನ್ನೂ ಸಹ ಪಾಲಿಕೆಯೇ ಭರಿಸಲಿದೆ.

600 ಲ್ಯಾಬ್‌ ಟೆಕ್ನಿಶಿಯನ್‌ ನೇಮಕಕ್ಕೆ ಸರ್ಕಾರ ಅಸ್ತು

ಕೊರೋನಾ ಸೋಂಕಿತರ ಶವ ಸಂಸ್ಕಾರ ವೆಚ್ಚವನ್ನು ನೈಸರ್ಗಿಕ ವಿಕೋಪ ಎಂದು ಪರಿಗಣಿಸಿ ಪಾಲಿಕೆಯ 2020-21ನೇ ಸಾಲಿನ ಬಜೆಟ್‌ನಲ್ಲಿ ಪ್ರತಿ ತಿಂಗಳು ಪಾಲಿಕೆಯಿಂದಲೇ ಭರಿಸಲು ನಿರ್ಧರಿಸಲಾಗಿದೆ ಎಂದು ವಿಶೇಷ ಆಯುಕ್ತ (ಆರೋಗ್ಯ ಹಾಗೂ ಘನತ್ಯಾಜ್ಯ ನಿರ್ವಹಣೆ) ಡಿ.ರಂದೀಪ್‌ ಆದೇಶದಲ್ಲಿ ತಿಳಿಸಿದ್ದಾರೆ.

ನಾಲ್ಕು ಪ್ರತ್ಯೇಕ ಚಿತಾಗಾರ:

ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ತ್ವರಿತವಾಗಿ ನಡೆಯಬೇಕು, ಮಾರ್ಗಸೂಚಿ ಪ್ರಕಾರ ಅಂತ್ಯಸಂಸ್ಕಾರ ನಡೆಸಬೇಕು ಎಂಬ ಕಾರಣದಿಂದ ಆರ್‌.ಆರ್‌.ನಗರ, ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ ಹೀಗೆ 4 ವಲಯಗಳಲ್ಲಿ ಪ್ರತ್ಯೇಕ ವಿದ್ಯುತ್‌ ಚಿತಾಗಾರ ನಿಗದಿ ಪಡಿಸಲಾಗಿದೆ

Follow Us:
Download App:
  • android
  • ios