Asianet Suvarna News Asianet Suvarna News

ಕ್ರಿಸ್‌ಮಸ್‌, ಹೊಸ ವರ್ಷಾಚರಣೆ: ಮಾರ್ಗಸೂಚಿ ಪಾಲನೆ ಕಡ್ಡಾಯ..!

ಚರ್ಚ್‌ ಸ್ಟ್ರೀಟ್‌, ಎಂಜಿ, ಬ್ರಿಗೇಡ್‌ ರಸ್ತೆಗಳಲ್ಲಿ ಗುಂಪು ಸೇರೋದು ನಿಷಿದ್ಧ| ಅಧಿಕಾರಿಗಳಿಂದ ನಿಯಮ ಪಾಲನೆ ಪರಿಶೀಲನೆ| ದೇವಸ್ಥಾನ, ಚರ್ಚ್‌, ಮಸೀದಿಗಳಲ್ಲಿ ಹೆಚ್ಚು ಜನ ಸೇರದಂತೆ ಆಯೋಜಕರು ಕ್ರಮ| ಪಬ್‌, ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಡಿಜೆ, ನೃತ್ಯ, ವಿಶೇಷ ಕಾರ್ಯಕ್ರಮ ನಿಷೇಧ| 

BBMP  Released the Guidelines for Christmas New Year grg
Author
Bengaluru, First Published Dec 24, 2020, 7:52 AM IST

ಬೆಂಗಳೂರು(ಡಿ.24): ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಹೊಸ ವರ್ಷಾಚರಣೆ ಮತ್ತು ಕ್ರಿಸ್‌ಮಸ್‌ ಆಚರಿಸುವ ಸಂಬಂಧ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.

"

ಕೊರೋನಾ ಸೋಂಕು ಎರಡನೇ ಅಲೆ ಹಾಗೂ ರೂಪಾಂತರ ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದೇಶದ ಅನ್ವಯ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರ ಅನ್ವಯ ಚರ್ಚ್‌ ಸ್ಟ್ರೀಟ್‌, ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ ಹಾಗೂ ಈ ಪ್ರಮುಖ ರಸ್ತೆ​ಗ​ಳನ್ನು ಸಂರ್ಪ​ಕಿ​ಸುವ ಎಲ್ಲ ರಸ್ತೆ​ಗಳು, ಕೋರ​ಮಂಗಲ, ಇಂದಿ​ರಾ​ನ​ಗರ ಹಾಗೂ ವೈಟ್‌​ಫೀಲ್ಡ್‌ ರಸ್ತೆ​ಗಳಲ್ಲಿ ಗುಂಪು ಸೇರು​ವಂತಿಲ್ಲ.

ಕೋವಿಡ್‌ ನಿಯಮ ಪಾಲನೆ ಪರಿ​ಶೀ​ಲನೆಗೆ ನೋಡಲ್‌ ಅಧಿ​ಕಾ​ರಿಗಳ ನೇಮಕ ಮಾಡಲಾಗುವುದು. ಸೋಂಕಿನ ಲಕ್ಷ​ಣ​ಗ​ಳಾದ ಕೆಮ್ಮು, ಜ್ವರ ಹಾಗೂ ಗಂಟಲು ನೋವಿನ ಲಕ್ಷಣ ಇರು​ವ​ವರು ಹಾಗೂ ಥರ್ಮಲ್‌ ಸ್ಕ್ರೀನಿಂಗ್‌ ಪರೀಕ್ಷೆ ವೇಳೆ ದೇಹದ ತಾಪ​ಮಾನ 37.5 ಡಿಗ್ರಿ ಸೆಲ್ಷಿಯಸ್‌ಗಿಂತ ಜಾಸ್ತಿ ಇದ್ದರೆ ಕೂಡಲೇ ಪ್ರತ್ಯೇ​ಕಿಸಿ ವೈದ್ಯ​ರಿಗೆ ಮತ್ತು ಪಾಲಿ​ಕೆಯ ಅಧಿ​ಕಾ​ರಿ​ಗ​ಳಿಗೆ ಮಾಹಿತಿ ನೀಡ​ಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ರಾಜ್ಯದಲ್ಲಿ ನೈಟ್​ ಕರ್ಫ್ಯೂ ಜಾರಿ: ಏನಿರುತ್ತೆ? ಏನಿರಲ್ಲ? ಮಾರ್ಗಸೂಚಿ ಪ್ರಕಟ

ದೇವಸ್ಥಾನ, ಚರ್ಚ್‌, ಮಸೀದಿಗಳಲ್ಲಿ ಹೆಚ್ಚು ಜನ ಸೇರದಂತೆ ಆಯೋಜಕರು ಕ್ರಮ ಕೈಗೊಳ್ಳಬೇಕು. ಹಸ್ತಲಾಘವ ಮತ್ತು ಆಲಿಂಗನ ನಿಷೇಧಿಸಿದೆ. ಪಬ್‌, ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಡಿಜೆ, ನೃತ್ಯ, ವಿಶೇಷ ಕಾರ್ಯಕ್ರಮ ನಿಷೇಧಿಸಿದೆ. ಪ್ರತಿನಿತ್ಯದ ಕಾರ್ಯಕ್ರಮ ನಡೆಸುವುದಕ್ಕೆ ನಿರ್ಬಂಧವಿಲ್ಲ ಎಂದು ಆಯು​ಕ್ತ​ ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಬಿಬಿಎಂಪಿ ಹೇಳಿದ್ದು

*65 ವರ್ಷ​ಕ್ಕಿಂತ ಮೇಲ್ಪಟ್ಟ,10 ವರ್ಷದ ಒಳ​ಗಿನ ಮಕ್ಕಳು ಮನೆ​ಯಲ್ಲೇ ಇರ​ಬೇಕು
*ಕ್ಲಬ್‌, ಬಾರ್‌, ಹೋಟೆಲ್‌, ರೆಸ್ಟೋ​ರೆಂಟ್‌​ಗ​ಳಲ್ಲಿ ಥರ್ಮಲ್‌ ಸ್ಕ್ಯಾನಿಂಗ್‌, ಸ್ಯಾನಿ​ಟೈ​ಸರ್‌ ಕಡ್ಡಾಯ
*ಕಾಂಟ್ಯಾಕ್ಟ್ ಲೆಸ್‌ ಸೇವೆ ಹಾಗೂ ಆನ್‌​ಲೈನ್‌ ಸೇವೆಗೆ ಒತ್ತು, ಇ-ಟೋಕನ್‌ ನೀಡ​ಬೇಕು.
*ಡಿ.30ರಿಂದ ಜ.2ರವರೆಗೆ ಎಲ್ಲ ರೀತಿಯ ವಿಶೇಷ ಸಣ್ಣ, ದೊಡ್ಡ ಔತಣ ಕೂಟ, ಕಾರ್ಯ​ಕ್ರಮ,ಸಭೆ, ಸಮಾ​ರಂಭ​ ನಿಷೇಧ.
*ವಿಶೇಷ ಸಂಘ​ಟಿತ ಸಭೆ ಅಥವಾ ಟಿಕೆಟ್‌ ಪಡೆದ ಕಾರ್ಯ​ಕ್ರಮಕ್ಕೆ ಅವ​ಕಾಶ ಇಲ್ಲ.
*ಉಗು​ಳು​ವುದು ನಿಷೇಧ, ಆರೋಗ್ಯ ಸೇತು ಕಡ್ಡಾ​ಯ.
*ಮುಚ್ಚಿ​ದ ಸ್ಥಳ​ಗ​ಳಲ್ಲಿ ಕೇವಲ 200 ಜನಕ್ಕೆ ಮಾತ್ರ ಅವ​ಕಾಶ.
*ಹೆಚ್ಚು ಜನ ಸೇರದಿರಲು ಆನ್‌​ಲೈನ್‌ ಸೇವೆ, ಟೋಕನ್‌ ಅಥವಾ ಸರದಿ ಸಾಲಿನ ವ್ಯವ​ಸ್ಥೆ ಕಲ್ಪಿ​ಸ​ಬೇಕು.
*ವಸತಿ ಸಮು​ಚ್ಛಯ ಹಾಗೂ ಉಪ​ಹಾರ ಸಭಾಂಗ​ಣ​ದಲ್ಲೂ ನಿಯಮ ಪಾಲನೆ ಮಾಡ​ಬೇಕು.
*ಕಡ್ಡಾ​ಯ​ವಾಗಿ ಹಸಿ​ರು ಪಟಾ​ಕಿ​ಯನ್ನು ಮಾತ್ರ ಬಳ​ಸ​ಬೇಕು
*ಹೊಸ ವರ್ಷಾ​ಚ​ರಣೆ ವೇಳೆ ಸಾರ್ವ​ಜ​ನಿಕ ಸ್ಥಳ​, ಮುಖ್ಯರಸ್ತೆ​ಗ​ಳಲ್ಲಿ ಹೆಚ್ಚು ಜನ ಸೇರು​ವುದು ನಿಷೇಧ.
*ಉಲ್ಲಂಘನೆ ಮಾಡಿ​ದ​ರೆ ರಾಷ್ಟ್ರೀಯ ವಿಪತ್ತು ನಿರ್ವ​ಹಣಾ ಕಾಯ್ದೆ​ಯಡಿ ಕ್ರಮ.
 

Follow Us:
Download App:
  • android
  • ios