ಬೆಂಗಳೂರು (ಮೇ.11):  ಬೆಂಗಳೂರು ಕೊರೋನಾ ಸೋಂಕಿನ ಹಾಟ್‌ ಸ್ಪಾಟ್ ಆಗಿದೆ. ದಿನದಿನವೂ ಸೋಂಕು ಸಾವಿನ ಪ್ರಮಾಣ ಏರುತ್ತಲೇ ಇದೆ.  ಇದೀಗ ಬೆಂಗಳೂರಿನಲ್ಲಿ ಬಿಬಿಎಂಪಿ ಅಡ್ಡದಾರಿ ಮೂಲಕ ಸೋಂಕು ಇಳಿಕೆಗೆ ಹೊರಟಿರುವ ಬಗ್ಗೆ ಅನುಮಾನಗಳು ಕಾಡಿದೆ. 

ಬೆಂಗಳೂರಿನಲ್ಲಿ ಸೋಂಕು ಇಳಿಕೆಗೆ ಹೊಸ ಮಾರ್ಗ ಕಂಡುಕೊಂಡ ಪಾಲಿಕೆ  ಕೊರೋನಾ ಟೆಸ್ಟ್ ಸಂಖ್ಯೆ ಅರ್ಧಕ್ಕೆ ಇಳಿಸಿದೆ. ಪಾಸಿಟಿವಿಟಿ ರೇಟ್ ಜಾಸ್ತಿಯಾಗುತ್ತಿದ್ದಂತೆ ಪರೀಕ್ಷೆ ಪ್ರಮಾಣವನ್ನೂ ಕೂಡ ಇಳಿಸಿದೆ.  

ನಿನ್ನೆ ಮೇ 10 ರಂದು ಬೆಂಗಳೂರಿನಲ್ಲಿ  ಕೇವಲ 32,862 ಮಂದಿ ಕೋವಿಡ್ ಟೆಸ್ಟ್ ಮಾಡಿಸಿದ್ದು,  ಬರೋಬ್ಬರಿ ಶೇ. 50% ಪಾಸಿಟಿವಿಟಿ ರೇಟ್ ದಾಖಲಾಗಿದೆ.  32,862 ಮಂದಿ  ಪರೀಕ್ಷೆಯಲ್ಲಿ 16,747 ಮಂದಿಗೆ ಮಾತ್ರ ಸೋಂಕು ಪತ್ತೆಯಾಗಿದೆ. 

ಲಸಿಕೆಗಾಗಿ ಸಮೀಪದ ಹಳ್ಳಿಗಳನ್ನು ಆಶ್ರಯಿಸುತ್ತಿರುವ ಬೆಂಗಳೂರಿಗರು

ಈ ಮೊದಲು 65 ಸಾವಿರದ ವರೆಗೆ ಪ್ರತಿದಿನ ಬೆಂಗಳೂರಿನಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗುತಿತ್ತು. ಕೊರೋನಾ ಟಾಸ್ಕ್ ಫೋರ್ಸ್  ಪ್ರತಿದಿನ ಪರೀಕ್ಷೆಯನ್ನು 1 ಲಕ್ಷಕ್ಕೆ ಏರಿಸಲು ಸಲಹೆ ನೀಡಿತ್ತು. ಆದರೆ ಟಾಸ್ಕ್ ಫೋರ್ಸ್ ಆದೇಶಕ್ಕೆ ಕೇರ್ ಮಾಡದ ಬಿಬಿಎಂಪಿ ಭಾರೀ ಇಳಿಕೆ ಮಾಡಿದೆ,  

ದೇಶದ ಎಲ್ಲಾ ಮಹಾನಗರಗಳಿಗಿಂತ ಬೆಂಗಳೂರಲ್ಲೇ ಅಧಿಕ ಸೋಂಕಿತರು ಇದ್ದು, ಕರ್ನಾಟಕ ಸಾವು, ಸೋಂಲಿ ಎರಡರಲ್ಲಿಯೂ ನಂ 1 ಸ್ಥಾನಕ್ಕೆ ಏರಿದೆ. ಈ ನಿಟ್ಟಿನಲ್ಲಿ ಸೋಂಕು ಕಡಿಮೆ ತೋರಿಸಿಕೊಳ್ಳಲು ಪರೀಕ್ಷಾ ಪ್ರಮಾಣ ಇಳಿಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ.  

ರಾಜ್ಯ ರಾಜಧಾನಿಯಲ್ಲಿ ಕೊರೋನಾ ನಿಯಂತ್ರಿಸಲು ಮುಂಬೈ ಮಾದರಿ!

ಸದ್ಯ ಬೆಂಗಳೂರಿನಲ್ಲಿ ಇದುವರೆಗೆ 8431 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೋಮವಾರ 16 747 ಸೋಂಕಿತರು ವರದಿಯಾಗಿದ್ದು ಇದುವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 9,67,640ಕ್ಕೆ ಏರಿಕೆಯಾಗಿದೆ. 14,289 ಮಂದಿ ಸೋಮವಾರ ಆಸ್ಪತ್ರೆಯಿಂದ ಡಿಸಚ್ಆರ್ಜ್ ಆಗಿದ್ದು  3,52,454 ಸಕ್ರೀಯ ಸೋಂಕಿನ ಪ್ರಕರಣಗಳಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona