200 ಕೋಟಿ ವೆಚ್ಚದಲ್ಲಿ ಬೆಂಗಳೂರಿಗರಿಗೆ 7.22 KM ಉದ್ದದ ಹೊಸ ರಸ್ತೆ; ನೋ ಟ್ರಾಫಿಕ್, ಫುಲ್ ಜಾಲಿ ರೈಡ್

ಔಟರ್ ರಿಂಗ್ ರೋಡ್‌ಗೆ ಸಮಾನಾಂತರವಾಗಿ ನಿರ್ಮಾಣವಾಗಲಿದ್ದು, ನಗರದ ಪ್ರಮುಖ ಭಾಗದ ವಾಹನ ದಟ್ಟಣೆಯನ್ನು ನಿಯಂತ್ರಿಸುವ ನಿರೀಕ್ಷೆಯಿದೆ. ಎಸ್‌ಡಬ್ಲ್ಯೂಡಿಗಳ ಬಫರ್ ಝೋನ್‌ ರಸ್ತೆ ನಿರ್ಮಾಣ ತುಂಬ ವಿಭಿನ್ನ ಆಲೋಚನೆ ಆಗಿದೆ.

7 KM long new road for Bengaluruans at a cost of 200 crores mrq

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜಧಾನಿಯಲ್ಲಿ 7.22 ಕಿಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಪ್ಲಾನ್ ಮಾಡಿಕೊಂಡಿದೆ. 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದ್ದು, ಈ ಮಾರ್ಗ ನಗರದ ಪ್ರಮುಖ ಭಾಗದ ವಾಹನದಟ್ಟಣೆ ನಿಯಂತ್ರಿಸಲಿದೆ ಎಂದು ಅಂದಾಜಿಸಲಾಗುತ್ತಿದೆ. ಈ ರಸ್ತೆ ಎಲ್ಲಿ ನಿರ್ಮಾಣವಾಗಲಿದೆ? ಈ ಮಾರ್ಗದ ಮಧ್ಯೆ ಯಾವ ಪ್ರದೇಶಗಳು ಬರಲಿವೆ? ಈ ಕುರಿತು ಬಿಬಿಎಂಪಿ ಮಾಡಿಕೊಂಡಿರುವ ಪ್ಲಾನ್ ಏನು ಎಂಬುದರ ಮಾಹಿತಿ ಇಲ್ಲಿದೆ. 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೆಬ್ಬಾಳ ಮತ್ತು ಕಲ್ಕೆರೆ ಕೆರೆಗಳ ನಡುವಿನ ಮಳೆನೀರು ಚರಂಡಿಯ (ಎಸ್‌ಡಬ್ಲ್ಯುಡಿ) ಬಫರ್ ವಲಯದಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಹೆಬ್ಬಾಳ ಮಿಲಿಟರಿ ಫಾರಂನಿಂದ ಹೆಣ್ಣೂರು ಮುಖ್ಯರಸ್ತೆಯವರೆಗೆ ಇರಲಿದ್ದು,  ಔಟರ್ ರಿಂಗ್ ರೋಡ್‌ಗೆ (ORR) ಸಮಾನಾಂತರವಾಗಿ ಇರಲಿದೆ ಎಂದು ವರದಿಯಾಗಿದೆ. ಜನದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲು ಬಿಬಿಎಂಪಿ ಮುಂದಾಗಿದೆ ಎಂದು ವರದಿಯಾಗಿದೆ..

ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಡಿಕೆ ಶಿವಕುಮಾರ್ ಸಹ SWD ಬಫರ್ ವಲಯಗಳಲ್ಲಿ ಹೊಸ ರಸ್ತೆ ಜಾಲ ನಿರ್ಮಿಸುವ ಕಲ್ಪನೆಯನ್ನು ಹೊಂದಿದ್ದಾರೆ. ಆದ್ರೆ ಈ ಹೊಸ ರಸ್ತೆ ನಿರ್ಮಿಸುವ ಪ್ರಸ್ತಾವನೆಗೆ  ಪರಿಸರ ಹೋರಾಟಗಾರರಿಂದ ತೀವ್ರ ಟೀಕೆ ವ್ಯಕ್ತವಾಗಿದ್ದರೂ, ಈ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ಮುಂದಾಗಿದೆ. ಇದು  ಹೆಬ್ಬಾಳ - ಹೆಣ್ಣೂರು ಮುಖ್ಯರಸ್ತೆ ಮೊದಲ ರಸ್ತೆಯಾಗಲಿದೆ. ಹೆಬ್ಬಾಳ ಮತ್ತು ಕಲ್ಕೆರೆ ಕೆರೆಗಳ ನಡುವಿನ ಎಸ್‌ಡಬ್ಲ್ಯುಡಿ ಬಫರ್ ವಲಯದಲ್ಲಿ ಒಟ್ಟು 2,89,354 ಚದರ ಮೀಟರ್ (71.5 ಎಕರೆ) ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಬಿಎಂಪಿ ಗುರುವಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

ಬಿಬಿಎಂಪಿ ಪ್ರಕಟಣೆಯಲ್ಲಿ  ಒಟ್ಟು 149 ಆಸ್ತಿಗಳನ್ನು ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಹೆಬ್ಬಾಳದಲ್ಲಿರುವ ಮಿಲಿಟರಿ ಡೈರಿ ಫಾರ್ಮ್ ಸಹ ಸೇರಿದೆ. ಇನ್ನುಳಿದಂತೆ ಬಹುತೇಕ ಜಾಗ ಖಾಲಿ ಇರೋದರಿಂದ ಸ್ವಾಧೀನ ಪ್ರಕ್ರಿಯೆ ಸುಲಭವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತಾವಿತ ರಸ್ತೆ  25 ಮೀಟರ್ ಅಗಲವಾಗಿರಲಿದೆ. ಆದ್ರೆ ಬಫರ್ ವಲಯ ಆಗಿರೋದರಿಂದ ಕೆಲವು ಭಾಗದಲ್ಲಿ 24 ಮೀಟರ್‌ ಹಾಗೂ ಕೆಲವೆಡೆ 17 ಮೀಟರ್‌ ಅಗಲದ ರಸ್ತೆ ಇರಲಿದೆ ಎಂದು ವರದಿಯಾಗಿದೆ. ರಸ್ತೆಯ ಅಗಲ ಏಕರೂಪವಾಗಿರಲ್ಲ ಎಂಬುವುದು ಸ್ಪಷ್ಟವಾಗಿದೆ. 

ಇದನ್ನೂ ಓದಿ: 60 ಕೋಟಿ ಮೌಲ್ಯದ ನಿವೇಶನವನ್ನು ಕೇವಲ 2 ಕೋಟಿಗೆ ಮಾರಿದ ಬಿಡಿಎ: ಖರೀದಿಸಿದ್ದು ಯಾರು?

ಎಸ್‌ಡಬ್ಲ್ಯೂಡಿಗಳ ಬಫರ್ ಝೋನ್‌ ಬಳಸಿಕೊಂಡು ರಸ್ತೆ ನಿರ್ಮಾಣ ಮಾಡೋದು ಹೊಸ ಆಲೋಚನೆಯಾಗಿದೆ. ಆದ್ರೆ ಮಾರ್ಗ ಮಧ್ಯೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಡ್ರೈನ್ ಅಗಲ ಏಕರೂಪವಾಗಿಲ್ಲದ ಕಾರಣ ರಸ್ತೆಯ ಅಗಲ ಬೇರೆ ಬೇರೆಯಾಗಿರುತ್ತದೆ ಎಂದು ನಗರ ಸಾರಿಗೆ ಕಾರ್ಯಕರ್ತ ಸಂಜೀವ್ ವಿ.ದ್ಯಾಮಣ್ಣನವರ್ ಹೇಳುತ್ತಾರೆ. 

ಇದನ್ನೂ ಓದಿ: ಬೆಂಗ್ಳೂರಲ್ಲಿ 400ಕ್ಕೂ ಹೆಚ್ಚು ಅಕ್ರಮ ಕಟ್ಟಡ ನೆಲಸಮಕ್ಕೆ ಬಿಬಿಎಂಪಿ ಆದೇಶ

Latest Videos
Follow Us:
Download App:
  • android
  • ios