ಬೆಂಗಳೂರು [ಮಾ.13]:  ಕಾಲರಾ ನಿಯಂತ್ರಣಕ್ಕೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಕಳೆದ ಮೂರು ದಿನಗಳಿಂದ ನಗರದ ಬೀದಿ ಬದಿ ತೆರೆದಿಟ್ಟು ಆಹಾರ ಮಾರಾಟ ಮಳಿಗೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಬುಧವಾರ ವಿವಿ ಪುರದ 23 ಹೋಟೆಲ್‌ಗಳನ್ನು ಪರಿಶೀಲನೆ ಮಾಡಿ 13 ಹೋಟೆಲ್‌ ಮಾಲಿಕರಿಗೆ .65,500 ದಂಡ ವಿಧಿಸಿದ್ದಾರೆ.

ಕಾಲರಾ ತಡೆಗಟ್ಟುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹೋಟೆಲ್‌ಗಳಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟಹಾಗೂ ನೀರಿನ ಶುದ್ಧತೆ ಪರಿಶೀಲಿಸಲು ದಿಢೀರ್‌ ತಪಾಸಣೆ ನಡೆಸುತ್ತಿದ್ದಾರೆ.

ಬೆಂಕಿಯಿಂದ ಬಾಣಲೆಗೆ: ಬೆಂಗಳೂರಿನಲ್ಲಿ ಕಾಲರಾ ಪೀಡಿತರ ಸಂಖ್ಯೆ 25ಕ್ಕೆ!. 

ಬುಧವಾರ ತಡರಾತ್ರಿ ವಿವಿಪುರದ 23 ಹೋಟೆಲ್‌ಗಳಿಗೆ ಪಾಲಿಕೆಯ ಆರೋಗ್ಯಾಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ ನಿಯಮ ಉಲ್ಲಂಘಿಸಿ ಸ್ವಚ್ಛತೆ ಕಾಪಾಡಿಕೊಳ್ಳದ 13 ಹೋಟೆಲ್‌ ಮಾಲಿಕರಿಗೆ .65,500 ದಂಡ ವಿಧಿಸಿದ್ದಾರೆ. ಅಲ್ಲದೆ, 13 ಹೋಟೆಲ್‌ಗಳಿಗೆ ಬೀಗ ಹಾಕಲಾಗಿದೆ ಎಂದು ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.