Asianet Suvarna News Asianet Suvarna News

ಬೆಂಗಳೂರು: ಆಸ್ತಿ ತೆರಿಗೆ ಸಂಗ್ರಹ ಗುರಿ ತಲುಪಲು ಬಿಬಿಎಂಪಿ ವಿಫಲ, 660 ಕೋಟಿ ಖೋತಾ..!

2023-24ನೇ ಸಾಲಿನಲ್ಲಿ ₹4,561 ಕೋಟಿ ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದ್ದ ಪಾಲಿಕೆ, ಮಾ.31ರ ಆರ್ಥಿಕ ವರ್ಷದ ಅಂತ್ಯಕ್ಕೆ ₹3,900.92 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಆದರೆ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2022-23ರಲ್ಲಿ ₹566 ಕೋಟಿ ಹೆಚ್ಚು ತೆರಿಗೆ ಸಂಗ್ರಹಿಸಿದೆ.

BBMP Fails to Target Property Tax Collection in Bengaluru grg
Author
First Published Apr 4, 2024, 6:30 AM IST

ಬೆಂಗಳೂರು(ಏ.04):   ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2023-24ನೇ ಸಾಲಿನಲ್ಲಿ ನಿರೀಕ್ಷಿತ ಮಟ್ಟದ ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ವಿಫಲವಾಗಿದ್ದು, ₹3,901 ಕೋಟಿ ಮಾತ್ರ ಸಂಗ್ರಹಿಸಲು ಶಕ್ತವಾಗಿದೆ. 2023-24ನೇ ಸಾಲಿನಲ್ಲಿ ₹4,561 ಕೋಟಿ ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದ್ದ ಪಾಲಿಕೆ, ಮಾ.31ರ ಆರ್ಥಿಕ ವರ್ಷದ ಅಂತ್ಯಕ್ಕೆ ₹3,900.92 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಆದರೆ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2022-23ರಲ್ಲಿ ₹566 ಕೋಟಿ ಹೆಚ್ಚು ತೆರಿಗೆ ಸಂಗ್ರಹಿಸಿದೆ.

ಮಹದೇವಪುರದಲ್ಲಿ ₹1 ಸಾವಿರ ಕೋಟಿ:

ಬಿಬಿಎಂಪಿಯ ಎಂಟು ವಲಯಗಳ ಪೈಕಿ ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ₹1,042 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ದಾಸರಹಳ್ಳಿ ವಲಯದಲ್ಲಿ ಅತಿ ಕಡಿಮೆ ₹127 ಕೋಟಿ ಸಂಗ್ರಹವಾಗಿದೆ.

ಓಟಿಎಸ್‌ ಸ್ಕೀಂನಿಂದ ಬಿಬಿಎಂಪಿ ಆದಾಯಕ್ಕೆ ಕುತ್ತು!

ಫಲ ನೀಡದ ತಂತ್ರಗಳು:

ಹೆಚ್ಚಿನ ಪ್ರಮಾಣದ ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ ಹಲವು ಕ್ರಮ ಕೈಗೊಂಡಿತ್ತು. ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ ಆಸ್ತಿ ಸೀಜ್‌ ಮಾಡಲಾಗುತ್ತಿತ್ತು. ಹಿರಿಯ ಐಎಎಸ್‌ ಅಧಿಕಾರಿ ಮುನೀಶ್ ಮೌದ್ಗಿಲ್‌ ಅವರನ್ನು ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತರ ಹುದ್ದೆಗೆ ನಿಯೋಜನೆ ಮಾಡಲಾಗಿತ್ತು. ಆದರೂ ಹೆಚ್ಚಿನ ಪ್ರಮಾಣ ಆಸ್ತಿ ತೆರಿಗೆ ವಸೂಲಿ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ.

ಬೆಂಗಳೂರು ಜನರಿಗೆ ತಾಳಲಾಗುತ್ತಿಲ್ಲ, ಬಿಬಿಎಂಪಿ ಮಾರ್ಷಲ್‌ಗಳ ಕಿರುಕುಳ; ವೃದ್ಧನ ಕಣ್ಣೀರಿಗೂ ಕರಗದ ಕಟುಕರು

2023-24ರ ವಲಯವಾರು ಆಸ್ತಿ ತೆರಿಗೆ ಸಂಗ್ರಹ (ಕೋಟಿ ₹): ವಲಯ ಗುರಿ ಸಂಗ್ರಹ

ಬೊಮ್ಮನಹಳ್ಳಿ 501 452.84
ದಾಸರಹಳ್ಳಿ 164 127.02
ಪೂರ್ವ 764 684.55
ಮಹದೇವಪುರ 1,238 1,042.60
ಆರ್‌.ಆರ್‌.ನಗರ 345 269.55
ದಕ್ಷಿಣ 627 556.64
ಪಶ್ಚಿಮ 493 418.03
ಯಲಹಂಕ 429 349.69
ಒಟ್ಟು 4561 3,900.92

ಕಳೆದ ಆರು ವರ್ಷ ತೆರಿಗೆ ಸಂಗ್ರಹ ವಿವರ (ಕೋಟಿ ₹): ವರ್ಷ ಗುರಿ ಸಂಗ್ರಹ

2018-19 3,100 2,529
2019-20 3,500 2,659
2020-21 3,500 2,860
2021-22 4,000 3,089
2022-23 4,189 3,332
2023-24 4,561 3,900.92

Follow Us:
Download App:
  • android
  • ios