ಬೆಂಗಳೂರು [ಜ.20]: ಮುಂಬರುವ ಬಿಬಿಎಂಪಿ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಜೆಡಿಎಸ್‌, ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಸೋಮವಾರದಿಂದ ಮುಂದಿನ ಒಂದು ತಿಂಗಳೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಭಾನುವಾರ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ನೇತೃತ್ವದಲ್ಲಿ ಜೆಡಿಎಸ್‌ನ ನಗರ ಘಟಕದ ವಿವಿಧ ವಿಭಾಗಗಳ ಸಭೆ ನಡೆಯಿತು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಬಿಬಿಎಂಪಿ ಚುನಾವಣೆಯಲ್ಲಿ ಕನಿಷ್ಠ 70 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ. ಹೀಗಾಗಿ ಈಗಿನಿಂದಲೆ ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಟಿಕೆಟ್‌ ಆಕಾಂಕ್ಷಿಗಳು ಸೋಮವಾರದಿಂದ ಒಂದು ತಿಂಗಳೊಳಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು. ಪ್ರತಿ ವಾರ್ಡನಲ್ಲೂ ಪಕ್ಷದ ಕಚೇರಿ ತೆರೆಯಲು ವಾರ್ಡ್‌ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ. ವಾರ್ಡ್‌ ಮಟ್ಟದಲ್ಲಿ ಪಕ್ಷ ಸದೃಢ ಮಾಡಲು ಇವತ್ತಿನಿಂದಲೇ ಕಾರ್ಯರ್ತರು ಕಾರ್ಯೊನ್ಮುಖರಾಗಬೇಕು ಎಂದರು.

ಜಮೀರ್ ಭಾಯ್ ಆಪರೇಷನ್ ಹಸ್ತ: ಜೆಡಿಎಸ್‌ಗೆ ಮರ್ಮಾಘಾತ...

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಪೇಂದ್ರ ರೆಡ್ಡಿ, ನಮ್ಮ ರಾಜ್ಯದ ಧ್ವನಿಯಾಗಿ ದೇವೇಗೌಡರು ಸಂಸತ್ತಿಗೆ ಹೋಗಬೇಕು ಎಂಬುದು ನನ್ನ ಆಶಯ. ಒಂದು ವೇಳೆ ಗೌಡರು ಒಪ್ಪಿದಲ್ಲಿ ನಾನು ನನ್ನ ಸ್ಥಾನ ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.

'ಬಿಜೆಪಿಯಲ್ಲಿ ಸಿಗೋ ಗೌರವ ಬೇರೆಡೆ ಸಿಕ್ತಿದ್ರೆ ಪಕ್ಷ ಬಿಡ್ತಿರ್ಲಿಲ್ಲ'..!..

ಸಿಎಎ ವಿರೋಧಿಸಿ 24ರಂದು ಪ್ರತಿಭಟನೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇದೇ ತಿಂಗಳ 24ರಂದು ಜೆಡಿಎಸ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಅಂದು ನಗರದ ಪುರಭವನದ ಬಳಿ ಪಕ್ಷದ ನಗರ ಘಟಕದ ವತಿಯಿಂದ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ತಿಳಿಸಿದರು.