ಬೆಂಗಳೂರು(ಡಿ.14): ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ವಸೂಲಿ ಮಾಡಿದ ಮಾರ್ಷಲ್‌ಗಳಿಗೆ ಶೇ.5 ರಷ್ಟು ಭತ್ಯೆ ನೀಡುವುದಾಗಿ ಹೇಳಿದ ಬಿಬಿಎಂಪಿ ಈವರೆಗೆ ಒಂದೇ ಒಂದು ಬಾರಿಯೂ ಭತ್ಯೆ ನೀಡಿಲ್ಲ.

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಗೆ ಮಾರ್ಷಲ್‌ ನೇಮಿಸುವಾಗ ಸಂಗ್ರ​ಹ ಮಾಡುವ ದಂಡ ಮೊತ್ತ​ದ​ಲ್ಲಿ ಶೇ.5ರಷ್ಟು ಭತ್ಯೆ ನೀಡು​ವು​ದಾಗಿ ಪಾಲಿಕೆ ಭರ​ವಸೆ ನೀಡಿ​ತ್ತು. ಆದರೆ, ಮಾರ್ಷ​ಲ್‌​ಗ​ಳನ್ನು ನೇಮಕ ಮಾಡಿ​ಕೊಂಡ ನಂತರ ಈವರೆಗೆ ಕನಿಷ್ಠ ಒಂದು ಬಾರಿಗೂ ಭತ್ಯೆ ನೀಡಿಲ್ಲ.

ಮಾಸ್ಕ್ ದಂಡ ವಸೂಲಿ ಮಾಡಲು ಮಾರ್ಷಲ್‌ಗಳಿಗೆ ದಿನಕ್ಕಿಷ್ಟು ಟಾರ್ಗೆಟ್..!

ಇನ್ನು ಕೊರೋನಾ ಸೋಂಕಿನ ಸಂದರ್ಭದಲ್ಲಿ ಒಟ್ಟು 2.38 ಕೋಟಿ ದಂಡ ಸಂಗ್ರಹಿಸಿದ್ದಾರೆ. ಇದಲ್ಲದೆ, ಕೊರೊನಾ ಸೋಂಕು ನಿಯಮ ಉಲ್ಲಂಘನೆ ಮಾಡುವವರಿಂದಲೂ ದಂಡ ಸಂಗ್ರಹ ಮಾಡುತ್ತಿದ್ದಾರೆ. ಈ ವೇಳೆ 25ಕ್ಕೂ ಹೆಚ್ಚು ಮಾರ್ಷ​ಲ್‌​ಗ​ಳಿಗೆ ಸೋಂಕು ದೃಢ​ಪ​ಟ್ಟಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌, ಪಾಲಿಕೆ ಮಾರ್ಷಲ್‌ಗಳು ಸಂಗ್ರಹಿಸುವ ದಂಡದ ಮೊತ್ತದಲ್ಲಿ ಶೇ.5ರಷ್ಟು ಭತ್ಯೆ ನೀಡುವ ಕುರಿತ ಕಡತವನ್ನು ಬಿಬಿಎಂಪಿ ಆಯುಕ್ತರಿಗೆ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಆಯುಕ್ತರು ಕ್ರಮ ಕೈಗೊಳ್ಳಲಿದ್ದಾರೆ. ಕೊನೆಯ 3 ತಿಂಗಳಿಗೆ ಅನ್ವಯ ಆಗುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಯುಕ್ತರ ಒಪ್ಪಿಗೆ ಸಿಕ್ಕರೆ ಪ್ರತಿ ತಿಂಗಳು ಮಾರ್ಷಲ್‌ಗಳ ಖಾತೆಗೆ ಭತ್ಯೆ ಹಣ ಹಾಕಲಾಗುವುದು ಎಂದು ತಿಳಿಸಿದ್ದಾರೆ.