ಬೆಂಗಳೂರು (ಫೆ.28):  ನೀಲಸಂದ್ರ ವಾರ್ಡ್‌ನ ಲಕ್ಷ್ಮಣ ರಾವ್‌ ನಗರ ವೃತ್ತದಲ್ಲಿ ಶಾಸಕ ಹ್ಯಾರಿಸ್‌ ಅವರ ವೃತ್ತ ಎಂದು ಹೆಸರಿಸಿ, ಭಾವಚಿತ್ರ ಅಳವಡಿಸಿದವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ರಾಜ್ ಕುಮಾರ್ ಪ್ರತಿಮೆ ಬಗ್ಗೆ ನಾಲಿಗೆ ಹರಿಬಿಟ್ಟ ಹ್ಯಾರಿಸ್, ಬಳಿಕ ಕ್ಷಮೆಯಾಚನೆ ...

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುಮತಿ ಇಲ್ಲದೇ ಭಾವಚಿತ್ರ ಅಳವಡಿಕೆ ಹಾಗೂ ವೃತ್ತಕ್ಕೆ ಹೆಸರು ನಾಮಕರಣ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ. 

ಪೊಲೀಸರು ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದರು.