Asianet Suvarna News Asianet Suvarna News

Bengaluru| ಎಲ್ಲೆಂದರಲ್ಲಿ ಪುನೀತ್‌ ಪ್ರತಿಮೆ ಸ್ಥಾಪಿಸದಂತೆ ಬಿಬಿಎಂಪಿ ಸೂಚನೆ

*  ನಟ ಪುನೀತ್‌ ಹಾಕಿಕೊಟ್ಟ ಮಾದರಿಯಲ್ಲಿ ನಡೆಯೋಣ: ಯುವ ಕಾಂಗ್ರೆಸ್‌ ಅಧ್ಯಕ್ಷ
*  ಸರ್ಕಾರದ ತೀರ್ಮಾನದಂತೆ ಅಧಿಕೃತವಾಗಿ ಒಂದು ಪುತ್ಥಳಿ ಸ್ಥಾಪನೆ 
*  ಈಗಾಗಲೇ ಅನಧಿಕೃತ ಪುತ್ಥಳಿ ತೆರವಿಗೆ ಸೂಚನೆ ನೀಡಿದ ಹೈಕೋರ್ಟ್‌

BBMP Chief Commissioner Gaurav Gupta Talks Over Statue of Puneeth Rajkumar in Bengaluru grg
Author
Bengaluru, First Published Nov 7, 2021, 7:42 AM IST
  • Facebook
  • Twitter
  • Whatsapp

ಬೆಂಗಳೂರು(ನ.07):  ನಟ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರ ಪುತ್ಥಳಿ ಅಥವಾ ಪ್ರತಿಮೆಗಳನ್ನು ಅನಧಿಕೃತವಾಗಿ ಎಲ್ಲಿಯೂ ಸ್ಥಾಪಿಸಬಾರದು. ಸರ್ಕಾರದ ತೀರ್ಮಾನದಂತೆ ಅಧಿಕೃತವಾಗಿ ಒಂದು ಪುತ್ಥಳಿಯನ್ನು ಸ್ಥಾಪಿಸುವುದಾಗಿ ಬಿಬಿಎಂಪಿ(BBMP) ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ತಿಳಿಸಿದರು.

ಈಗಾಗಲೇ ಅನಧಿಕೃತ ಪುತ್ಥಳಿ ತೆರವಿಗೆ ಹೈಕೋರ್ಟ್‌(High Court) ಸೂಚನೆ ನೀಡಿದೆ. ಹೀಗಾಗಿ ಅನುಮತಿ ಪಡೆಯದೆ ಯಾವುದೇ ಪುತ್ಥಳಿ ಸ್ಥಾಪಿಸುವಂತಿಲ್ಲ. ಪಾಲಿಕೆಯ ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ, ಪ್ರತಿಮೆ(Statue) ಇಡದಂತೆ ಸೂಚನೆ ನೀಡಲಾಗಿದೆ. ಪಾದಚಾರಿ ಮಾರ್ಗ ಮತ್ತು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವ ಪ್ರದೇಶದಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪಿಸಿರುವ ಪುತ್ಥಳಿಗಳನ್ನು ಗುರುತಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪುನೀತ್‌ ರಾಜ್‌ಕುಮಾರ್‌ಗೆ ಚಿತ್ರ ಪ್ರದರ್ಶಕರ ಸಂಘದಿಂದ ಶ್ರದ್ಧಾಂಜಲಿ

ನಟ ಪುನೀತ್‌ ಅವರ ಅಗಲಿಕೆಯಿಂದ ಅಭಿಮಾನಿಗಳಿಗೆ(Fans) ಮತ್ತು ನಾಡಿನ ಜನರಿಗೆ ನೋವುಂಟಾಗಿದೆ. ಅನಧಿಕೃತವಾಗಿ ಪುನೀತ್‌ ಅವರ ಪ್ರತಿಮೆ, ಪುತ್ಥಳಿ ಪ್ರತಿಷ್ಠಾಪಿಸಲು ಅನುಮತಿ ಇಲ್ಲ. ಒಂದು ವೇಳೆ ಪ್ರತಿಮೆ ಸ್ಥಾಪನೆ ಕುರಿತು ಬಿಬಿಎಂಪಿಗೆ ಅರ್ಜಿ ಸಲ್ಲಿಸಿದರೆ, ಆ ಕುರಿತು ಚರ್ಚೆ ನಡೆಸಿ, ಕಾನೂನು ರೀತಿಯಲ್ಲಿ ಅವಕಾಶ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಮರೋಪಾದಿಯಲ್ಲಿ ರಸ್ತೆ, ಚರಂಡಿ ದುರಸ್ತಿ ಕಾರ್ಯ

ಮುಖ್ಯಮಂತ್ರಿಗಳ(Chief Minister) ನಿರ್ದೇಶನದಂತೆ ರಸ್ತೆ ಮತ್ತು ಚರಂಡಿಗಳನ್ನು ದುರಸ್ತಿ ಮಾಡುವ ಕಾರ್ಯ ಸಮಾರೋಪಾದಿಯಲ್ಲಿ ನಡೆಯುತ್ತಿದೆ. ವಾರ್ಡ್‌ ಮಟ್ಟದಲ್ಲಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲಿಯೇ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಸಂಪೂರ್ಣಗೊಳ್ಳಲಿದ್ದು, ಪಾಲಿಕೆಯ ಎಂಟು ವಲಯಗಳಲ್ಲಿಯೂ ರಸ್ತೆ ದುರಸ್ತಿಗೆ ಕ್ರಮವಹಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ತಿಳಿಸಿದ್ದಾರೆ.

ಡಾ.ರಮಣ ನಿರ್ಲಕ್ಷ್ಯದಿಂದ ಪುನೀತ್‌ ನಿಧನ?: ಗೊಂದಲ ನಿವಾರಿಸದಿದ್ರೆ ನಾವೇ ವಿಚಾರಿಸಿಕೊಳ್ತೇವೆ ಎಂದ ಫ್ಯಾನ್ಸ್‌

ಪುನೀತ್‌ ಸಮಾಧಿಗೆ ಯುವ ಕಾಂಗ್ರೆಸ್‌ ಅಧ್ಯಕ್ಷ ನಮನ 

ನಟ ಪುನೀತ್‌ರಾಜ್‌ ಕುಮಾರ್‌ ಅವರ ಸಮಾಧಿಗೆ(Grave) ಶನಿವಾರ ರಾಷ್ಟ್ರೀಯ ಯುವ ಕಾಂಗ್ರೆಸ್‌(Congress) ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌(BV Shrinivas) ಅವರು ಭೇಟಿ ನೀಡಿ ಗೌರವ ಸಲ್ಲಿಸಿದ್ದು, ಪುನೀತ್‌ ಅವರು ಹಾಕಿಕೊಟ್ಟ ಮಾದರಿ ದಾರಿಯಲ್ಲಿ ಎಲ್ಲರೂ ನಡೆಯೋಣ ಎಂದು ಕರೆ ನೀಡಿದರು.

ಈ ವೇಳೆ ಮಾತನಾಡಿದ ಬಿ.ವಿ.ಶ್ರೀನಿವಾಸ್‌, ಪುನೀತ್‌ ರಾಜ್‌ಕುಮಾರ್‌ ಅವರು ತಾವು ಮಾಡಿರುವ ಸೇವಾ ಕಾರ್ಯಗಳ ಬಗ್ಗೆ ಎಂದಿಗೂ ಯಾರಿಗೂ ಹೇಳಿಕೊಂಡವರಲ್ಲ. ದೇವರು(God) ಪುನೀತ್‌ ರಾಜ್‌ಕುಮಾರ್‌ ಅವರ ಜೀವ ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅವರ ಜೀವನ ನಮ್ಮ ಕಣ್ಣೆದುರೇ ಇದೆ. ರಾಜಕೀಯ, ಕ್ರೀಡೆ, ಕಲೆ, ಚಿತ್ರರಂಗದಲ್ಲಿರುವ ನಮಗೆಲ್ಲರಿಗೂ ಅವರು ಒಂದು ಹಾದಿ ಹಾಕಿಕೊಟ್ಟಿದ್ದಾರೆ. ಅವರ ಹಾದಿಯಲ್ಲಿ ನಡೆಯುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದು ಅಭಿಪ್ರಾಯಪಟ್ಟರು.

ಸ್ಯಾಂಡಲ್‌ವುಡ್‌ನ(Sandalwood) ಸ್ಟಾರ್‌ ಆಗಿದ್ದರೂ ಎಂದಿಗೂ ತಮ್ಮ ನಡತೆಯಲ್ಲಿ ಎಂದಿಗೂ ಅದನ್ನು ತೋರ್ಪಡಿಸಿಕೊಳ್ಳುತ್ತಿರಲಿಲ್ಲ. ಅವರ ಅಗಲಿಕೆಯಿಂದಾಗಿ ರಾಜ್ಯಕ್ಕೆ(Karnataka) ಕೇವಲ ನಾಯಕ ನಟ ಮಾತ್ರವಲ್ಲ ಮಾನವೀಯತೆ(Humanity) ಹಾಗೂ ಅಪಾರ ಸಾಮಾಜಿಕ ಕಳಕಳಿಯುಳ್ಳ ಒಬ್ಬ ಶಕ್ತಿಯನ್ನು ಕಳೆದುಕೊಂಡಂತಾಗಿದೆ. ಅವರ ಅಗಲಿಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ನೋವು ವ್ಯಕ್ತಪಡಿಸಿದರು.

ಬೆನ್ನು ತಟ್ಟಿದ್ದರು:

ಕೊರೋನಾ(Coronavirus) ಸಂಕಷ್ಟದ ವೇಳೆಯಲ್ಲಿ ದೆಹಲಿ ಹಾಗೂ ವಿವಿಧೆಡೆ ನಾನು ಹಾಗೂ ನಮ್ಮ ತಂಡ ಮಾಡಿದ್ದ ಸೇವಾ ಕಾರ್ಯಗಳ ಬಗ್ಗೆ ದೂರವಾಣಿ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ದೆಹಲಿಯಲ್ಲಿ ಒಬ್ಬರಿಗೆ ಸಮಸ್ಯೆ ಇದೆ ಎಂದು ಹೇಳಿದಾಗ ಖುದ್ದು ನಾನೇ ಭೇಟಿ ನೀಡಿ ಸಮಸ್ಯೆ ಪರಿಹರಿಸಿದ್ದೆ. ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಒಮ್ಮೆ ಕರೆದು ಭೇಟಿಯಾಗಿ ಬೆನ್ನು ತಟ್ಟಿದ್ದರು. ಅಂತಹ ವ್ಯಕ್ತಿ ಇಲ್ಲ ಎಂದು ನೆನಸಿಕೊಂಡರೆ ಮನಸ್ಸಿಗೆ ಭಾರವಾಗುತ್ತದೆ ಎಂದರು.
 

Follow Us:
Download App:
  • android
  • ios