Asianet Suvarna News Asianet Suvarna News

ಬೆಂಗಳೂರಿನಲ್ಲಿ ಹೆಚ್ಚಿದ ಕೊರೋನಾ ಮಹಾಮಾರಿ : ತಡೆಗೆ ಕ್ರಮ

ಬೆಂಗಳೂರಿನಲ್ಲಿ ಕೊರೋನಾ ಮಹಾಮಾರಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊರೋನಾ ತಡೆಗೆ  ಪಾಲಿಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೆಚ್ಚಿನ ಕೊರೋನಾ ವಾರ್ಡುಗಳನ್ನು ಸಿದ್ಧ ಮಾಡಲಾಗುತ್ತಿದೆ. 

BBMP Action For controlling Corona in bengaluru snr
Author
Bengaluru, First Published Mar 18, 2021, 10:23 AM IST

ಬೆಂಗಳೂರು (ಮಾ.18):  ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ  ಕೊರೋನಾ ಚಿಕಿತ್ಸೆ ಹಾಗೂ ತಡೆಗೆ ಪಾಲಿಕೆಯಿಂದ ಸಿದ್ಧತೆ ನಡೆದಿದೆ.  ಕೊರೊನಾ ಸೆಕೆಂಡ್ ವೇವ್ ಕಂಟ್ರೋಲ್ ಮಾಡಲು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಜಂಟಿ ಪ್ಲಾನ್ ಮಾಡಿದೆ. 

ಮತ್ತೆ ಕೋವಿಡ್ ಕೇರ್ ಸೆಂಟರ್ ಗಳನ್ನ ತೆರೆಯಲು ಸೂಚನೆ ನೀಡಿದ ಹಿನ್ನೆಲೆ  ನಗರದ HAL ಸೆಂಟರ್, ಕೋರಮಂಗಲ ಇಂಡೋರ್ ಸ್ಟೇಡಿಯಂ ಹಾಗೂ ಹಜ್ ಭವನದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಕ್ಕೆ ಸಿದ್ಧತೆ ನಡೆದಿದೆ.  

ಗಡಿಗಳಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಕೋವಿಡ್‌ ತಪಾಸಣೆ ...

ಪ್ರತಿ ಸೆಂಟರ್‌ನಲ್ಲಿ 200 ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದ್ದು,  ಒಟ್ಟು ನಗರದಲ್ಲಿ 600 ಬೆಡ್‌ಗಳ ವ್ಯವಸ್ಥೆಗೆ ತಯಾರಿ ನಡೆಸಲಾಗುತ್ತಿದೆ. ಕೆಲವೇ ದಿನದಲ್ಲಿ ಮತ್ತೆ ಕೋವಿಡ್ ಕೇರ್ ಸೆಂಟರ್‌ಗಳು ರೀ ಓಪನ್ ಆಗಲಿದೆ.  ಅಸಿಂಪ್ಟಾಮ್ಯಾಟಿಕ್ ರೋಗಿಗಳನ್ನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಇಡುವುದು.  ಖಾಸಾಗಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಗಳನ್ನ ಮೀಸಲಿಡಲು ಪಾಲಿಕೆ ಕಾರ್ಯನಿರ್ವಹಿಸುತ್ತಿದೆ.

ಅಪಾರ್ಟ್ ಮೆಂಟ್ ಗಳಿಗೆ ತೆರಳಿ ಅಲ್ಲಿನ ನಿವಾಸಿಗಳಿಗೆ ಕಡ್ಡಾಯವಾಗಿ ವ್ಯಾಕ್ಸಿನೇಶನ್ ಮಾಡಲು ಪಾಲಿಕೆ ನಿರ್ಧಾರ ಮಾಡಿದೆ. 

Follow Us:
Download App:
  • android
  • ios