Asianet Suvarna News Asianet Suvarna News

ಬೆಂಗಳೂರು ಹಬ್ಬಕ್ಕೆ ಬಿಬಿಎಂಪಿ 8 ವಲಯಗಳಿಂದಲೂ ಸಾಥ್‌ ನೀಡಿ: ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚನೆ

ಡಿಸೆಂಬರ್‌ 1ರಿಂದ ಬೆಂಗಳೂರಿನ ವಿವಿಧೆಡೆ ಅನ್‌ಬಾಕ್ಸಿಂಗ್‌ ಬೆಂಗಳೂರು ಹಬ್ಬ (UBH) ಆಚರಣೆಗೆ ಬಿಬಿಎಂಪಿ 8 ವಲಯಗಳಿಂದ ಸಹಕಾರ ನೀಡುವಂತೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

BBMP 8 zones cooperate to Unboxing Bengaluru Habba Commissioner Tushar Girinath instructed sat
Author
First Published Nov 18, 2023, 8:58 PM IST | Last Updated Nov 18, 2023, 9:01 PM IST

ಬೆಂಗಳೂರು (ನ.18): ಬೆಂಗಳೂರು ನಗರದಾದ್ಯಂತ ಅನ್‌ಬಾಕ್ಸಿಂಗ್ ಬೆಂಗಳೂರು ಪೌಂಡೇಷನ್ ವತಿಯಿಂದ ಡಿಸೆಂಬರ್-2023ರ ಮಾಹೆಯಲ್ಲಿ 'ಬೆಂಗಳೂರು ಹಬ್ಬ'ಕ್ಕೆ (Bengalueru Habba) ಪಾಲಿಕೆಯ ಆಯಾ ವಲಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಮುಖ್ಯ ಆಯುಕ್ತರ ತುಷಾರ್ ಗಿರಿನಾಥ್ ಪಾಲಿಕೆಯ 8 ವಲಯಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ಹಬ್ಬ ಆಚರಣೆಗೆ ಪಾಲಿಕೆ ಸಹಕಾರ ನೀಡುವ ಸಂಬಂಧ ಪಾಲಿಕೆ ಕೇಂದ್ರ ಕಛೇರಿ ಮುಖ್ಯ ಆಯುಕ್ತರ ಕಛೇರಿಯಲ್ಲಿ ಇಂದು ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಘನತೆ ಹಾಗೂ ಬೆಂಗಳೂರಿನ ಬ್ರಾಂಡ್ ಅನ್ನು ಹೆಚ್ಚಿಸುವ ಸಲುವಾಗಿ ಇದೇ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ಹಬ್ಬವನ್ನು ಆಚರಿಸಲಾಗುತ್ತಿದ್ದು, ಅದಕ್ಕೆ ಬೇಕಾದಂತಹ ಸಹಕಾರವನ್ನು ಪಾಲಿಕೆಯಿಂದ ನೀಡಬೇಕಿದೆ. ಈ ನಿಟ್ಟಿನಲ್ಲಿ ಆಯಾ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು ಸೂಕ್ತ ಕ್ರಮಗಳನ್ನು ಕೈಗೊಂಡು ಅಗತ್ಯ ಸಹಕಾರವನ್ನು ನೀಡಬೇಕೆಂದು ಸೂಚನೆ ನೀಡಿದರು.

ಬೆಂಗಳೂರಲ್ಲಿ ವಾಸಿಸಲು ಯೋಗ್ಯ ಏರಿಯಾ ಯಾವುದು? ಬಹುಜನರ ಆಯ್ಕೆ ಇಲ್ಲಿದೆ ನೋಡಿ..!

ಬೆಂಗಳೂರು ಹಬ್ಬವನ್ನು 2024ರಿಂದ ಆಯಾ ಖುತುವಿಗೆ ತಕ್ಕಂತೆ ಹಬ್ಬಗಳನ್ನು ಆಚಾರಿಸಲಾಗುತ್ತದೆ. ಬೆಂಗಳೂರು ಹಬ್ಬಕ್ಕೆ ಪ್ರಮುಖ ಸ್ಥಳ, ಜಂಕ್ಷನ್‌ಗಳು, ಮೇಲುಸೇತುವೆ, ಉದ್ಯಾನವನಗಳು, ಮಾರುಕಟ್ಟೆಗಳನ್ನು ಗುರುತಿಸಿ ಸದರಿ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸಬೇಕು. ಜೊತೆಗೆ ಪಾರಂಪರಿಕ ಕಟ್ಟಡಗಳು ಹಾಗೂ ಪ್ರಮುಖ ಸರ್ಕಾರಿ ಕಛೇರಿಗಳ ಮೇಲೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲು ಸೂಚಿಸಿದರು. ಬೆಂಗಳೂರು ಹಬ್ಬದ ನಿರ್ದೇಶಕರಾದ ರವಿಚಂದರ್ ಮಾತನಾಡಿ, ಅನ್ ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್ ವತಿಯಿಂದ ಡಿಸೆಂಬರ್ 1 ರಿಂದ 11 ರವರೆಗೆ ಅನ್ ಬಾಕ್ಸಿಂಗ್ ಬಿ.ಎಲ್.ಆರ್ ಹಬ್ಬವನ್ನು ಆಚರಿಸಲಾಗುತ್ತಿದ್ದು,  ಅದನ್ನು 12 ವರ್ಗಗಳಾಗಿ ವಿಂಗಡಿಸಿ 45 ಮಾದರಿಗಳಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಬೆಂಗಳೂರು ಹಬ್ಬದ ಆಚರಿಸುವ ಸಂಬಂದ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಗುವುದು. ಬೆಂಗಳೂರು ಹಬ್ಬ ಆಚರಣೆಯ ಕುರಿತು https://habba.unboxingblr.com/ ವೆಬ್‌ಸೈಟ್ ನಲ್ಲಿ ಸಂಪೂರ್ಣ ವಿವರಗಳನ್ನು ನಾಗರಿಕರು ಪಡೆದುಕೊಂಡು ನೋಂದಣಿಯಾಗಬಹುದಾಗಿದೆ ಎಂದು ತಿಳಿಸಿದರು.

ಓಪನ್ ಸ್ಟ್ರೀಟ್ ಮೇಳ: ನಗರದಲ್ಲಿ ಆಯ್ದ ಪ್ರಮುಖ 6 ರಸ್ತೆಗಳಲ್ಲಿ ಡಿಸೆಂಬರ್ 9 ಹಾಗೂ 10ನೇ ತಾರೀಖು ಎರಡು ದಿನಗಳ ಓಪನ್ ಸ್ಟ್ರೀಟ್ ಮೇಳವನ್ನು ಆಯೋಜಿಸಲಾಗಿದ್ದು, ಈ ಮೇಳದಲ್ಲಿ ಅಲ್ಪ ಬೆಲೆಯ ಮಾರುಕಟ್ಟೆ ಮಳಿಗೆಗಳು, ಸ್ಟ್ರೀಟ್ ಆರ್ಟಿಸ್ಟ್ಸ್ ಅಲಂಕಾರಗೊಳಿಸುದು, ಬಂಟಿಂಗ್ ಮತ್ತು ಲೈಟಿಂಗ್ ಸೇರಿದಂತೆ ನಾಗರಿಕರನ್ನು ಸೆಳಯಲು ಆಕರ್ಷಕ ರೀತಿಯ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತದೆ.

BBMP 8 zones cooperate to Unboxing Bengaluru Habba Commissioner Tushar Girinath instructed sat

ದಿ ಬಿಗ್ ಫೀಡ್ ಫೆಸ್ಟಿವಲ್: ಡಿಸೆಂಬರ್ 9 ರಿಂದ 10ನೇ ತಾರೀಖಿನಂದು ಬಿಗ್ ಫೀಡ್ ಫೆಸ್ಟಿವಲ್ ಕಾರ್ಯವನ್ನು ಬೆಂಗಳೂರು ಅರಮನೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದು, ಎರಡು ದಿನಗಳ ಕಾಲ ಸದರಿ ಸ್ಥಳದಲ್ಲಿ ಫುಡ್ ಸ್ಟಾಲ್, ಸಂಗೀತ ಕಾರ್ಯಕ್ರಮ, ಮಾರುಕಟ್ಟೆ ಸ್ಟಾಲ್ಸ್ ಹಾಗೂ ಇತರೆ ಮನರಂಜನಾ ಕಾರ್ಯಕ್ರಮಗಳನ್ನು ಅಯೋಜಿಸಲಾಗುವುದು ಎಂದು ತಿಳಿಸಿದರು. ಈ ಸಭೆಯಲ್ಲಿ ಎಲ್ಲಾ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು ಹಾಗೂ ಉಪ ಆಯುಕ್ತರು(ಅಡಳಿತ) ರವರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು ಬಡವರ ಬದುಕು ಅತಂತ್ರ: ಫುಟ್‌ಪಾತ್‌ ವ್ಯಾಪಾರಿಗಳ ಶೆಡ್‌, ತಳ್ಳುಗಾಡಿ ಹೊತ್ತೊಯ್ದ ಬಿಬಿಎಂಪಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಯಲ್ಲಿ ಲಾಂಛನ ಬಿಡುಗಡೆ ಮಾಡಿಸಿದ ಸಂಸ್ಥೆ: ಅನ್‌ಬಾಕ್ಸಿಂಗ್‌ ಬೆಂಗಳೂರು ಪ್ರತಿಷ್ಠಾನದವರೊಂದಿಗೆ ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಭಾಗವಹಿಸಿ, ಡಿಸೆಂಬರ್‌ 1ರಿಂದ ಬೆಂಗಳೂರಿನ ವಿವಿಧೆಡೆ ಹಮ್ಮಿಕೊಳ್ಳಲು ಉದ್ದೇಶಿಸಿರುವ ಅನ್‌ಬಾಕ್ಸಿಂಗ್‌ ಬೆಂಗಳೂರು ಹಬ್ಬ (UBH) ಕುರಿತು ಚರ್ಚಿಸಿ ಅದರ ಲೋಗೋ ಬಿಡುಗಡೆಗೊಳಿಸಲಾಯಿತು.  ಬೆಂಗಳೂರಿನ ಕಲೆ, ಸಂಸ್ಕೃತಿ, ಸಾಹಿತ್ಯ, ಆಹಾರ ಮೊದಲಾದವುಗಳನ್ನು ಪರಿಚಯಿಸಲು ರೂಪಿಸುವ ಅನ್‌ಬಾಕ್ಸಿಂಗ್‌ ಬೆಂಗಳೂರು ಕಾರ್ಯಕ್ರಮ ಬ್ರ್ಯಾಂಡ್‌ ಬೆಂಗಳೂರು ಸೃಷ್ಟಿಸುವ ನಮ್ಮ ಕನಸಿಗೆ ಪೂರಕವಾಗಿದೆ. ಬೆಂಗಳೂರಿನ ಇತಿಹಾಸ, ಕಲೆ, ಸಂಸ್ಕೃತಿಯನ್ನು ಸಮಸ್ತ ನಾಗರಿಕರಿಗೆ ತಿಳಿಸುವ ಈ ವಿನೂತನ ಕಾರ್ಯಕ್ರಮವು , ಬೆಂಗಳೂರಿನ ವೈಭವವನ್ನು ಕಟ್ಟಿಕೊಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios