ಚೀರನಹಳ್ಳಿ ಗ್ರಾಮದ ಆದಿಶಕ್ತಿ ಉರಗಮ್ಮದೇವಿ ಹಾಗೂ ಮಸಣಮ್ಮದೇವಿ ದೇವಸ್ಥಾನದಲ್ಲಿ ಬಸವಪ್ಪ ಆಗಮಿಸಿದ್ದು ಇಲ್ಲಿ ಪವಾಡವನ್ನೇ ಮಾಡಿತು
ಮಂಡ್ಯ (ಫೆ.04): ತಾಲೂಕಿನ ಚೀರನಹಳ್ಳಿ ಗ್ರಾಮದ ಆದಿಶಕ್ತಿ ಉರಗಮ್ಮದೇವಿ ಹಾಗೂ ಮಸಣಮ್ಮದೇವಿ ದೇವಸ್ಥಾನ ವತಿಯಿಂದ ಮೊದಲನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಆದಿಶಕ್ತಿ ಉರುಗಮ್ಮ ದೇವಿಯ ಕಣಿ ಗುಡ್ಡನ ಪಡೆಯುವ ದೇವತಾ ಕಾರ್ಯ ನಡೆಯಿತು.
ಚಿಕ್ಕಅರಸಿನಕೆರೆ ಶ್ರೀ ಕಾಲಭೈರವೇಶ್ವರ ಬಸವಪ್ಪ ಆಗಮಿಸಿದ್ದು ಇಲ್ಲಿ ಪವಾಡವನ್ನೇ ಮಾಡಿತು. ಅರ್ಚಕರ ಕುಟುಂಬದ ಹಿನ್ನೆಲೆಯುಳ್ಳು ವ್ಯಕ್ತಿಯನ್ನು ಕೊಂಬಿನಲ್ಲಿ ತಳ್ಳಿಕೊಂಡು ಹೋಗಿ ನೀರಿಗೆ ಹಾಕಿ ಉರಗಮ್ಮ ದೇವಿ ದೇವಾಲಯಕ್ಕೆ ಕಣಿಗುಡ್ಡನನನ್ನು ನೇಮಿಸಿತು.
ಭಕ್ತಿ-ಭಾವದಿಂದ ಈ ಬಸವಪ್ಪನಿಗೆ ನಡೆದುಕೊಳ್ಳುತ್ತಿದ್ದರು ಅಂಬಿ!
ಬಳಿಕ ಗ್ರಾಮದಲ್ಲಿ ಚಿಕ್ಕಅರಸಿನಕೆರೆ ಬಸವಪ್ಪ ಹಾಗೂ ಬೀರೇಶ್ವರಸ್ವಾಮಿ ಹಾಲು ಕಂಬಿ ಮಲೆ ಬೀರೇಶ್ವರಸ್ವಾಮಿ ಬಸವಪ್ಪಗಳ ಮೆರವಣಿಗೆ ನಡೆಯಿತು.
ಬೆಳಗ್ಗೆ ದೇವಾಲಯದಲ್ಲಿ ಕಳಸ ಆರಾಧನೆ, ನವಗ್ರಹ ಪೂಜೆ, ಗಣಹೋಮ, ದುರ್ಗಹೋಮ, ದೇವರಿಗೆ ಪಂಚಮೃತ ಅಭಿಷೇಕ, ನಿತ್ಯವಿಧಿ ಪೂಜೆ, ಪುಣ್ಯಹುತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಡಾ.ಜಿ.ವಿ.ಸತ್ಯನಾರಾಯಣ ಮತ್ತು ಸಂಗಡಿಗರು ಪೂಜಾ ನೇತೃತ್ವ ವಹಿಸಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 4, 2021, 11:04 AM IST