Blood letter: ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಸಿಎಂಗೆ ರಕ್ತದಲ್ಲಿ ಪತ್ರ ಬರೆದ ಬಸವರಾಜ ಪೂಜಾರಿ!

ಮಾದಿಗ ಸಮಾಜಕ್ಕೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ನಿ.ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿಯನ್ನು ಜಾರಿಗೊಳಿಸಲು ಆಗ್ರಹಿಸಿ ದಲಿತ ಮುಖಂಡರೊಬ್ಬರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

Basavaraja Pujari wrote a letter in blood to the CM demanding the implementation of the Sadashiva report at tangadagi rav

ವಿಜಯಪುರ (ಫೆ.1) : ಮಾದಿಗ ಸಮಾಜಕ್ಕೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ನಿ.ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿಯನ್ನು ಜಾರಿಗೊಳಿಸಲು ಆಗ್ರಹಿಸಿ ದಲಿತ ಮುಖಂಡರೊಬ್ಬರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಜಿಲ್ಲಾ ದೌರ್ಜನ್ಯ ತಡೆ ಸದಸ್ಯ ಮುದ್ದೇಬಿಹಾಳ ತಾಲೂಕಿನ ಸಿದ್ದಾಪೂರ ಪಿ.ಟಿ ಗ್ರಾಮದ ಬಸವರಾಜ ಪೂಜಾರಿ(Basavaraj Pujary) ಅವರೇ ಸಿಎಂಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಸಿರಿಂಜ್(Syringe) ಮೂಲಕ ರಕ್ತ ತೆಗೆದು ಪತ್ರ..! 

ಮುಖ್ಯಮಂತ್ರಿಗಳಿಗೆ(Cm Basavaraj Bommai) ಪತ್ರ ಬರೆಯಲು ಬಸವರಾಜ್ ಪೂಜಾರಿ ತಮ್ಮ ಕೈಯಿಂದ ಸಿರಿಂಜ್ ಮೂಲಕ ರಕ್ತ ತೆಗೆದಿದ್ದಾರೆ.‌ ಹಾಗೆ ತೆಗೆದ ರಕ್ತದಲ್ಲಿ ಸಿಎಂ ಅವರಿಗೆ ಮಾದಿಗ ಸಮುದಾಯ(Madiga community)ಕ್ಕೆ ಒಳಮೀಸಲಾತಿಗೆ ಆಗ್ರಹಿಸಿದ್ದಾರೆ. ರಕ್ತವನ್ನ  ಫೌಂಟೆನ್ ಪೆನ್ ಗೆ ಹಾಕಿ ಬಳಿಕ ಸುದೀರ್ಘ ಪತ್ರ ಬರೆದಿದ್ದಾರೆ.

ಬೇಡಿಕೆಗೆ ಈಡೇರಿಸಲು ಆಗ್ರಹ:

ಹಲವಾರು ವರ್ಷಗಳಿಂದ ಒಳಮೀಸಲು ಕಲ್ಪಿಸುವ ಸಂಬಂಧ ಮಾದಿಗ ಜನಾಂಗದಿಂದ ಹೋರಾಟ ಮಾಡುತ್ತಿದ್ದರೂ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸುವ ಕಾರ್ಯ ರಾಜ್ಯ ಸರಕಾರ ಮಾಡುತ್ತಿಲ್ಲ. ಇದು ಮಾದಿಗ ಜನಾಂಗದವರಿಗೆ ತೀವ್ರ ನೋವುಂಟು ಮಾಡಿದೆ. ಅಲ್ಲದೇ ಈಗ ಸದಾಶಿವ ವರದಿ ಜಾರಿಗೊಳಿಸದಿದ್ದಲ್ಲಿ ಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದಾಗಿ ತಿಳಿಸಿದ್ದಾರೆ. 

ತಂಗಡಗಿಯಲ್ಲಿ ಸಿಎಂ ರಕ್ತಪತ್ರ ಮನವಿ..

ಇಂದು ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಕ್ಕೆ‌ ಸಿಎಂ ಆಗಮಿಸುತ್ತಿದ್ದು, ಮಧ್ಯಾಹ್ನ 3.50ಕ್ಕೆ ಹೆಲಿಕಾಪ್ಟರ್ ಮೂಲಕ ಆಗನಿಸುವ ಸಿಎಂ ಹಡಪದ ಸಮಾಜ ಜನ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ತಿದ್ದಾರೆ. ಇದೆ ವೇಳೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ‌. ಈ ಸಮಾವೇಶದ ಬಳಿಕ ಬಸವರಾಜ್ ಪೂಜಾರಿ ತಾವು ಬರೆದ ರಕ್ತಪತ್ರವನ್ನ ಸಿಎಂಗೆ ನೀಡಲಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿಯೇ ಸದಾಶಿವ ಆಯೋಗದ ವರದಿ ಮಂಡಿಸಿ; ದಸಂಸ ಆಗ್ರಹ

Latest Videos
Follow Us:
Download App:
  • android
  • ios