ಪೊಲೀಸ್‌ ಮಕ್ಕಳ ವಸತಿ ಶಾಲೆ ಮುಚ್ಚುವ ಹುನ್ನಾರ| ಕೊರೋ​ನಾದಿಂದ ಅನೇಕ ತಿಂಗಳಿಂದ ಶಿಕ್ಷಕರಿಗೆ ವೇತನವಿಲ್ಲ| ಸರ್ಕಾರ 15 ದಿನಗಳಲ್ಲಿ ಬೇಡಿಕೆ ಈಡೇರಿಸದೇ ಇದ್ದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚ​ರಿ​ಸಿ​ದ ಹೊರಟ್ಟಿ| 

ಧಾರ​ವಾ​ಡ(ಡಿ.06): 1995ರ ಬಳಿಕ ಪ್ರಾರಂಭಿಸಲಾದ ಅರ್ಹ ಅನುದಾನರಹಿತ ಶಾಲಾ ಕಾಲೇಜುಗಳಿಗೆ ಅನುದಾನ ಸೇರಿ​ದಂತೆ ವಿವಿಧ ಬೇಡಿ​ಕೆ​ಗ​ಳಿಗೆ ಆಗ್ರ​ಹಿಸಿ ಮಾಜಿ ಸಚಿವ ಬಸ​ವ​ರಾಜ್‌ ಹೊರಟ್ಟಿ ನೇತೃ​ತ್ವ​ದಲ್ಲಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರ ಹಾಗೂ ಆಡಳಿತ ಮಂಡಳಿಗಳ ಹೋರಾಟ ಸಮನ್ವಯ ಸಮಿತಿ ಪದಾ​ಧಿ​ಕಾ​ರಿ​ಗಳು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರದಿಂದ ಉಪ​ವಾಸ ಸತ್ಯಾ​ಗ್ರಹ ಆರಂಭಿ​ಸಿ​ದ್ದಾರೆ. 

ಈ ಸಂದ​ರ್ಭ​ದಲ್ಲಿ ಮಾತ​ನಾ​ಡಿದ ಬಸ​ವ​ರಾಜ್‌ ಹೊರಟ್ಟಿ, ಖಾಸಗಿ ಶಾಲೆಗಳ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಾಲ್ಕೈದು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿ, ಸದನದಲ್ಲಿ ಸಹ ಪ್ರಸ್ತಾಪಿಸಿದ್ದೇ​ನೆ. ಸಿದ್ದರಾಮಯ್ಯ ಸರ್ಕಾರ ಸೇರಿ ಇಂದಿನ ಸರ್ಕಾರವೂ ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಉತ್ತರ ಕರ್ನಾಟಕದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬಂದ್‌ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಎಚ್ಚ​ರಿ​ಸಿ​ದರು. ಜೊತೆಗೆ ಪೊಲೀಸ್‌ ಮಕ್ಕಳ ವಸತಿ ಶಾಲೆ ಮುಚ್ಚುವ ಹುನ್ನಾರ ನಡೆದಿದೆ. ಕೊರೋ​ನಾದಿಂದ ಅನೇಕ ತಿಂಗಳಿಂದ ಶಿಕ್ಷಕರಿಗೆ ವೇತನವಿಲ್ಲ. ಹೀಗಾಗಿ ಸರ್ಕಾರ 15 ದಿನಗಳಲ್ಲಿ ಬೇಡಿಕೆ ಈಡೇರಿಸದೇ ಇದ್ದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚ​ರಿ​ಸಿ​ದರು.

ಕುಮಾರಸ್ವಾಮಿ ಹೇಳಿಕೆಯಲ್ಲಿ ಸತ್ಯ ಇರುತ್ತೆ

ಕುಮಾರಸ್ವಾಮಿ ಅವರು ಏನೇ ಹೇಳಿದರೂ ಅದರಲ್ಲಿ ಸತ್ಯವಿರುತ್ತದೆ. ರಾಜ್ಯದಲ್ಲಿ ಯಾರಿಗೂ ಮಾಹಿತಿ ಇಲ್ಲದ್ದು ಅವರಿಗೆ ಗೊತ್ತಿರುತ್ತದೆ. ಆದ್ದರಿಂದಲೇ ಜನೇವರಿಯಲ್ಲಿ ಸರ್ಕಾರದಲ್ಲಿ ಬದಲಾವಣೆ ಇದೆ ಎಂದು ಹೇಳಿದ್ದಾರೆಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದರು.

ಸರಕು ಸಾಗಾಣಿಕೆ: ಹುಬ್ಬಳ್ಳಿ ರೈಲ್ವೆ ವಿಭಾಗ ಸಾಧನೆ

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ 105 ಮತ್ತು 17ರ ಮಧ್ಯೆ ತಿಕ್ಕಾಟ ನಡೆದಿದೆ. 17 ಜನ ಬಂದ ಮೇಲೆ ಸರ್ಕಾರ ರಚನೆಯಾಗಿದೆ. ಅವರಿಗೆಲ್ಲ ಮಂತ್ರಿ ಕೊಡಬೇಕಾಗುತ್ತದೆ. ವಿಶ್ವನಾಥರು ಆರೋಪ ಮಾಡಿರೋದು ಸಹಜ. ರಾಜಕಾರಣದಲ್ಲಿ ಎಲ್ಲ ಪಕ್ಷದವರು ದುಡ್ಡು ಕೊಡುವುದು ಸಹಜ. ಒಬ್ಬರು ತಗೋತಾರೆ, ಮತ್ತೊಬ್ಬರು ಚೆಕ್‌ ತಗೋತಾರೆ. ಇದೂ ಸಹ ಸಹಜ.

ಲೋಕಸಭಾ ಚುನಾವಣೆಯಲ್ಲಿ ಎಂಟು ಸೀಟು ತೆಗೆದುಕೊಳ್ಳಿ ಎಂದು ಬಿಜೆಪಿಯಿಂದ ಆಫರ್‌ ಬಂದಿತ್ತು. ಸಿಎಂ ಆಗಿ ಮುಂದುವರೆಯಲು ಹೇಳಿದ್ದರು. ಜಾತ್ಯಾತೀತ ನಿಲುವು ಹಿನ್ನೆಲೆ ದೇವೇಗೌಡರು ಬಿಜೆಪಿ ಜೊತೆ ಬೇಡ ಅಂದಿದ್ದರು. ಗೌಡರು ಏನೇ ಹೇಳಿದರೂ ಅದರಲ್ಲಿ ಆದರ್ಶವಿರುತ್ತದೆ. ಆದರೆ, ಇವರೆಲ್ಲ ಗೌಡರನ್ನೂ ಟೀಕೆ ಮಾಡುತ್ತಾರೆ ಎಂದ ಹೊರಟ್ಟಿ, ಸಿದ್ದರಾಮಯ್ಯನವರ ಜೊತೆಗೆ ಕುಮಾರಸ್ವಾಮಿಯವರು ಕೈಜೋಡಿಸೋದು ಬೇಡ ಎಂದು ನಾವು ಮೊದಲೇ ಹೇಳಿದ್ದೆವು. ಕೊಂಚ ತಡೆದುಕೊಳ್ಳಿ ಎಂದಿದ್ದೆವು. ಸಿದ್ದರಾಮಯ್ಯ ಜೆಡಿಎಸ್‌ ಮುಗಿಸೋದು ನನ್ನ ಕೆಲಸ ಅಂದಿದ್ದಾರೆ. ದೋಸ್ತಿ ಸರ್ಕಾರದಲ್ಲಿ ಸಿದ್ದು-ಎಚ್ಡಿಕೆ ಜೊತೆಯಾಗಿ ಕುಳಿತು ಮಾತನಾಡುವ ಸ್ಥಿತಿ ನಿರ್ಮಾಣವಾಗಲಿಲ್ಲ, ಇಬ್ಬರೂ ಕುಳಿತು ಮಾತನಾಡಬಹುದಿತ್ತು, ಸಮನ್ವಯತೆಯಿಂದ ಹೋಗಬೇಕಿತ್ತು. ಆದರೆ, ಇದು ಒತ್ತಾಯದ ಮದುವೆ ಆದಂತಾಯಿತು ಎಂದು ಅಂದಿನ ಸಂದರ್ಭವನ್ನು ಹೊರಟ್ಟಿ ಸ್ಮರಿಸಿದರು.