ನೂರಾರು ಕೊರೋನಾ ಸೋಂಕಿತರ ಪ್ರಾಣ ಉಳಿಸಿದ ಸಚಿವ ಬೊಮ್ಮಾಯಿ

* ಅರ್ಧ ಗಂಟೆಯಲ್ಲಿ 40 ಸಿಲಿಂಡರ್‌ ವ್ಯವಸ್ಥೆ ಮಾಡಿಸಿದ ಸಚಿವ ಬೊಮ್ಮಾಯಿ
* ಸಕಾಲಿಕ ನೆರವಿನಿಂದ ಪ್ರಾಣಾಪಾಯದಿಂದ ಪಾರಾದ ನೂರಾರು ರೋಗಿಗಳು 
*  ಹಾವೇರಿ ಜಿಲ್ಲೆಯ ರಾಣಿಬೆನ್ನೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಘಟನೆ 
 

Basavaraj Bommai Provided Oxygen to Government Hospital at Ranibennur in Haveri grg

ರಾಣಿಬೆನ್ನೂರು(ಮೇ.12):ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಎಲ್ಲೆಡೆ ಆಕ್ಸಿಜನ್‌ ಹಾಗೂ ಬೆಡ್‌ ಸಮಸ್ಯೆ ಕಾಡುತ್ತಿದೆ. ಇಂತಹ ಸಮಯದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಕಾಲಿಕ ನೆರವಿನಿಂದ ನೂರಾರು ರೋಗಿಗಳ ಪ್ರಾಣ ಉಳಿದ ಘಟನೆ ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಜರುಗಿದೆ.

Basavaraj Bommai Provided Oxygen to Government Hospital at Ranibennur in Haveri grg

ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ 4.30ರ ಸುಮಾರು ದಿಢೀರ್‌ ಆಕ್ಸಿಜನ್‌ ಕೊರತೆಯಾಗಿ ವೈದ್ಯರಿಗೆ ಆತಂಕ ಮೂಡಿಸಿತ್ತು. ಕೂಡಲೇ ವೈದ್ಯರು ಸ್ಥಳಿಯ ಶಾಸಕ ಅರುಣಕುಮಾರ ಪೂಜಾರ ಗಮನಕ್ಕೆ ತಂದಿದ್ದಾರೆ. 

"

ಕೊರೋನಾ ತಡೆಗೆ ಸರ್ಕಾರ ವಿಫಲ: ಕಾಂಗ್ರೆಸ್‌ MLC ಶ್ರೀನಿವಾಸ ಮಾನೆ 

Basavaraj Bommai Provided Oxygen to Government Hospital at Ranibennur in Haveri grg

ತಕ್ಷಣವೇ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಯಿ ಅವರಿಗೆ ವಿಷಯ ತಿಳಿಸಿ, ನೆರವು ನೀಡುವಂತೆ ಕೋರಿದ್ದಾರೆ. ಅದಕ್ಕೆ ಸ್ಪಂದಿಸಿದ ಸಚಿವರು ದಾವಣಗೆರೆ ಜಿಲ್ಲಾಧಿಕಾರಿ ಜತೆ ಮಾತನಾಡಿ ಅರ್ಧ ಗಂಟೆಯಲ್ಲಿ 40 ಸಿಲಿಂಡರ್‌ ವ್ಯವಸ್ಥೆಯನ್ನು ಮಾಡಿಸಿದರು. ಇದರಿಂದಾಗಿ ಸ್ಥಳೀಯ ಆಸ್ಪತ್ರೆಯ ನೂರಾರು ರೋಗಿಗಳು ಪ್ರಾಣಾಪಾಯದಿಂದ ಪಾರಾದರು.
 

Latest Videos
Follow Us:
Download App:
  • android
  • ios