Asianet Suvarna News Asianet Suvarna News

ಬಸವಕಲ್ಯಾಣ ಉಪಸಮರ: ಅಕ್ರಮ ಪುರಾವೆ ನೀಡಿದ್ರೆ ಮೈದಾನದಲ್ಲೇ ನೇಣಿಗೆ ಶರಣು, ಸಲಗರ

ನಾನು ಅತೀ ಬಡ ಕುಟುಂಬದಲ್ಲಿ ಬಂದವನು. ನನಗೆ ಬಡತನದ ನಾಡಿ ಮಿಡಿತ ಗೊತ್ತಿದೆ| ಜನ ಸೇವೆಗಾಗಿ ನಾನು ಎಲ್ಲ ತ್ಯಾಗ ಮಾಡಿದ್ದೇನೆ| ನನ್ನ ಜನ ಸೇವೆ ಗಮನಿಸಿ ಬಿಜೆಪಿ ವರಿಷ್ಠರು ನನಗೆ ಟಿಕೆಟ್‌ ನೀಡಿದ್ದಾರೆ| ನಾನು ಭರ್ಜರಿ ಗೆಲುವು ಸಾಧಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶರಣು ಸಲಗರ| 

Basavakalyan BJP Canidate Sharanu Salagar Talks Over Illegal grg
Author
Bengaluru, First Published Mar 31, 2021, 12:17 PM IST

ಬಸವಕಲ್ಯಾಣ(ಮಾ.31): ಮಟ್ಕಾ, ಜೂಜು, ಬುಕ್ಕಿ ಮತ್ತು ಇನ್ನಿತರೆ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪುರಾವೆ ನೀಡಿದರೆ ನಗರದ ರಥ ಮೈದಾನದಲ್ಲಿ ನೇಣು ಹಾಕಿಕೊಳ್ಳುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಶರಣು ಸಲಗರ ಸವಾಲೆಸೆದರು.

ಮಂಗಳವಾರ ನಗರದ ಮಿನಿ ವಿಧಾನಸೌಧ ಬಳಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಹೊರಬಂದು ಸುದ್ದಿಗಾರೊಂದಿಗೆ ಮಾತನಾಡಿದ ಸಲಗರ, ನಾನು ಅತೀ ಬಡ ಕುಟುಂಬದಲ್ಲಿ ಬಂದವನು. ನನಗೆ ಬಡತನದ ನಾಡಿ ಮಿಡಿತ ಗೊತ್ತಿದೆ. ಜನ ಸೇವೆಗಾಗಿ ನಾನು ಎಲ್ಲ ತ್ಯಾಗ ಮಾಡಿದ್ದೇನೆ. ನನ್ನ ಜನ ಸೇವೆಯನ್ನು ಗಮನಿಸಿ ಬಿಜೆಪಿ ವರಿಷ್ಠರು ನನಗೆ ಟಿಕೆಟ್‌ ನೀಡಿದ್ದಾರೆ. ನಾನು ಭರ್ಜರಿ ಗೆಲುವು ಸಾಧಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸೇರಿದ ಜೆಡಿಎಸ್ ಹಿರಿಯ ನಾಯಕ, ಮಾಜಿ ಸಚಿವ

ಟಿಕೆಟ್‌ಗಾಗಿ ಹಣ ಕೊಟ್ಟಿದ್ದೇನೆ ಎಂದು ಆರೋಪಿಸುತ್ತಿದ್ದಾರೆ. ಆದರೆ ನಾನು ಲಾಕ್‌ಡೌನ್‌ ನಲ್ಲಿ ಜನರಿಗಾಗಿ ತಂದಿರುವ ಅಕ್ಕಿ ಮತ್ತು ಕಿರಾಣಿಯ ಬಾಕಿ ಇನ್ನೂ ಇದೆ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios