ಚಾಮರಾಜನಗರ [ಮಾ.17]:  ಗ್ರಾಮದ ಬಸವ ದೇಗುಲದ ಮೇಲೇರಿ ಕೋಪ ತಾಪ ಪ್ರದರ್ಶಿಸಿದ ಘಟನೆ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇಗುಲದಲ್ಲಿ ನಡೆದಿದೆ.

ಸೋಮವಾರ ನಡೆಯಬೇಕಿದ್ದ ದಿವ್ಯಲಿಂಗೇಶ್ವರ ಜಾತ್ರಾ ಮಹೋತ್ಸವವನ್ನು ಕೊರೋನಾ ವೈರಸ್‌ನಿಂದ ಮುಂದೂಡಲಾಗಿತ್ತು. ತೇರಿನ ಮುಂದೆ ಹೆಜ್ಜೆ ಹಾಕುತ್ತಿದ್ದ ಬಸವನನ್ನು ಈ ಬಾರಿ ಬಿಟ್ಟು ಉತ್ಸವಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ದೇಗುಲಕ್ಕೆ ಹಿಂತಿರುಗುವಾಗ ದೇಗುಲದ ಛಾವಣಿ ಮೇಲೆ ಬಸವ ಗಂಭೀರವದನನ್ನಾಗಿ ನಿಂತಿದ್ದು ಕೆಲವರಲ್ಲಿ ಭಕ್ತಿ, ಆತಂಕ ಉಂಟು ಮಾಡಿತು.

ಕಾರವಾರ ದೇವರಿಗೆ ಮದ್ಯದ ಅಭಿಷೇಕ, ಸಿಗರೇಟಿನ ಆರತಿ : ಸಿದ್ಧಿಯಾಗುತ್ತೆ ಇಷ್ಟಾರ್ಥ...

ಛಾವಣಿ ಮೇಲೇರಲು ಜಾಗವಿದ್ದು ಆಗಾಗ್ಗೆ ಬಸವ ಹತ್ತುತ್ತಾನೆ. ಆದರೆ, ಈ ಬಾರಿ ಕೊರೊನಾ ಕಾರಣದಿಂದ ರಥೋತ್ಸವ ರದ್ದಾಗಿದ್ದರಿಂದ ಬಸವನನ್ನು ಕರೆದೊಯ್ದಿರಲಿಲ್ಲ, ದೇವರು ದೇಗುಲಕ್ಕೆ ಬರುವ ವೇಳೆಗೆ ಬಸವ ಛಾವಣಿ ಮೇಲೇರಿ ಸ್ವಾಗತ ಕೋರಿದ್ದಾನೆ ಎಂದು ಗ್ರಾಮಸ್ಧರು ತಿಳಿಸಿದರು. ನಂತರ ಬಸವನನ್ನು ಜೋಪಾನವಾಗಿ ಕೆಳಕ್ಕೆ ಇಳಿಸಲಾಯಿತು.