Asianet Suvarna News Asianet Suvarna News

ನಮಗೆ ನ್ಯಾಯ ಕೊಡದೆ ಹೋದ್ರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಸಮಸ್ಯೆ: ಕೂಡಲ ಶ್ರೀ

ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೇಲೆ ಕರೆದು ಚರ್ಚೆ ಮಾಡ್ತಿನಿ ಅಂದಿದ್ರು. ಆದ್ರೆ ನಾಲ್ಕು ತಿಂಗಳಾಯ್ತು ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಕೊಡ್ತಾ ಇಲ್ಲ. ಎಲ್ಲೊ ಒಂದು ಕಡೇ ಸಮಾಜವನ್ನು ಸಿಎಂ ಸಿದ್ದರಾಮಯ್ಯನವರು ನಿರ್ಲಕ್ಷ್ಯ ಮಾಡ್ತಿದ್ದಾರೆ. ಸರ್ಕಾರದ ಬಗ್ಗೆ ನಮಗೆಲ್ಲ ಅಸಮಾಧಾನ ಇದೆ: ಪಂಚಮಸಾಲಿ ಸಮಾಜದ ಬಸವಜಯಮೃತ್ಯುಂಜಯ ಸ್ವಾಮೀಜಿ 

Basava Jayamrutunjaya Swamiji Talks Over Karnataka Congress Government grg
Author
First Published Nov 6, 2023, 12:00 AM IST

ಗಂಗಾವತಿ(ನ.06):  ನಮಗೆ ನ್ಯಾಯ ಕೊಡದೆ ಹೋದ್ರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಸಮಸ್ಯೆ ಆಗುತ್ತದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಗಂಭೀರವಾಗಿ ಚಿಂತನೆ ಮಾಡಬೇಕು. ನಾವು ಇಷ್ಟೊಂದು ಹೋರಾಟ ಮಾಡಿದ್ರೂ ಸಿದ್ದರಾಮಯ್ಯನವರು ನಿರ್ಲಕ್ಷ್ಯ ಮಾಡ್ತಿದ್ದಾರೆ. ನೀವು ಹೀಗೆ ಮಾಡಿದ್ರೆ ನಿಮಗೂ ದೊಡ್ಡ ಸಮಸ್ಯೆ ಆಗುತ್ತೆ ಎಂದು ಪಂಚಮಸಾಲಿ ಸಮಾಜದ ಬಸವಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಸಿದ ನೀಡಿದ್ದಾರೆ. 

ನಿನ್ನೆ(ಭಾನುವಾರ) ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವಕ್ಕೆ ಪಂಚಮಸಾಲಿ ಸಮಾಜದ ಬಸವಜಯಮೃತ್ಯುಂಜಯ ಸ್ವಾಮೀಜಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಶ್ರೀಗಳು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯಲ್ಲಿ ಹಿಂದಿನ ಸರ್ಕಾರ 2 ಡಿ ಮೀಸಲಾತಿ ನೀಡಿತ್ತು. ಅದಕ್ಕೆ ನಾವು ಸ್ವಾಗತ ಮಾಡಿದ್ದೆವು. ಆದ್ರೆ ಚುನಾವಣೆ ನೀತಿ ಸಂಹಿತೆ ಜಾರಿ ಆಗಿ ಅದು ಅನುಷ್ಠಾನ ಆಗ್ಲಿಲ್ಲ. ಆದ್ರೆ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೇಲೆ ಕರೆದು ಚರ್ಚೆ ಮಾಡ್ತಿನಿ ಅಂದಿದ್ರು. ಆದ್ರೆ ನಾಲ್ಕು ತಿಂಗಳಾಯ್ತು ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಕೊಡ್ತಾ ಇಲ್ಲ. ಎಲ್ಲೊ ಒಂದು ಕಡೇ ಸಮಾಜವನ್ನು ಸಿಎಂ ಸಿದ್ದರಾಮಯ್ಯನವರು ನಿರ್ಲಕ್ಷ್ಯ ಮಾಡ್ತಿದ್ದಾರೆ. ಸರ್ಕಾರದ ಬಗ್ಗೆ ನಮಗೆಲ್ಲ ಅಸಮಾಧಾನ ಇದೆ ಎಂದು ಹೇಳಿದ್ದಾರೆ. 

ಗಂಗಾವತಿ: ಕರ್ನೂಲ್ ತಾತಾ ದರ್ಗಾ ಅಭಿವೃದ್ದಿಗೆ ಬದ್ಧ: ಶಾಸಕ ಜನಾರ್ದನ ರೆಡ್ಡಿ

ಲೋಕಸಭಾ ಚುನಾವಣೆ ಒಳಗೆ ನಮ್ಮ ಸಮಾಜಕ್ಕೆ ನ್ಯಾಯ ಕೊಡಬೇಕು. ನವೆಂಬರ್ 10 ರಂದು ದಾವಣಗೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಲಿಂಗ ಪೂಜೆ ಸಲ್ಲಿಸುವ ಮೂಲಕ ಹೋರಾಟ ಮಾಡುತ್ತೇವೆ ಎಂದು ಸ್ವಾಮೀಜಿ ಅವರು ತಿಳಿಸಿದ್ದಾರೆ.  ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಉಪಸ್ಥಿತಿ ಇದ್ದರು. 

Follow Us:
Download App:
  • android
  • ios