Asianet Suvarna News

ಸಿಎಂ ಯಡಿಯೂರಪ್ಪಗೆ ಮತ್ತೊಮ್ಮೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ..!

* ಸಿಎಂ ಮೀಸಲಾತಿ ಮಾತು ತಪ್ಪಿದರೆ ಮತ್ತೆ ಹೋರಾಟ: ಕೂಡಲಶ್ರೀ
* ಕೊರೋನಾ ಹಾವಳಿಯಲ್ಲಿ ಸಮುದಾಯದ ಸಂಘಟನೆಗೆ ತೊಡಕು
* ಸೆಪ್ಟೆಂಬರ್‌ವರೆಗೂ ಸಮಯ ಕೇಳಿದ ಮುಖ್ಯಮಂತ್ರಿ ಬಿಎಸ್‌ವೈ
 

Basava Jayamrutunjaya Swamiji Talks Over CM BS Yediyurappa grg
Author
Bengaluru, First Published Jun 24, 2021, 3:05 PM IST
  • Facebook
  • Twitter
  • Whatsapp

ಹಗರಿಬೊಮ್ಮನಹಳ್ಳಿ(ಜೂ.24): ಪಂಚಮಸಾಲಿ ಮೀಸಲಾತಿ ಹೋರಾಟ ನಿಂತಿಲ್ಲ. ಮುಖ್ಯಮಂತ್ರಿಯವರು ಸೆಪ್ಟೆಂಬರ್‌ವರೆಗೂ ಸಮಯ ಕೇಳಿದ್ದಾರೆ. ಬೇಡಿಕೆ ಈಡೇರಿಸುವರೆಂಬ ವಿಶ್ವಾಸವಿದೆ. ಒಂದು ವೇಳೆ ಮಾತು ತಪ್ಪಿದರೆ ಸಮುದಾಯದವರು ಹೋರಾಟಕ್ಕೆ ಸನ್ನದ್ಧರಾಗಿದ್ದಾರೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. 

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಹಾವಳಿಯಲ್ಲಿ ಸಮುದಾಯದ ಸಂಘಟನೆಗೆ ತೊಡಕಾಯಿತು. ಅಲ್ಲದೇ ಸರ್ಕಾರದ ಆದೇಶ ಪಾಲನೆ ಮಾಡಲಾಗಿತ್ತು. ಲಾಕ್‌ಡೌನ್‌ಪರಿಣಾಮ ಸಂಕಷ್ಟದಲ್ಲಿರುವವರಿಗೆ ಸಾಂತ್ವನ ಮತ್ತು ಧೈರ್ಯ ತುಂಬುವ ಕಾರ್ಯ ಮಾಡಲಾಗಿದೆ. ಈಗ ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಇದರಿಂದ ಪ್ರತಿಯೊಬ್ಬರಿಗೂ ಒಳ್ಳೆಯ ದಿನಗಳು ಬರುತ್ತವೆ ಎಂದರು.

ಸಿಎಂ ಬದಲಾವಣೆ ವಿಚಾರ: ವರಿಷ್ಠರಿಗೆ ಒತ್ತಡ ಹಾಕಲ್ಲ ಎಂದ ಜಯಮೃತ್ಯುಂಜಯ ಶ್ರೀ

ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ಜಿಲ್ಲಾಧ್ಯಕ್ಷ ಭದ್ರವಾಡಿ ಚಂದ್ರಶೇಖರ್‌, ರಾಜ್ಯ ಯುವ ಘಟಕದ ಉಪಾಧ್ಯಕ್ಷ ನಂದಿವೀರೇಶ್‌, ಜಿಲ್ಲಾ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಗೌಡ, ತಾಲೂಕು ಅಧ್ಯಕ್ಷ ನರೆಗಲ್‌ಕೊಟ್ರೇಶ್‌, ರೈತ ಘಟಕದ ರಾಜ್ಯಾಧ್ಯಕ್ಷ ಅಮರೇಶ್‌ನಾಗೂರ್‌, ನರೆಗಲ್‌ಮಲ್ಲಿಕಾರ್ಜುನ, ಚಿತ್ತವಾಡ್ಗಿ ಪ್ರಕಾಶ್‌, ಚಿತ್ತವಾಡ್ಗಿ ಕಲ್ಲೇಶ್‌, ಎಸ್‌. ಶಿವಪುತ್ರಪ್ಪ ಎತ್ತಿನಮನಿ, ಸಿ.ನಂದೀಶ್‌, ಸಿ. ಸಿದ್ದೇಶ, ಆನಂದ್‌ಎತ್ತಿನಮನಿ ಮತ್ತಿತರರು ಇದ್ದರು.
 

Follow Us:
Download App:
  • android
  • ios