Asianet Suvarna News Asianet Suvarna News

ಈಗ ಸತೀಶ್ ಜಾರಕಿಹೊಳಿ ವಿರುದ್ಧ ಯತ್ನಾಳ್ ವಿವಾದಿತ ಹೇಳಿಕೆ

ರಾಜ್ಯದಲ್ಲಿ ಉಪ ಚುನಾವಣೆ ಸಮೀಪಿಸಿದ್ದು, ಇದೇ ವೇಳೆ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಗೆಲುವಿಗಾಗಿ ಯತ್ನಗಳು ನಿರಂತರವಾಗಿ ಸಾಗುತ್ತಿದ್ದು, ಇದೇ ವೇಳೆ ಬೆಳಗಾವಿ ಲೋಕಸಭಾ ಉಪ ಚುನಾವಣೆ ಅಭ್ಯರ್ಥಿ ವಿರುದ್ಧ ವಿವಾದಿತ ಹೇಳಿಕೆ ನೀಡಲಾಗಿದೆ. 

Basanagouda patil Yatnal controversial Statement On Satish Jarkiholi snr
Author
Bengaluru, First Published Apr 11, 2021, 9:10 AM IST

ಧಾರವಾಡ (ಏ.11): ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಸತೀಶ್‌ ಜಾರಕಿಹೊಳಿ ಆಯ್ಕೆಯಾದರೆ ಜಿಲ್ಲೆಯಲ್ಲಿ ಭಯೋತ್ಪಾದನೆ ಪ್ರಾರಂಭವಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದರು. ಅದರಲ್ಲಿ ಸತೀಶ್‌ ಜಾರಕಿಹೊಳಿ ಕೈವಾಡವಿತ್ತು. ಈ ರೀತಿ ತುಷ್ಟೀಕರಣ ಹೆಚ್ಚಾಗುತ್ತದೆ. ಸತೀಶ್‌ ಆಯ್ಕೆಯಾದರೆ ಕೋಮು ಗಲಭೆ ಹೆಚ್ಚುತ್ತದೆ ಎಂದು ಆರೋಪಿಸಿದರು.

BSY ಮತ್ತು ವಿಜಯೇಂದ್ರಗೆ ಯತ್ನಾಳ್ ಮತ್ತೊಂದು ಸವಾಲು.. ನಿಜ ಬಣ್ಣ ಬಯಲು! .

ಬಿಜೆಪಿ ಶಾಸಕರು ಬಿಜೆಪಿ ಪರ ಕೆಲಸ ಮಾಡಬೇಕು. ಆದರೆ, ಸತೀಶ್‌ ಬಿಜೆಪಿ ನಾಯಕರನ್ನು ಖರೀದಿಸಲು ಯತ್ನಿಸುತ್ತಿದ್ದಾರೆ. ಐದಾರು ಕೋಟಿ ಒಬ್ಬೊಬ್ಬ ಶಾಸಕನಿಗೆ ಕೊಡಲು ಹಣ ಅವರಲ್ಲಿದೆ. ಆದರೆ, ಅದು ಸಾಧ್ಯವಾಗುವುದಿಲ್ಲ. ಬಿಜೆಪಿಯ ನಾಯಕರು ಬೆಳಗಾವಿಯ ತಮ್ಮ ಕ್ಷೇತ್ರದಲ್ಲಿ ಲೀಡ್‌ ತೋರಿಸಬೇಕು. ಲೀಡ್‌ ಕಡಿಮೆ ಆದಲ್ಲಿ ಮುಂದೆ ದುಷ್ಪರಿಣಾಮ ಅನುಭವಿಸುತ್ತಾರೆ ಎಂದರು.

ನಾನು ಸಿಎಂ ಸ್ಥಾನ ಅಪೇಕ್ಷಿಸಿಲ್ಲ. ಪಕ್ಷ ನಿರ್ಣಯ ಮಾಡುವುದನ್ನು ಹೇಳಲಾಗದು. ಸದ್ಯ ಅರುಣ ಸಿಂಗ್‌ ಅವರ ತಪ್ಪೋ ಅಥವಾ ನನ್ನ ತಪ್ಪೋ ಎನ್ನುವುದು ಮೇ.2ಕ್ಕೆ ಗೊತ್ತಾಗುತ್ತದೆ. ನಾಯಕರನ್ನು ಮಾಡುವುದು ರಾಜ್ಯದ ಜನತೆ ಹೊರತು ಅರುಣ ಸಿಂಗ್‌ ಅವರಲ್ಲ ಎಂದರು.

Follow Us:
Download App:
  • android
  • ios