Asianet Suvarna News Asianet Suvarna News

ಆ.14ರಂದು ಡಾ ಬನ್ನಂಜೆ ಗೋವಿಂದಾಚಾರ್ಯ ಮ್ಯೂಸಿಯಂ ಉದ್ಘಾಟನೆ , ಜ್ಞಾನದೇಗುಲ ಪ್ರಶಸ್ತಿ ಪ್ರದಾನ

ಈಶಾವಾಸ್ಯ ಪ್ರತಿಷ್ಠಾನ ಉಡುಪಿ- ಬೆಂಗಳೂರು ಇದರ ಆಶ್ರಯದಲ್ಲಿ ವಿದ್ವಾಂಸ ಪದ್ಮಶ್ರೀ , ವಿದ್ಯಾವಾಚಸ್ಪತಿ ದಿವಂಗತ ಡಾ ಬನ್ನಂಜೆ ಗೋವಿಂದಾಚಾರ್ಯರ ಸ್ಮರಣಾರ್ಥ ಅವರ ಸ್ವಗೃಹ ಉಡುಪಿ ಅಂಬಲಪಾಡಿಯ ಈಶಾವಾಸ್ಯಂ ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ ಬನ್ನಂಜೆ ಸ್ಮಾರಕ ಅಹಲ್ಯಾ ವಿಜಯಾಂಗಣ ಮ್ಯೂಸಿಯಂ ಉದ್ಘಾಟನೆ.

bannanje govindacharya museum inaugurate On August 14 at Udupi rbj
Author
Bengaluru, First Published Aug 11, 2022, 8:26 PM IST

ಉಡುಪಿ. (ಆಗಸ್ಟ್. 11):  ಡಾ ಬನ್ನಂಜೆ ಸ್ಮಾರಕ ಅಹಲ್ಯಾ ವಿಜಯಾಂಗಣ ಮ್ಯೂಸಿಯಂ ಉದ್ಘಾಟನೆ ಮತ್ತು ಜ್ಞಾನದೇಗುಲ ಪ್ರಶಸ್ತಿ ಪ್ರದಾನ‌ ಸಮಾರಂಭ ಆಗಸ್ಟ್ 14ರಂದು ನಡೆಯಲಿದೆ.

ಈಶಾವಾಸ್ಯ ಪ್ರತಿಷ್ಠಾನ ಉಡುಪಿ- ಬೆಂಗಳೂರು ಇದರ ಆಶ್ರಯದಲ್ಲಿ ವಿದ್ವಾಂಸ ಪದ್ಮಶ್ರೀ , ವಿದ್ಯಾವಾಚಸ್ಪತಿ ದಿವಂಗತ ಡಾ ಬನ್ನಂಜೆ ಗೋವಿಂದಾಚಾರ್ಯರ ಸ್ಮರಣಾರ್ಥ ಅವರ ಸ್ವಗೃಹ ಉಡುಪಿ ಅಂಬಲಪಾಡಿಯ ಈಶಾವಾಸ್ಯಂ ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ ಬನ್ನಂಜೆ ಸ್ಮಾರಕ ಅಹಲ್ಯಾ ವಿಜಯಾಂಗಣ ಮ್ಯೂಸಿಯಂ ಉದ್ಘಾಟನೆ ಮತ್ತು ಜ್ಞಾನದೇಗುಲ ಪ್ರಶಸ್ತಿ ಪ್ರದಾನ‌ ಸಮಾರಂಭವು ಇದೇ ಬರುವ ಆಗಸ್ಟ್ 14 ರ ಸಂಜೆ 5.30 ಕ್ಕೆ ನೆರವೇರಲಿದೆ .‌

ಉಡುಪಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವದ ಸಂದರ್ಭದಲ್ಲೇ  ಹಿರಿಯರ ನೆನಪು 2022 ಎಂಬ ಶೀರ್ಷಿಕೆಯಲ್ಲಿ ಈ ಕಾರ್ಯಕ್ರಮ ಸಂಯೋಜಿಸಲಾಗಿದೆ .ಕಳೆದ ವರ್ಷ ಈಶಾವಾಸ್ಯಂ ನಲ್ಲಿ ನವೀಕೃತ ಶ್ರೀ ಗುರುರಾಯರ ಮೃತ್ತಿಕಾ ವೃಂದಾವನ ಸನ್ನಿಧಿಯ ಸಮರ್ಪಣೋತ್ಸವ ಮತ್ತು ಡಾ ಬನ್ನಂಜೆಯವರ ಪುತ್ಥಳಿ ಅನಾವರಣಾ ಕಾರ್ಯಕ್ರಮವೂ ನಡೆದಿತ್ತು .‌

ಇದೀಗ ಅಲ್ಲೇ ಡಾ ಆಚಾರ್ಯರ ಸಾಹಿತ್ಯ ಕೃಷಿ , ಕೃತಿಗಳಿಗೆ ಸಂಬಂಧಿಸಿದ ಮ್ಯೂಸಿಯಂ ನ್ನು ನಿರ್ಮಿಸಲಾಗಿದ್ದು ಅದನ್ನು  ಡಾ ಆಚಾರ್ಯರ ಪತ್ನಿ ಅಹಲ್ಯಾ ಆಚಾರ್ಯ ಮತ್ತು ಎರಡುವರ್ಷಗಳ ಹಿಂದೆ ಅಗಲಿದ ಆಚಾರ್ಯರ ಪುತ್ರ ವಿಜಯಭೂಷಣ ಆಚಾರ್ಯರ ಸ್ಮರಣೆಯಲ್ಲಿ ಅಹಲ್ಯಾ ವಿಜಯಾಂಗಣ ಎಂದು ನಾಮಕರಣಗೊಳಿಸಲಾಗಿದೆ .‌

ಇದರ ಉದ್ಘಾಟನೆಯನ್ನು ಶ್ರೀ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ನೆರವೇರಿಸುವರು. ಇದೇ ವೇಳೆ  ಶಾಸಕ ಭಟ್ , ಡಾ ಉಷಾ ಚಡಗರಿಗೆ ಜ್ಞಾನದೇಗುಲ ಪ್ರಶಸ್ತಿವನೀಡಲಿರುವರು .‌ 

ಇದೇ ಸಂದರ್ಭದಲ್ಲಿ ಡಾ ಬನ್ನಂಜೆಯವರು ಹಿರಿಯರ ನೆನಪು ಎಂದು  ತಮ್ಮ ಮಾತಾಪಿತೃಗಳ ಸ್ಮರಣೆಯಲ್ಲಿ ಆರಂಭಿಸಿದ ಜ್ಞಾನದೇಗುಲ ಪ್ರಶಸ್ತಿ ಪ್ರದಾನವೂ ನಡೆಯಲಿದೆ . ಈ ವರ್ಷದ ಪ್ರಶಸ್ತಿಗೆ ಉಡುಪಿಯ ಜನಪ್ರಿಯ ಶಾಸಕ ಕೆ ರಘುಪತಿ ಭಟ್ ಮತ್ತು ಇತ್ತೀಚೆಗೆ ಮಾಧ್ವ ತತ್ತ್ವಶಾಸ್ತ್ರದ ಕುರಿತು ಸಂಶೋಧನಾತ್ಮಕ ಪ್ರಬಂಧ ಮಂಡಿಸಿ ಪಿಎಚ್ ಡಿ ಪಡೆದ ಏಕೈಕ ಮಹಿಳೆ ಡಾ ಉಷಾ ಚಡಗ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಢಾನದ ಪ್ರಕಟಣೆ ತಿಳಿಸಿದೆ .

Follow Us:
Download App:
  • android
  • ios