ಮನಿ ಭಾಗ್ಯ: ಅಕ್ಕಿ ರೊಕ್ಕಕ್ಕಾಗಿ ಬ್ಯಾಂಕ್‌ಗಳು ರಶ್‌..!

ರಾಜ್ಯ ಸರ್ಕಾರ ಅಕ್ಕಿ ಬದಲಾಗಿ ಬಿಪಿಎಲ್‌ ಕಾರ್ಡ್‌ದಾರರ ಬ್ಯಾಂಕ್‌ ಖಾತೆಗೆ ನೇರವಾಗಿ 170 ಹಣ ಪಾವತಿಸುವುದಾಗಿ ಹೇಳಿ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದಂತೆ ಫಲಾನುಭವಿಗಳು ಆಧಾರ್‌, ಪಾನ್‌ ಕಾರ್ಡ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ಹಿಡಿದು ಬ್ಯಾಂಕ್‌ನತ್ತ ಧಾವಿಸುತ್ತಿದ್ದಾರೆ. ಖಾತೆಗೆ ಜಮಾ ಮಾಡಿದ ಹಣ ಪಡೆಯುಲು ತಾಸುಗಟ್ಟಲೆ ನಿಲ್ಲುತ್ತಿದ್ದು, ಇದರಿಂದ ಇತರೆ ಗ್ರಾಹಕರಿಗೆ ಕಿರಿಕಿರಿಯಾಗಿದೆ.

Banks Rush For Aadhaar Card Link Bank Account at Rabakavi Banahatti in Bagalkot grg

ರಬಕವಿ-ಬನಹಟ್ಟಿ(ಜು.18):  ಆಧಾರ ಕಾರ್ಡ್‌ ಬ್ಯಾಂಕ್‌ಗೆ ಲಿಂಕ್‌ ಮಾಡಿಸಲು ಮತ್ತು ಅಕ್ಕಿ ರೊಕ್ಕ ಬ್ಯಾಂಕ್‌ ಖಾತೆಗೆ ಜಮಾ ಆಗಿದ್ದನ್ನು ಖಾತರಿಪಡಿಸಿಕೊಳ್ಳಲು ಜನರು ಬ್ಯಾಂಕ್‌ಗಳಿಗೆ ಮುಗಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ ಸೋಮವಾರ ಎಲ್ಲಾ ಬ್ಯಾಂಕ್‌ಗಳು ಫುಲ್‌ ರಶ್‌ ಆಗಿರುವುದು ಕಂಡುಬಂತು.

ರಾಜ್ಯ ಸರ್ಕಾರ ಅಕ್ಕಿ ಬದಲಾಗಿ ಬಿಪಿಎಲ್‌ ಕಾರ್ಡ್‌ದಾರರ ಬ್ಯಾಂಕ್‌ ಖಾತೆಗೆ ನೇರವಾಗಿ 170 ಹಣ ಪಾವತಿಸುವುದಾಗಿ ಹೇಳಿ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದಂತೆ ಫಲಾನುಭವಿಗಳು ಆಧಾರ್‌, ಪಾನ್‌ ಕಾರ್ಡ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ಹಿಡಿದು ಬ್ಯಾಂಕ್‌ನತ್ತ ಧಾವಿಸುತ್ತಿದ್ದಾರೆ. ಖಾತೆಗೆ ಜಮಾ ಮಾಡಿದ ಹಣ ಪಡೆಯುಲು ತಾಸುಗಟ್ಟಲೆ ನಿಲ್ಲುತ್ತಿದ್ದು, ಇದರಿಂದ ಇತರೆ ಗ್ರಾಹಕರಿಗೆ ಕಿರಿಕಿರಿಯಾಗಿದೆ.

ಬಡವರ ವಿರೋಧಿ ಬಿಜೆಪಿಗೆ ಬಡವರ ಶಾಪ ತಟ್ಟುತ್ತೆ: ಸಚಿವ ತಿಮ್ಮಾಪುರ

ಈವರೆಗೆ ಕೆಲವರ ಖಾತೆಗಳು ಶೂನ್ಯವಾಗಿದ್ದವು. ಈಗ ಅವುಗಳ ಅಪ್ಡೇಟ್‌ ಆಗದ ಕಾರಣ ಸರ್ಕಾರ ನೀಡುವ ಅನ್ನ ಭಾಗ್ಯದ ಹಣ ಮತ್ತು ಪರಿಹಾರದ ಹಣ ಜಮೆಯಾಗುವುದಿಲ್ಲ. ಹಾಗಾಗಿ ಖಾತೆ ಸರಿಪಡಿಸಿಕೊಳ್ಳಲೂ ಪಡಿತರದಾರರು ಬ್ಯಾಂಕ್‌ಗಳಿಗೆ ಮುಗಿ ಬಿದ್ದಿದ್ದಾರೆ.

ಬೆಳಗ್ಗೆ 8 ಗಂಟೆಗೇ ಬ್ಯಾಂಕ್‌ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇದರಿಂದ ಬ್ಯಾಂಕ್‌ ಸಿಬ್ಬಂದಿಗೆ ದಿನ ನಿತ್ಯದ ವಾಣಿಜ್ಯ, ವ್ಯಾಪಾರಿಗಳ ಖಾತೆ ನಿರ್ವಹಣೆ ಜೊತೆಗೆ ಸರ್ಕಾರದ ಯೋಜನೆಗಳು ಫಲಾನುಗಭವಿಗಳ ಖಾತೆಗೆ ಜಮಾ ಮಾಡುವುದು ತಲೆ ನೋವಾಗಿ ಪರಿಣಮಿಸಿದೆ. ಸೋಮವಾರವಂತೂ ಅವಳಿ ನಗರದ ಕೆನರಾ ಬ್ಯಾಂಕ್‌, ಎಸ್‌ಬಿಐ, ಬ್ಯಾಂಕ್‌ ಆಫ್‌ ಬರೋಡಾ, ಕರ್ಣಾಟಕ್‌ ಬ್ಯಾಂಕ್‌ ಸೇರಿದಂತೆ ಇನ್ನಿತರ ನ್ಯಾಷನಲ್‌ ಬ್ಯಾಂಕ್‌ಗಳು ಫುಲ್‌ ರಶ್‌ ಆಗಿದ್ದವು.

Latest Videos
Follow Us:
Download App:
  • android
  • ios