ಬಡವರ ವಿರೋಧಿ ಬಿಜೆಪಿಗೆ ಬಡವರ ಶಾಪ ತಟ್ಟುತ್ತೆ: ಸಚಿವ ತಿಮ್ಮಾಪುರ
ರಾಜ್ಯದ ಜನತೆಗೆ ಒಳ್ಳೆಯ ಕೆಲಸವನ್ನು ಮಾಡಿದರೆ ಬಿಜೆಪಿಯವರು ಅಸೂಯೆ ಪಡುತ್ತಾರೆ. ಅಕ್ಕಿ ಕೊಟ್ಟರೆ ಎಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜನ ಪ್ರಶಂಸೆ ವ್ಯಕ್ತಪಡಿಸುತ್ತಾರೆ ಎಂದು ಕೇಂದ್ರ ಹೆಚ್ಚುವರಿ ಅಕ್ಕಿ ನೀಡಲಿಲ್ಲ. ಬಿಜೆಪಿಯವರು ಬಡವರ ವಿರೋಧಿಗಳಾಗಿದ್ದಾರೆ. ಇವರಿಗೆ ಬಡವರ ಶಾಪ ತಟ್ಟುತ್ತೆ: ಸಚಿವ ಆರ್.ಬಿ.ತಿಮ್ಮಾಪುರ
ಲೋಕಾಪುರ(ಜು.16): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಬಡವರ, ದೀನ ದಲಿತರ, ಸಾಮಾಜಿಕ ನ್ಯಾಯದ ಪರವಾಗಿದೆ. ಬಜೆಟ್ ಬಗ್ಗೆ ಪ್ರಶಂಸಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆಯವರು ಪತ್ರ ಬರೆದಿದ್ದು ಇದಕ್ಕೆ ಸಾಕ್ಷಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಶನಿವಾರ ಪಟ್ಟಣದ ಉದಪುಡಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಒಳ್ಳೆಯ ಕೆಲಸವನ್ನು ಮಾಡಿದರೆ ಬಿಜೆಪಿಯವರು ಅಸೂಯೆ ಪಡುತ್ತಾರೆ. ಅಕ್ಕಿ ಕೊಟ್ಟರೆ ಎಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜನ ಪ್ರಶಂಸೆ ವ್ಯಕ್ತಪಡಿಸುತ್ತಾರೆ ಎಂದು ಕೇಂದ್ರ ಹೆಚ್ಚುವರಿ ಅಕ್ಕಿ ನೀಡಲಿಲ್ಲ. ಬಿಜೆಪಿಯವರು ಬಡವರ ವಿರೋಧಿಗಳಾಗಿದ್ದಾರೆ. ಇವರಿಗೆ ಬಡವರ ಶಾಪ ತಟ್ಟುತ್ತೆ. ಕರ್ನಾಟಕ ಜನತೆ ಇದನ್ನು ನೋಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಆಮೆಗತಿಯಲ್ಲಿದ್ದರೆ ಯುಕೆಪಿಎಸ್ 150 ವರ್ಷವಾದ್ರು ಮುಗಿಯಲ್ಲ: ಬಿಜೆಪಿ ಎಂಎಲ್‌ಸಿ ಪೂಜಾರ
ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ವಿರೋಧ ಪಕ್ಷದ ನಾಯಕರಿಲ್ಲದೇ ಅಧಿವೇಶನ ನಡೆದಿದ್ದು ಇದೇ ಮೊದಲು. ರಾಜ್ಯದಲ್ಲಿ ಒಬ್ಬ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡದಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ದುರ್ದೈವದ ಸಂಗತಿ. ಮೋದಿ ನೇತೃತ್ವದ ಸರ್ಕಾರದಲ್ಲಿ ಆಗಬಾರದೆಲ್ಲ ಆಗುತ್ತಿವೆ. ಪ್ರಜಾಪ್ರಭುತ್ವ ವಿರೋಧಿ ನೀತಿಗೆ ಖಂಡನೀಯ ವ್ಯಕ್ತಪಡಿಸುತ್ತೇವೆ. ಅಷ್ಟರ ಮಟ್ಟಿಗೆ ಬಿಜೆಪಿ ದಿವಾಳಿಯಾಗಿದೆ ಎಂದರು.
ಇದೇ ವೇಳೆ ಪಟ್ಟಣದ ಸೈಕ್ಲಿಂಗ್ ಕ್ರೀಡಾಪಟು ವರ್ಷಾ ಹರೀಶ ಕುಳ್ಳೊಳ್ಳಿ ಇವರಿಗೆ ಒಂದು ಲಕ್ಷ ರು. ವೆಚ್ಚದ ರೇಸಿಂಗ್ ಸೈಕಲ್ ಅನ್ನು ಸಚಿವರು ವಿತರಿಸಿದರು. ಈ ವೇಳೆ ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಲೋಕಣ್ಣ ಕೊಪ್ಪದ, ಗುರುರಾಜ ಉದಪುಡಿ, ಸುಭಾಸ ಗಸ್ತಿ, ಗೋವಿಂದ ಕೌಲಗಿ, ಮಹೇಶ ಮಳಲಿ, ಎಂ.ಎಂ. ಹುಂಡೇಕಾರ, ಬಿ.ಕೆ.ಮಠದ, ಭೀರಪ್ಪ ಮಾಯಣ್ಣವರ, ಶಿವಯೋಗಿ ಗಂಗಣ್ಣವರ, ರಾಮಣ್ಣಾ ತುಬಾಕಿ, ಮಲ್ಲನಗೌಡ ಪಾಟೀಲ, ಭೀಮನಗೌಡ ಪಾಟೀಲ, ಸಚೀನ ಪಾಟೀಲ, ಕುಮಾರ ಶಿರಗುಂಪಿ, ಕೃಷ್ಣಾ ಜಟ್ಟೆನ್ನವರ, ಹಣಮಂತ ದುರ್ಗನ್ನವರ, ಅಬ್ದುಲ್ ರೆಹೆಮಾನ ತೊರಗಲ್, ಲೋಕಣ್ಣ ಉಳ್ಳಾಗಡ್ಡಿ, ಯಶವಂತ ಹರಿಜನ, ಕುಮಾರ ಕಾಳಮ್ಮನವರ, ರೇಖಾ ಪಾಟೀಲ, ನಾಗರಾಜ ಜೀರಗಾಳ ಅಪಾರ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆ ಬಗ್ಗೆ ಮುಖ್ಯಮಂತ್ರಿ, ನೀರಾವರಿ ಸಚಿವರ ಜೊತೆಗೆ ಬಾಗಲಕೋಟೆ-ವಿಜಯಪುರ ಜಿಲ್ಲೆಯ ಜನಪ್ರತಿಧಿಗಳೊಂದಿಗೆ, ರೈತರೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು ಅಂತ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದ್ದಾರೆ.