ಚಾಮರಾಜನಗರ [ಜೂ.27] : ನಗರದ ಅಂಗನವಾಡಿ ಕೇಂದ್ರವೊಂದರ ನಾಮಫಲಕದಲ್ಲಿ ಬಾಂಗ್ಲಾದೇಶ: 2 ಎಂದು ನಮೂದಿಸಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ಗಾಳಿಪುರ ಬಡಾವಣೆಯ ಎ.ಜೆ.ನ್ಯಾಯಬೆಲೆ ಅಂಗಡಿ ಸಮೀಪವಿರುವ ಅಂಗನವಾಡಿ ಕೇಂದ್ರಕ್ಕೆ ಬಾಂಗ್ಲಾದೇಶ: 2 ಎಂದು ಹೆಸರನ್ನಿಟ್ಟು 2 ವರ್ಷಗಳಾಗಿವೆ ಎಂಬುದು ಅಜಾದ್‌ ಹಿಂದೂ ಸೇನೆಯ ಆರೋಪವಾಗಿದೆ. ಅಜಾದ್‌ ಹಿಂದೂ ಸೇನೆ ವಿಚಾರ ಪ್ರಸ್ತಾಪ ಮಾಡುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಬೋರ್ಡ ತೆರವುಗೊಳಿಸಲಾಗಿದೆ. 

ಸರ್ಕಾರಿ ನಾಮಫಲಕಕ್ಕೆ ಬಾಂಗ್ಲಾದೇಶ ಎಂದು ಹೆಸರಿಟ್ಟರೂ ಜಿಲ್ಲಾಡಳಿತ ಯಾವುದೇ ಶಿಸ್ತುಕ್ರಮ ಕೈಗೊಳ್ಳದೇ ಮೀನಮೇಷ ಎಣಿಸುತ್ತಿದೆ. ಈಗಲಾದರೂ ಸಂಬಂಧಪಟ್ಟಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಜಾದ್‌ ಹಿಂದೂ ಸೇನೆ ಅಧ್ಯಕ್ಷ ಪೃಥ್ವಿ ಆಗ್ರಹಿಸಿದ್ದಾರೆ.