ಬೆಂಗಳೂರು [ಡಿ.16] : ನಡುರಸ್ತೆಯಲ್ಲೇ ಯುವತಿಯ ಮೇಲೆ ಯುವಕನೋರ್ವ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರಿನ ಮಹಾಲಕ್ಷ್ಮೀ  ಲೇಔಟ್ ನಲ್ಲಿ ಪ್ರಿಯಕರನೇ ಪ್ರಿಯತಮೆಯ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಯುವತಿಯನ್ನು ಆತನಿಂದ ರಕ್ಷಣೆ ಮಾಡಲಾಗಿದೆ.

ಬಳಿಕ ಸ್ಥಳೀಯ ಯುವಕರು ಪ್ರಿಯಕರನಿಗೆ ಥಳಿಸಿದ್ದು, ನುಡರಸ್ತೆಯಲ್ಲಿಯೇ ಯುವತಿಯ ಮೇಲೆ ಹಲ್ಲೆ ನಡೆಸಿದ ಆತನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಹಾಲಕ್ಷ್ಮೀಪುರ ಪೊಲೀಸ್ ಠಾಣೆಯ ಬಳಿಯಲ್ಲಿಯೇ ಈ ಘಟನೆ ನಡೆದಿದ್ದು, ಈ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದು, ಈ ವೇಳೆ ಇಬ್ಬರನ್ನು ಠಾಣೆಗೆ ಕರೆಸಿ ಬುದ್ದಿವಾದ ಹೇಳಲಾಗಿದೆ. 

ಸ್ವಂತ ಅಪಾರ್ಟ್‌ಮೆಂಟ್, ಖಾತೆಯಲ್ಲಿ ಲಕ್ಷ ಲಕ್ಷ ಹಣ : ವಿದ್ಯಾರ್ಥಿಗೆ ಇದೆಲ್ಲಾ ಬಂದಿದ್ದೆಲ್ಲಿಂದ?...

ಸಾರ್ವಜನಿಕವಾಗಿ ಯುವತಿಗೆ ಥಳಿಸಿರುವ ಸಂಬಂಧ ಯುವಕನಿಗೆ ಈ ರೀತಿ ನಡೆದುಕೊಳ್ಳದಂತೆ ತಿಳಿ ಹೇಳಲಾಗಿದೆ.