ಮಂಡ್ಯ(ಜ.21): ಶ್ರೀರಾಮುಲು ಬ್ರಿಗೇಡ್‌ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಚಂದ್ರಮತಿ ಪ್ರಕಾಶ್‌ ಅವರ ಹಸು ಒಂದು ದಿನಕ್ಕೆ 49.810 ಕೇಜಿ ಹಾಲು ಕರೆಯುವ ಮೂಲಕ ಪ್ರಥಮ ಬಹುಮಾನ ಮತ್ತು ಟ್ರೋಫಿಯನ್ನು ಪಡೆದುಕೊಂಡಿತು.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಮೈದಾನದಲ್ಲಿ ಈಚೆಗೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಬೆಂಗಳೂರು ಜೆ.ಪಿ.ನಗರದ ಚಂದ್ರಮತಿ ಪ್ರಕಾಶ್‌ ಅವರ ಹಸು ಎರಡು ಹೊತ್ತಿಗೆ 49.810 ಕೇಜಿ ಹಾಲು ಕರೆದು ಪ್ರಥಮ ಬಹುಮಾನ ಗಳಿಸಿ 1 ಲಕ್ಷ ರು. ಮತ್ತು ಟ್ರೋಫಿಯನ್ನು ಪಡೆಯಿತು. ಇನ್ನು ಬೆಂಗಳೂರಿನ ಪಾದರಾಯನಪಾಳ್ಯದ ಪೈ.ಸುರೇಶ್‌ ಅವರ ಹಸು 44.400 ಕೇಜಿ ಹಾಲು ನೀಡುವ ಮೂಲಕ ದ್ವಿತೀಯ ಸ್ಥಾನ 75,000 ರು. ಗಳಿಸಿತು. ಬೆಂಗಳೂರಿನ ಗೀತಾ ಯತೀಶ್‌ ಅವರ ಹಸು 36.200 ಕೇಜಿ ಹಾಲು ನೀಡುವ ಮೂಲಕ ತೃತೀಯ ಸ್ಥಾನ ಪಡೆದು 50,000 ರು. ಬಹುಮಾನ ತನ್ನದಾಗಿಸಿಕೊಂಡಿತು. ಮೈಸೂರಿನ ಲೋಕೇಶ್‌ ಅವರ ಹಸು 35.270 ಕೇಜಿ ಹಾಲು ನೀಡಿ 4ನೇ ಸ್ಥಾನ 25,000 ರು. ಗಳಿಸಿತು.

ಬೆಂಗ್ಳೂರಲ್ಲಿ ಸತ್ತವಗೆ ನಾಗಮಂಗಲದಲ್ಲಿ ಮರಣ ಪತ್ರ..!

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್‌ ಕುಮಾರ್‌ ನೇತೃತ್ವದ ವೈದ್ಯರ ತಂಡ ಸ್ಪರ್ಧೆಯನ್ನು ನಡೆಸಿಕೊಟ್ಟಿತು. ಸ್ಥಳದಲ್ಲೇ ಹಾಲು ಕರೆದು, ತೂಕ ಮಾಡಿ ಬಹುಮಾನ ಘೋಷಿಸಿದರು. ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಸಂತೋಷ್‌ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಿದರು. ಶ್ರೀರಾಮ ಬ್ರಿಗೇಡ್‌ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌, ಪುರಸಭೆ ಸದಸ್ಯರಾದ ಎಸ್‌. ನಂದೀಶ್‌, ಜಿ.ಎಸ್‌.ಶಿವು, ದರ್ಶನ್‌ ಲಿಂಗರಾಜು, ಉಮಾಶಂಕರ್‌ ಇದ್ದರು.

ಬಾಂಬ್ ಇಟ್ಟಲ್ಲಿಂದ, ನಿಷ್ಕ್ರಿಯಗೊಳಿಸಿದ ತನಕ, ಇಲ್ಲಿದೆ ಎಲ್ಲ ಫೊಟೋಸ್..!