ಬೆಂಗಳೂರು ಸಹಕಾರಿ ಬ್ಯಾಂಕ್‌ನಿಂದ 50 ಲಕ್ಷ ರೂ. ಸಾಲ ಪಡೆದರೆ ಬ್ಯಾಂಕ್‌ 1.41 ಕೋಟಿ ರೂ,. ಹಣ ಪಾವತಿಸವೇಕೆಂದು ಮನೆಯನ್ನೇ ಹರಾಜು ಹಾಕಿದೆ. ಮನನೊಂದ ಮುಸ್ಲಿಂ ದಂಪತಿ ವಿಕಾಸಸೌಧದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬೆಂಗಳೂರು (ಜ.10): ಬೆಂಗಳೂರು ಸಹಕಾರಿ ಬ್ಯಾಂಕ್‌ನಿಂದ ವ್ಯಾಪಾರಕ್ಕಾಗಿ 50 ಲಕ್ಷ ರೂ. ಸಾಲ ಪಡೆದ ದಂಪತಿಯಿಂದ ವ್ಯಾಂಕ್‌ ಈಗಾಗಲೇ 95 ಲಕ್ಷ ರೂ. ಹಣವನ್ನು ಪಾವತಿಸಿಕೊಂಡಿದ್ದರೂ, ನೀವು 1.41 ಕೋಟಿ ರೂ. ಹಣವನ್ನು ಪಾವತಿಸಬೇಕು ಎಂದು ಬ್ಯಾಂಕ್‌ ಸಿಬ್ಬಂದಿ ದಂಪತಿಯ ಮನೆಯನ್ನೇ ಹರಾಜು ಹಾಕಲು ಮುಂದಾಗಿದೆ. ಇದರಿಂದ ಮನನೊಂದ ಮುಸ್ಲಿಂ ದಂಪತಿ ವಿಧಾನ ಸೌಧದ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ ಮಾಡಿದ್ದಾರೆ.

ಬೆಂಗಳೂರಿನ ಜಗಜೀವನ ರಾಮ್ ನಗರ (ಜೆಜೆಆರ್ ನಗರ) ಗೋರಿಪಾಳ್ಯದ ನಿವಾಸಿ ಬೆಂಗಳೂರು ಸಹಕಾರ ಬ್ಯಾಂಕ್‌ನಿಂದ 50 ಲಕ್ಷ ರೂ. ಸಾಲ ಪಡೆದಿದ್ದರು. ಈ ದಂಪತಿ 2012ರಿಂದ ಈವರೆಗೆ 50 ಲಕ್ಷ ರೂ. ಸಾಲಕ್ಕೆ 95 ಲಕ್ಷ ರೂ. ಹಣವನ್ನು ಪಾವತಿ ಮಾಡಿದ್ದಾರೆ. ಆದರೂ , ನೀವು 1.41 ಕೋಟಿ ರೂ. ಹಣವನ್ನು ಪಾವತಿಸಬೇಕು ಎಂದು ಬ್ಯಾಂಕ್‌ನಿಂದ ನೋಟಿಸ್‌ ನಿಡಲಾಗಿದೆ. ಬಾಕಿ ಹಣ ಪಾವತಿಸದಿದ್ದರೆ ಮನೆಯನ್ನು ಹರಾಜು ಹಾಕಿದ್ದಾರೆ. ಈ ಬಗ್ಗೆ ಬ್ಯಾಂಕ್‌ ನೋಟಿಸ್‌ ಹಿಡಿದು ಸ್ಥಳೀಯ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಮನವಿ ಮಾಡಿಕೊಂಡು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಎರಡು ವರ್ಷಗಳಿಂದ ಅವರು ನ್ಯಾಯ ಕೊಡಿಸಿಲ್ಲ. ಹಾಗಾಗಿ, ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು ಜನತೆಗೆ ಆಸ್ತಿ ತೆರಿಗೆ ಬರೆ ಎಳೆದ ಬಿಬಿಎಂಪಿ; ನಗರಾಭಿವೃದ್ಧಿ ಮಂತ್ರಿಗೆ ಚಳಿ ಬಿಡಿಸಿದ ರಾಮಲಿಂಗಾರೆಡ್ಡಿ!

ಬ್ಯಾಂಕ್ ದಬ್ಬಾಳಿಕೆಯಿಂದ ಮನೆ ಉಳಿಸಿಕೊಡಲು ಮನವಿ: ಗೋರಿಪಾಳ್ಯದ ಶಾಯಿಸ್ತಾ ದಂಪತಿ ಬೆಂಗಳೂರು ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಮನೆಯನ್ನು ಅಡವಿಟ್ಟು ಶುಂಠಿ ವ್ಯಾಪಾರಕ್ಕೆ 50 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಸಾಲಕ್ಕಾಗಿ 3 ಕೋಟಿ ರೂ. ಮೌಲ್ಯದ ಮನೆಯನ್ನು ಕೇವಲ 1.41 ಕೋಟಿ ರೂ.ಗೆ ಮನೆಯನ್ನು ಹರಾಜು ಹಾಕಿದ್ದಾರೆ. ಇದರಿಂದ ಸಾಲ ಪಡೆದ ನಮಗೆ ಬ್ಯಾಂಕ್‌ ಅನ್ಯಾಯ ಮಾಡಿದ್ದು, ನಾವು ಬೀದಿಗೆ ಬಂದಿದ್ದೀವಿ. ಈ ಬಗ್ಗೆ ಸಚಿವ ಜಮೀರ್ ಅಹಮದ್‌ ಖಾನ್ ಅವರೂ ನ್ಯಾಯ ಕೊಡಿಸಿಲ್ಲ. ಈಗ ನಾವು ನ್ಯಾಯ ಸಿಗದೇ ಬಿದಿಗೆ ಬಂದಿದ್ದು, ವಿಕಾಸ ಸೌಧದ ಮುಂದೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಅದರಂತೆ ವಿಧಾನಸೌಧದ ಮುಂದೆ ಬಂದು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವಾಗ ಬೆಂಗಳೂರು ಪೊಲೀಸರು ಅದನ್ನು ತಡೆದಿದ್ದಾರೆ.

ಮನೆ ಖಾಲಿ ಮಾಡಿಸಲು ಕುಡಿವ ನೀರು, ವಿದ್ಯುತ್ ಸಂಪರ್ಕ ಕಡಿತ: ವೃದ್ಧ ದಂಪತಿ ಕತ್ತಲಲ್ಲಿ ಪರದಾಟ

ವಿಕಾಸ ಸೌಧ ಮುಂಭಾಗ ಶಾಹಿಸ್ತಾ ದಂಪತಿ ತಲೆ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸ್ತಿದ್ದವರನ್ನ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ತಡೆದಿದ್ದಾರೆ. ನಂತರ, ನ್ಯಾಯ ಸಿಗುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲವೆಂದು ಮುಸ್ಲಿಂ ದಂಪತಿ ಕುಟುಂಬ ಸಮೇತವಾಗಿ ಮಕ್ಕಳನ್ನು ಕರೆದುಕೊಂಡು ಬಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ನ್ಯಾಯ ಕೊಡಿಸಿ ಅಂತಾ ಎರಡು ವರ್ಷದಿಂದ ಸಚಿವ ಜಮೀರ್ ಮನೆಗೆ ಅಲೆದಾಡುತ್ತಿದ್ದರೂ ನಮಗೆ ನ್ಯಾಯ ಕೊಡಿಸಿಲ್ಲ ಅಂತಾ ಆತ್ಮಹತ್ಯೆಗೆ ಯತ್ನಿಸಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.