ಬಾಗಲಕೋಟೆ(ನ.28): ಮಹಾಮಾರಿ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ಪ್ರಸಿದ್ಧ ಬನಶಂಕರಿ ಜಾತ್ರೆ ರದ್ದು ಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಕೋವಿಡ್‌ ಹಿನ್ನೆಲೆಯಲ್ಲಿ ನಾಡಿನ ಶಕ್ತಿ ಪೀಠಗಳಲ್ಲೊಂದಾಗಿರುವ ರಾಜ್ಯ ಸರ್ಕಾರದ ಆದೇಶದನ್ವಯ ಬಾದಾಮಿಯ ಬನಶಂಕರಿ ದೇವಿ ಜಾತ್ರೆ ರದ್ದು ಪಡಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. 

ಪ್ರತಿವರ್ಷ ಬನದ ಹುಣ್ಣಿಮೆಯಿಂದ 1 ತಿಂಗಳ ಕಾಲ ಹಗಲು ರಾತ್ರಿಯಾಗಿ ಬಾದಾಮಿ ಜಾತ್ರೆ ನಡೆಯುತ್ತಿತ್ತು. ಜಾತ್ರೆಯ ನಿಮಿತ್ತ ಬಾದಾಮಿ ತಾಲೂಕಾಡಳಿತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯನ್ನ ರದ್ದು ಪಡಿಸಲು ತೀರ್ಮಾಣ ತೆಗೆದುಕೊಳ್ಳಲಾಗಿದೆ.

ಜೀವನದಲ್ಲಿ ಒಮ್ಮೆಯಾದ್ರೂ ನೋಡ್ಲೇಬೇಕು ಬಾದಾಮಿ ಬನಶಂಕರಿ ಜಾತ್ರೆ

ಜಾತ್ರೆ ದಿನದಂದು ಬನಶಂಕರಿ ಟ್ರಸ್ಟ್ ಕಮೀಟಿಯವರಿಗೆ ದೇವಿಗೆ ಪೂಜೆ ಸಲ್ಲಿಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಾಟಕ, ಸಿನಿಮಾ ಸೇರಿದಂತೆ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಹಾಕುವಂತಿಲ್ಲ ಎಂದು ಜಿಲ್ಲಾಡಳಿತ ಖಡಕ್‌  ಸೂಚನೆ ನೀಡಿದೆ. ಜನಸಂದಣಿಯಾಗಿ ಜನರು ಸೇರದಂತೆ ಸೂಕ್ತ ಕ್ರಮದ ಎಚ್ಚರಿಕೆ ಕೂಡ ನೀಡಲಾಗಿದೆ.