ಸಕಲೇಶಪುರ(ಜು.06): ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್‌-19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ತಾಲೂಕಿನ ಬಾಳ್ಳುಪೇಟೆಯ ವ್ಯಾಪಾರಸ್ಥರು ವಾರದಂತ್ಯದವರೆಗೆ ಸ್ವಯಂ ಪ್ರೇರಿತರಾಗಿ ಅರ್ಧ ಹೊತ್ತಿನ (ಆಫ್‌) ಲಾಕ್‌ಡೌನ್‌ ವಿಧಿಸಿಕೊಳ್ಳಲು ನಿರ್ಧರಿಸಿದ್ದಾರೆ. 

ನಾಳೆಯಿಂದ ಸೋಮವಾರದಿಂದ (ಜು.6) ಬಾಳ್ಳುಪೇಟೆ ಗ್ರಾಮದಲ್ಲಿ ಲಾಕ್‌ಡೌನ್‌ ಆಗಲಿದೆ. ವರ್ತಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷ ಬಿ.ಎನ್‌. ನಾಗೇಂದ್ರ ತಿಳಿಸಿದ್ದಾರೆ. ಅಗತ್ಯ ವಸ್ತುಗಳಿಗೆ ತೊಂದರೆಯಾಗದಂತೆ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿಗಳು ತೆರೆದು ವ್ಯಾಪಾರ ನೆಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಔಷಧಿ ಅಂಗಡಿಗಳನ್ನು ಹೊರತು ಪಡಿಸಿ ಉಳಿದ ವರ್ತಕರು ಸ್ವಯಂ ಪ್ರೇರಿತ ಲಾಕ್‌ಡೌನ್‌ ವಿಧಿಸಿಕೊಳ್ಳುತ್ತಿದ್ದೇವೆ. ಈ ನಿಟ್ಟಿನಲ್ಲಿ ಕೊರೋನಾ ವೈರಸ್‌ ತಡೆಗಟ್ಟಲು ಸಹಕರಿಸುತ್ತಿದ್ದೇವೆ ಎಂದರು.

ರೈತನ ಬಾಯಿಗೆ ಬಟ್ಟೆ ಕಟ್ಟಿಸುವ ಕಾನೂನಿನ ಅವಶ್ಯಕತೆ ಇತ್ತಾ?: ಕೋಡಿಹಳ್ಳಿ ಚಂದ್ರಶೇಖರ್‌

ತಾಲೂಕಿನ ಬೆಳಗೋಡು ಹೋಬಳಿಯ ಮೂಗಲಿ ಗ್ರಾಮದಲ್ಲಿ ವೃದ್ಧೆಯೊಬ್ಬರಿಗೆ ಕೋವಿಡ್‌ ಸೋಂಕು ಸಂಭವಿಸಿ ಮೃತ್ತಪಟ್ಟಿದ್ದರು. ನಂತರ ಆಕೆಯ ಮೊಮ್ಮಗನಿಗೂ ವೈರಸ್‌ ತಗುಲಿದ್ದು ಇದರಿಂದ ಜನ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

ಇಷ್ಟು ದಿನಗಳವರೆಗೂ ಹಸಿರು ವಲಯವಾಗಿದ್ದ ತಾಲೂಕು ಎರಡು ಪಾಸಿಟಿವ್‌ ಕೇಸ್‌ನಿಂದ ಜನರು ಭಯಭೀತರಾಗಿದ್ದು, ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಸ್ವಯಂ ಪ್ರೇರಿತರಾಗಿ ಮಾಡಿಕೊಂಡಿದ್ದಾರೆ.

ಬಾಳ್ಳುಪೇಟೆ ನಾಲ್ಕು ಜಿಲ್ಲೆಗಳಿಗೆ ಸಂಪರ್ಕಿಸುವ ಗ್ರಾಮವಾಗಿದ್ದು, ಇಲ್ಲಿಗೆ ದಿನನಿತ್ಯ ಪ್ರಯಾಣಿಕರು ಹಾಗೂ ಪ್ರೇಕ್ಷಿಣಿಯ ಸ್ಥಳ ನೋಡಲು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಬರುವುದ್ದರಿಂದ ವರ್ತಕರು ಮುನ್ನೆಚ್ಚರಿಕೆಯಿಂದ ಸ್ವಯಂ ಪ್ರೇರಿತರಾಗಿ ಮುಂದಾಗಿರುವುದು ಶ್ಲಾಘನೀಯವಾಗಿದೆ. ಈ ನಿರ್ಧಾರ ಇತರಿಗೂ ಮಾದರಿಯಾಗಲಿದೆ ಎಂದು ಪಿಡಿಒ ಪ್ರಭ ಹೇಳಿದರು.