ಬಳ್ಳಾರಿ: ಇನಾಂ ರದ್ದತಿ, ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಗೆ ಮೊದಲ ಸ್ಥಾನ, ಎಸಿ ಹೇಮಂತ ಕುಮಾರ

ಹಲವು ದಶಕಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಅದಕ್ಕೆ ಸರಿಯಾದ ಪಹಣಿ ಇಲ್ಲದ ಕಾರಣ ರೈತರಿಗೆ ಬ್ಯಾಂಕ್‍ಗಳಲ್ಲಿ ಸಾಲ ಸಿಗುತ್ತಿಲ್ಲ. ಸರಕಾರಿ ಯೋಜನೆಗಳಿಗೆ ಭೂಸ್ವಾಧೀನವಾದರೆ ಪರಿಹಾರ ಸಿಗದೆ ಸಂಕಷ್ಟಕ್ಕೊಳಗಾಗುತ್ತಿದ್ದರು. ಹೀಗಾಗಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯು ಮುತುವರ್ಜಿ ವಹಿಸಿ ರೈತರ ಹಿತದೃಷ್ಟಿಯಿಂದ ಇನಾಂ ರದ್ದತಿ ಅಭಿಯಾನ ಕೈಗೊಳ್ಳಲಾಗಿದೆ ಇದರಲ್ಲಿ ರಾಜ್ಯದಲ್ಲಿ ಬಳ್ಳಾರಿ ಪ್ರಥಮವಾಗಿರೋದು ಹೆಮ್ಮೆಯ ವಿಚಾರವಾಗಿದೆ.

Ballari District got First Rank in Cancellation of Inam Says AC Hemant Kumar grg

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ಆ.17): ಉಳುಮೆ ಮಾಡುತ್ತಿರೋ ರೈತರ ಭೂಮಿಯ ಪಹಣೆ ಪತ್ರದಲ್ಲಿ ಈವರೆಗೂ ಇನಾಂ ಭೂಮಿ ಎಂದು ದಾಖಲಾಗುತ್ತಿತ್ತು. ಇಂದಿಗೂ ಜಮೀನಿನ ಪಹಣಿಯಲ್ಲಿ ಕಲಂ ನಂಬರ್ 6ರಲ್ಲಿ ಮಾಲೀಕರ ಹೆಸರು ಇರದೇ ಇನಾಂ ಭೂಮಿ ಎಂದು ಇರುತ್ತಿತ್ತು. ಇನಾಂ ಜಮೀನುಗಳ ಮಾರಾಟ ಮಾಡಿದರೂ ಹಕ್ಕು ಬದಲಾವಣೆ ಅಗುತ್ತಿರಲಿಲ್ಲ. 

ಹೀಗಾಗಿ ಸರ್ಕಾರ 1978 ರಲ್ಲಿಯೇ ಇನಾಂ ರದ್ದತಿ ಕಾಯ್ದೆ ಜಾರಿಗೆ ತಂದಿತ್ತು.  ಆದ್ರೇ ಅದರ ಅನುಷ್ಠಾನ ಈವರೆಗೂ ಆಗಿರಲಿಲ್ಲ. 1978 ಮತ್ತು 1988 ರಿಂದಲೂ ಇನಾಂ ರದ್ದು‌ ಮಾಡಲು ರೈತರು ಅರ್ಜಿ ಸಲ್ಲಿಸಿದ್ರು ಈವರೆಗೂ ಪಹಣಿಯಲ್ಲಿ ಇನಾಂ ಭೂಮಿ ಎಂದು ಬರುತ್ತಿತ್ತು. 

ಬಳ್ಳಾರಿ: ಅನುಮತಿ ಇಲ್ಲದ ‘ಸತ್ಯಂ ಟಿನಿಟಾಟ್ಸ್‌’ ಶಾಲೆಗೆ ಬೀಗ

ಹೀಗಾಗಿ ಸರ್ಕಾರ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಕಳೆದ ಜನವರಿ 27ರ ವರೆಗೆ ಅವಕಾಶ ನೀಡಿತ್ತು.ಬಳ್ಳಾರಿ ಜಿಲ್ಲೆಯಲ್ಲಿ  11634 ಅರ್ಜಿ ಸೇರಿ ರಾಜ್ಯಾದ್ಯಂತ ಲಕ್ಷಾಂತರ ಅರ್ಜಿ ಬಂದಿದ್ದವು. ಇದೀಗ  ಬಳ್ಳಾರಿಯಲ್ಲಿ  ಮೊದಲ ಬಾರಿಗೆ 3264 ವಿಲೇವಾರಿ ಮಾಡೋ ಮೂಲಕ ದಾಖಲೆ ಬರೆದಿದ್ದಾರೆ.

ಮಧ್ಯವರ್ತಿಗಳಿಗೆ ಅವಕಾಶವಿಲ್ಲದ ಸರಳವಾಗಿ ಅರ್ಜಿ ಸಲ್ಲಿಸಬಹುದು

ರೈತರು ನಮೂನೆ 1 ಮತ್ತು 1ಎ ಸಲ್ಲಿಸಿದ್ದರೆ, ಈ ಕುರಿತು ಚರ್ಚಿಸಿ ಇತ್ಯರ್ಥ ಮಾಡಿ, ಯಾವುದೇ ವಿಳಂಬ ಇಲ್ಲದೇ ಹಕ್ಕುಪತ್ರ (ಪಟ್ಟಾ) ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಬಳ್ಳಾರಿ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ ಎಂದು ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಅವರು ತಿಳಿಸಿದ್ದಾರೆ. ಕೇವಲ ಸರ್ಕಾರದ ಶುಲ್ಕ ಪಾವತಿಸಿ ಪಟ್ಟಾ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ 1974 ರ ಹಿಂದಿನಿಂದಲೂ ಉಳುಮೆ ಮಾಡುತ್ತಿರುವವರಿಗೆ ಮಾತ್ರ ಪಟ್ಟಾ ನೀಡಲಿದ್ದೇವೆ ಎಂದು ಬಳ್ಳಾರಿ ಎಸಿ ಹೇಮಂತ ಕುಮಾರ ಸ್ಪಷ್ಟಪಡಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಸನ್ನದ್ಧರಾಗಿ: ಸಚಿವ ಸಂತೋಷ್‌ ಲಾಡ್‌

ಪಹಣಿಯಲ್ಲಿ ಹೆಸರಲ್ಲವಾದ್ರೇ ಬ್ಯಾಂಕ್ ನಲ್ಲಿ ಲೋನ್ ಸಿಕ್ತಿರಲಿಲ್ಲ

ಹಲವು ದಶಕಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಅದಕ್ಕೆ ಸರಿಯಾದ ಪಹಣಿ ಇಲ್ಲದ ಕಾರಣ ರೈತರಿಗೆ ಬ್ಯಾಂಕ್‍ಗಳಲ್ಲಿ ಸಾಲ ಸಿಗುತ್ತಿಲ್ಲ. ಸರಕಾರಿ ಯೋಜನೆಗಳಿಗೆ ಭೂಸ್ವಾಧೀನವಾದರೆ ಪರಿಹಾರ ಸಿಗದೆ ಸಂಕಷ್ಟಕ್ಕೊಳಗಾಗುತ್ತಿದ್ದರು. ಹೀಗಾಗಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯು ಮುತುವರ್ಜಿ ವಹಿಸಿ ರೈತರ ಹಿತದೃಷ್ಟಿಯಿಂದ ಇನಾಂ ರದ್ದತಿ ಅಭಿಯಾನ ಕೈಗೊಳ್ಳಲಾಗಿದೆ ಇದರಲ್ಲಿ ರಾಜ್ಯದಲ್ಲಿ ಬಳ್ಳಾರಿ ಪ್ರಥಮವಾಗಿರೋದು ಹೆಮ್ಮೆಯ ವಿಚಾರವಾಗಿದೆ.

ಇನ್ನೂ ಬಳ್ಳಾರಿ ಜಿಲ್ಲೆಯ ಐದು ತಾಲೂಕಿನಿಂದ 11,643 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 3,264 ಅರ್ಜಿಗಳನ್ನು ಇಲ್ಲಿಯವರೆಗೆ ವಿಲೇವಾರಿ ಮಾಡಿ ರೈತರಿಗೆ ಪಟ್ಟಾ ನೀಡಲಾಗಿದೆ. 8,330 ಅರ್ಜಿಗಳು ಬಾಕಿ ಇವೆ. ಅವುಗಳನ್ನು ಸೆಪ್ಟಂಬರ್ ತಿಂಗಳ ಅಂತ್ಯದೊಳಗೆ ಇತ್ಯರ್ಥಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿದಿದ್ದಾರೆ

Latest Videos
Follow Us:
Download App:
  • android
  • ios