ಕೊರೋನಾ ಭೀತಿ: ಹೋಳಿಯಲ್ಲಿ ಬ್ಯುಸಿ ಇರ್ತಿದ್ದ ಟ್ಯಾಕ್ಸಿಗಳಿಗೆ ಭಾರೀ ಹೊಡೆತ
ಬಾಗಲಕೋಟೆಯಲ್ಲಿ ಪ್ರತಿ ಬಾರಿ ಹೋಳಿಯಲ್ಲಿ ಲಾಭ ಮಾಡಿಕೊಳ್ಳುತ್ತಿದ್ದ ಟ್ಯಾಕ್ಸಿಗಳು ಈ ಬಾರಿ ಖಾಲಿ ಉಳಿದಿವೆ. ಕೊರೋನಾ ಎಫೆಕ್ಟ್‌ನಿಂದ ವಾಹನಗಳಿಗೂ ಬಾಡಿಗೆ ಇಲ್ಲದಂತಾಗಿದೆ.
ಬಾಗಲಕೋಟೆ(ಮಾ.09): ಬಾಗಲಕೋಟೆಯಲ್ಲಿ ಪ್ರತಿ ಬಾರಿ ಹೋಳಿಯಲ್ಲಿ ಲಾಭ ಮಾಡಿಕೊಳ್ಳುತ್ತಿದ್ದ ಟ್ಯಾಕ್ಸಿಗಳು ಈ ಬಾರಿ ಖಾಲಿ ಉಳಿದಿವೆ. ಕೊರೋನಾ ಎಫೆಕ್ಟ್‌ನಿಂದ ವಾಹನಗಳಿಗೂ ಬಾಡಿಗೆ ಇಲ್ಲದಂತಾಗಿದೆ.
ನಗರದಲ್ಲಿ 4 ದಿನಗಳ ಹೋಳಿಯಲ್ಲಿ ಈ ಬಾರಿ ಕಾರು ಬಾಡಿಗೆ ಸೀಜನ್ ಫುಲ್ ಪ್ಲಾಫ್ ಆಗಿದೆ. ಪ್ರತಿವರ್ಷ ಹೋಳಿ ದಿನಗಳಲ್ಲಿ ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ಧಮ೯ಸ್ಥಳ, ಮಂಗಳೂರು ಕಡೆಗೆ ಬಾಡಿಗೆ ಕೊಂಡೊಯ್ಯುತ್ತಿದ್ದ ಜನತೆ ಈ ಬಾರಿ ಖಾಲಿ ಕುಳಿತಿದ್ದಾರೆ.
ಬಾಗಲಕೋಟೆಯಲ್ಲಿ ಕೊರೋನಾದಿಂದ 'ಕಾಮಣ್ಣ ಸಾವು'
ಕೋರೋನಾ ಹಿನ್ನೆಲೆ ಈ ಬಾರಿ ಒಂದೇ ಒಂದೇ ವಾಹನಕ್ಕೂ ಬಾಡಿಗೆ ಟೂರ್ ಭಾಗ್ಯ ಇಲ್ಲದಾಗಿದೆ. ಪ್ರತಿವರ್ಷ ಬಾಗಲಕೋಟೆ ಸ್ಟ್ಯಾಂಡ್ ನಲ್ಲಿದ್ದ 200ಕ್ಕೂ ಅಧಿಕ ವಾಹನಗಳು ಬಾಡಿಗೆ ತೆರಳುತ್ತಿದ್ದವು. ಪ್ರತಿವಷ೯ ಹೋಳಿ ಸಂದರ್ಭದಲ್ಲಿ ತಿಂಗಳ ಮುಂಚೆಯೇ ಅಡ್ವಾನ್ಸ್ ಬುಕ್ಕಿಂಗ್ ಮಾಡಿ ಬಾಡಿಗೆ ಕಟ್ಟುತ್ತಿದ್ದ ಬಾಗಲಕೋಟೆ ಜನತೆ ಈ ಬಾರಿ ಯಾವುದೇ ಟ್ರಿಪ್ ಪ್ಲಾನ್ ಮಾಡೋದಕ್ಕೂ ಹಿಂದೇಟು ಹಾಕಿದ್ದಾರೆ.
ಈ ಬಾರಿ ಕರೋನಾ ವೈರಸ್‌ಗೆ ಹೆದರಿ ಜನರು ವಾಹನ ಬುಕ್ಕಿಂಗ್ ಮಾಡಿಲ್ಲ ಹಾಗೆಯೇ ಅಡ್ವಾನ್ಸ್‌ನ್ನೂ ನೀಡಿಲ್ಲ. ತಿಂಗಳ ಮುಂಚೆ ಮಾಡಿದ ಬುಕ್ಕಿಂಗ್ ಸಹ ಕ್ಯಾನ್ಸಲ್ ಮಾಡಿದ್ದಾರೆ. ಕಲ್ಕತ್ತಾ ಬಿಟ್ಟರೆ ದೇಶದಲ್ಲೇ ಅತಿ ಹೆಚ್ಚು ಹೋಳಿಯಾಡುವ ನಗರವೆಂಬ ಹೆಗ್ಗಳಿಕೆ ಹೊಂದಿರೋ ನಗರ ಬಾಗಲಕೋಟೆಯಲ್ಲಿ ಈ ಬಾರಿ ಹೋಳಿ ಡಲ್ ಆಗಿದೆ.
News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"