ಬಾಗಲಕೋಟೆ[ಆ.01]: ಬಾಗಲಕೋಟೆಯ ರಾಂಪುರ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿದೆ. ಈ ಆಸ್ಪತ್ರೆಯಲ್ಲಿ ಶ್ವಾನಗಳ ದರ್ಬಾರ್. ರೋಗಿಗಳು ಮಲಗುವ ಬೆಡ್ ಮೇಲೆ ರೋಗ ಪೀಡಿತ ಶ್ವಾನಗಳು ಮಲಗುತ್ತಿದ್ದು, ರೋಗಿಗಳು ಈ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಹೌದು ಈ ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ನಾಯಿಗಳು ಬಂದು ಮಲಗಿದರೂ ಯಾರು ಕೇಳುವವರೇ ಇಲ್ಲ. ಈ ಅವ್ಯವಸ್ಥೆಯಿಂದಾಗಿ ರೋಗಿಗಳು ಇಲ್ಲಿಗೆ ಚಿಕಿತ್ಸೆಗೆ ಬರಲು ಭಯ ಪಡುತ್ತಿದ್ದಾರೆ. ರೋಗಿಯೂ ಚಿಕಿತ್ಸೆ ಪಡೆಯುತ್ತಿದ್ದ ಬೆಡ್ ಮೇಲೆ ರೋಗ ಪೀಡಿತ ನಾಯಿ ಬಂದು ಮಲಗುತ್ತಿವೆ. 

ಈ ವಿಚಾರವಾಗಿ ಆಸ್ಪತ್ರೆ ಸಿಬ್ಬಂದಿಯನ್ನು ಏನ್ರೀ ಅವ್ಯವಸ್ಥೆ ಎಂದು ಪ್ರಶ್ನಿಸಿದರೆ ನಾವೇನ್ ಮಾಡೋಣ ಎಂದು ಮರು ಪ್ರಶ್ನಿಸುತ್ತಾರೆ. ಸದ್ಯ ಇಂತಹ ಅವ್ಯವಸ್ಥೆಯಿಂದ ಕೂಡಿದ ರಾಂಪುರ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.