ಮಳೆಗಾಗಿ ಕತ್ತೆಗಳ ಮದುವೆ: ಪುರೋಹಿತರ ಮಂತ್ರಘೋಷಗಳೊಂದಿಗೆ ಶಾಸ್ತ್ರೋಕ್ತವಾಗಿ ನಡೆದ ಮದುವೆ!
ಮುಂಗಾರು ಮಳೆ ವಿಳಂಬದಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು ರೈತರು ‘ಕತ್ತೆಗಳ ಮದುವೆ’ಯನ್ನು ಶಾಸೊತ್ರೕಕ್ತವಾಗಿ ಮಾಡಿ ವರುಣದೇವನ ಒಲಿಸಿಕೊಳ್ಳಲು ಮುಂದಾಗಿದ್ದಾರೆ.
ಬ್ಯಾಡಗಿ (ಜು.1) : ಮುಂಗಾರು ಮಳೆ ವಿಳಂಬದಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು ರೈತರು ‘ಕತ್ತೆಗಳ ಮದುವೆ’ಯನ್ನು ಶಾಸೊತ್ರೕಕ್ತವಾಗಿ ಮಾಡಿ ವರುಣದೇವನ ಒಲಿಸಿಕೊಳ್ಳಲು ಮುಂದಾಗಿದ್ದಾರೆ.
ಪಟ್ಟಣದಲ್ಲಿ ಚಾವಡಿ ರಸ್ತೆಯಲ್ಲಿರುವ ಗ್ರಾಮದೇವತೆ (ದ್ವಾಮವ್ವನ) ದೇವಸ್ಥಾನದ ಬಳಿ ಶುಕ್ರವಾರ ಅದ್ಧೂರಿಯಾಗಿ ಕತ್ತೆಗಳ ಮದುವೆ ಮಾಡಲಾಗಿದೆ. ಹಂದರ ಹಾಕಿ, ಮುತ್ತೈದೆಯರು ಕತ್ತೆಗಳಿಗೆ ಅರಿಶಿನ ಹಚ್ಚಿ ಸುರಿಗೆ ನೀರು ಹಾಕಿದರು. ಹಂದರಕ್ಕೆ ಪೂಜೆ ಮಾಡಿ, ಪುರೋಹಿತರ ಮಂತ್ರಘೋಷಗಳ ನಡುವೆ ಕತ್ತೆಗಳಿಗೆ ತಾಳಿ ಕಟ್ಟುವ ಮೂಲಕ ಶಾಸೊತ್ರೕಕ್ತವಾಗಿ ಮದುವೆ ಮಾಡಲಾಯಿತು.
Bagalkote: ಬಾರದ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ, ಊರ ತುಂಬ ಮೆರವಣಿಗೆ ಭರ್ಜರಿ ಊಟ!
ಉಚ್ಚಂಗಿದುರ್ಗದ ವಧು-ವರರು:
ನೂತನ ವಧು-ವರರು ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದವರು. (ಸ್ಥಳೀಯವಾಗಿ ಕತ್ತೆಗಳು ಲಭ್ಯವಿಲ್ಲ) ಪಟ್ಟಣದ ರೈತ ಮುಖಂಡರ ಸಮ್ಮುಖದಲ್ಲಿ ಕತ್ತೆಗಳನ್ನು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಮದುವೆ ಮಾಡಲಾಯಿತು. ನಂತರ ಸಕಲ ವಾದ್ಯ ವೈಭವಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ವಧು-ವರ (ಕತ್ತೆಗಳ) ಮರೆವಣಿಗೆ ನಡೆಸಿ ಮಧ್ಯಾಹ್ನ ಅನ್ನ ಸಂತರ್ಪಣೆ ನೆರವೇರಿತು.
ಪೂರ್ವಜರ ಸಂಪ್ರದಾಯ:
ಮಳೆಗಾಗಿ ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ, ಹವನ-ಹೋಮ ಮಾಡುವುದು ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಮಳೆ ಆಗದೆ ಇದ್ದರೆ ಕಪ್ಪೆ- ಕತ್ತೆಗಳ ಮದುವೆ, ಗೋ ಪೂಜೆ, ಬೋರ್ಗಲ್ ಮೇಲೆ ನೀರು ಸುರಿಯುವುದು, ಗಣ ಹೋಮ ಸೇರಿದಂತೆ ಇನ್ನಿತರ ವಿಶೇಷ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ. ಅಂತೆಯೇ ಪಟ್ಟಣದ ರೈತರು ಗ್ರಾಮದೇವತೆ ದೇವಸ್ಥಾನದ ಎದುರು ಕತ್ತೆಗಳೆರಡಕ್ಕೆ ಮದುವೆ ನೆರವೇರಿಸಿದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಪರಿಸ್ಥಿತಿ ಹೀಗೆ ಮುಂದುವರಿದರೆ ಈ ವರ್ಷ ಬರಗಾಲ ಎದುರಾಗುವ ಭೀತಿ ಇದೆ. ಹೀಗಾಗಿ ಕತ್ತೆಗಳ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂಬ ಪೂವರ್ಜರ ನಂಬಿಕೆಯಂತೆ ಮಾಡಲಾಗಿದೆ. ಅಷ್ಟಿಷ್ಟುಮಳೆಗೆ ರೈತರು ಬಿತ್ತನೆ ಮಾಡಿದ್ದು ಆ ಬೆಳೆಗಳು ಒಣಗುತ್ತಿವೆ. ಅವುಗಳನ್ನು ಉಳಿಸಿಕೊಳ್ಳಲು ರೈತರು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಮಳೆ ಕೈಕೊಟ್ಟಿದ್ದು ರೈತ ಸಮೂಹಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ವೇಳೆ ರೈತ ಮುಖಂಡರಾದ ಅಶೋಕ ಮೂಲಿಮನಿ, ಪುಟ್ಟಪ್ಪ ಛತ್ರದ, ಎಂ.ಆರ್. ಭದ್ರಗೌಡ್ರ, ಅಶೋಕ ಮಾಳೇನಹಳ್ಳಿ, ಈಶ್ವರ ಮಠದ, ಪ್ರಶಾಂತ ಹಾಲನಗೌಡ್ರ, ಬಸವರಾಜ ಸಂಕಣ್ಣನವರ, ಸಿದ್ದಣ್ಣ ಮಾಳೇನಹಳ್ಳಿ, ಶಂಕರ ಬಿದರಿ, ರಾಜು ಚನ್ನಗೌಡ್ರ, ಶಿವಕುಮಾರ ಕಲ್ಲಾಪುರ, ಶಕುಂತಲ ಮಠದ, ವಿಕಾಸ ಕಾಟೇನಹಳ್ಳಿ, ಜ್ಯೋತಿ ಡಂಬಳ, ಸುಶೀಲಮ್ಮ ಯಲಿತಿಮ್ಮಣ್ಣನವರ, ಕರಬಸಪ್ಪ ಹರಿಯಾಳದ, ಸುನಂದಾ ಮಾಳೇನಹಳ್ಳಿ, ಲಕ್ಷಣಪ್ಪ ಸೊಟ್ಟೇರ, ಕನ್ನಪ್ಪ ಕೊಪ್ಪದ, ವೀರಬಸವ್ವ ಮೂಲಿಮನಿ, ಸುಮ ಸಂಕಣ್ಣನವರ, ನಿರ್ಮಲ ಛತ್ರದ, ಶೈಲ ಆಟದವರ ಸೇರಿದಂತೆ ಇತರರು ಇದ್ದರು.
Lack of rain: ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿಸಿದ ಹರಪನಹಳ್ಳಿ ಗ್ರಾಮಸ್ಥರು!
ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದಿದ್ದರೂ ಪೂರ್ವಜರು ಹಾಕಿಕೊಟ್ಟಸಂಪ್ರದಾಯ ಬಿಡಲು ಸಾಧ್ಯವಿಲ್ಲ. ನಿಗದಿತ ಸಮಯಕ್ಕೆ ಮಳೆ ಬಾರದಿದ್ದಾಗ ಇಂತಹ ಆಚರಣೆಗಳು ರೂಢಿಯಲ್ಲಿವೆ. ಆ ವರುಣ ದೇವ ರೈತರ ನಂಬಿಕೆ ಹುಸಿಗೊಳಿಸದಿರಲಿ.
ಸುರೇಶಗೌಡ ಪಾಟೀಲ, ಮಾಜಿ ಶಾಸಕ