Asianet Suvarna News Asianet Suvarna News

ಕಲಬುರಗಿ: ಹುಮ್ನಾಬಾದ್‌- ಹುಬ್ಬಳ್ಳಿ ಚತುಷ್ಪಥ ಭಾಗ್ಯ ಯಾವಾಗ..?

*  ಅಪಘಾತದ ಹಿನ್ನೆಲೆಯಲ್ಲಿ ಮತ್ತೆ ಚರ್ಚೆಗೆ ಬಂದ ಹೆದ್ದಾರಿ ಬೇಡಿಕೆ
*  ಕಳೆದ 10 ವರ್ಷದಿಂದ ಜನರ ಬೇಡಿಕೆ ಇದಾಗಿದ್ದರೂ ಕೇಂದ್ರ, ರಾಜ್ಯ ಸರ್ಕಾರದಿಂದ ತೀವ್ರ ಅವಗಣನೆ
*  ಟ್ವಿಟ್ಟಿಗರು- ನೆಟ್ಟಿಗರ ಆಕ್ರೋಶ
 

Back to the Debate of Humnabad Hubballi Four Lane Road in Kalaburagi grg
Author
Bengaluru, First Published Jun 4, 2022, 11:14 AM IST

ಶೇಷಮೂರ್ತಿ ಅವಧಾನಿ

ಕಲಬುರಗಿ(ಜೂ.04):  ಜಿಲ್ಲೆಯ ಕಮಲಾಪುರ ಬಳಿಯ ಚಾರ್‌ ಕಮಾನ್‌ ದೊಡ್ಡ ರಸ್ತೆಯಲ್ಲಿ ಸಂಭವಿಸಿರುವ ಭೀಕರ ರಸ್ತೆ ದುರಂತ ಮತ್ತೊಮ್ಮೆ ದಶಕದಿಂದಲೂ ನೆನೆಗುದಿಗೆ ಬಿದ್ದಿರುವ ಹುಮ್ನಾಬಾದ್‌- ಹುಬ್ಬಳ್ಳಿ ವಯಾ ಕಲಬುರಗಿ, ವಿಜಯಪುರ ರಾಷ್ಟ್ರೀಯ ಹೆದ್ದಾರಿಯನ್ನ ಚತುಷ್ಪಥ ರಸ್ತೆಯನ್ನಾಗಿಸಿ ಮೇಲ್ದರ್ಜೆಗೇರಿಸಬೇಕೆಂಬ ಜನಾಗ್ರಹವನ್ನ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಎಳೆದು ತಂದಿದೆ.

ಬೀದರ್‌ನಿಂದ ಶ್ರೀರಂಗ ಪಟ್ಟಣದವರೆಗೂ ನಿರ್ಮಾಣವಾಗಿರುವ ಹೆದ್ದಾರಿಯೇ ಮುಂದೆ ರಾಷ್ಟ್ರೀಯ ಹೆದ್ದಾರಿ 150 ಆಗಿ ಮೇಲ್ದರ್ಜೆಗೇರಿದ್ದು ಇತಿಹಾಸ, ಆದರೀಗ ಈ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದರಿಂದ ಇದನ್ನೀಗ ದ್ವಿಪಥದಿಂದ ಚತುಷ್ಪಥ ರಸ್ತೆಯನ್ನಾಗಿ ಪರಿವತಿಸಿ ಸೂಕ್ತವಾಗಿ ಮೇಲ್ದರ್ಜೆಗೇರಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.

ಕಲಬುರಗಿ ಬಳಿ ಭೀಕರ ಅಪಘಾತ: ಹೊತ್ತಿ ಉರಿದ ಬಸ್, ಮಗು ಸೇರಿ ಏಳು ಮಂದಿ ಸಜೀವ ದಹನ

ರಾಷ್ಟ್ರೀಯ ಹೆದ್ದಾರಿಯ ಕಲಬುರಗಿ- ಹುಮ್ನಾಬಾದ್‌ ಭಾಗದಲ್ಲಂತೂ ತುಂಬ ಇಕ್ಕಟ್ಟಾಗಿದೆ. ಇಂತಹ ಇಕ್ಕಟ್ಟಲ್ಲೇ ನಿತ್ಯ ಸಾವಿರಾರು ದೊಡ್ಡ ಸರಕು ಸಾಗಣೆ ವಾಹನಗಳು, ಪ್ರಯಾಣಿಕರ ಬಸ್ಸುಗಳು ಎಲ್ಲವೂ ಸಂಚರಿಸುತ್ತಿವೆ. ಈ ಹೆದ್ದಾರಿಯಲ್ಲಿ ಸಾಕಷ್ಟುಭಯಾನಕ ತಿರುವುಗಳೂ ಇರೋದರಿಂದ ಇಂತಹ ಅಪಘಾತಗಳು ಸಂಭವಿಸುತ್ತಿವೆ. ಚಾರ್‌ ಕಮಾನ್‌ ಬಳಿ ರಸ್ತೆ ತಿರುವು ಇರೋದರಿಂದಲೇ ಬಸ್‌ ದುರಂತ ನಡೆಯಿತು ಎಂಬುದು ಗುಟ್ಟೇನಲ್ಲ. ಹೀಗಾಗಿ ಇವುಗಳಿಗೆಲ್ಲ ಕೊನೆ ಹೇಳಬೇಕೆಂದರೆ ಈ ಹೆದ್ದಾರಿ ತಕ್ಷಣ ಚತುಶ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಬೇಕು ಎಂದು ಕಲಬುರಗಿ, ಬೀದರ್‌ ಜಿಲ್ಲೆಯ ಜನ ಆಗ್ರಹಿಸುತ್ತಿದ್ದಾರೆ.

ಅಪಘಾತಗಳ ಹೆದ್ದಾರಿ:

ಈ ರಸ್ತೆಯ ಕಮಲಾಪುರ, ಜೇವರ್ಗಿ, ಸಿಂದಗಿ ಭಾಗದಲ್ಲಂತೂ ನಿತ್ಯ ಅಪಘಾತಗಳಾಗುತ್ತ ಜನ ಕೈಕಾಲು ಮುರಿದುಕೊಂಡೇ ಮನೆ ಸೇರುವಂತಾಗಿದೆ. ಇದೇ ಕಮಲಾಪುರ ತಿರುವಲ್ಲಿ ಕಲೆದ ವರ್ಷವೂ ಭೀಕರ ದುರಂತ ಸಂಭವಿಸಿ ಗಮನ ಸೆಳೆದಿತ್ತು. ಆಗಲೂ ಹೆದ್ದಾರಿ ಅಭಿವೃದ್ಧಿ ಬಗ್ಗೆ ಸಾಕಷ್ಟುಚರ್ಚೆಗಳು ನಡೆದು ಅದನ್ನು ಎಲ್ಲರು ಮರೆತುಬಿಟ್ಟಿದ್ದರು. ಇದೀಗ ಇದೇ ದಾರಿಯಲ್ಲಿ ಮತ್ತೊಂದು ಘೋರ ದುರಂತವಾಗಿ ಹೆದ್ದಾರಿ ಮೇಲ್ದರ್ಜೆ, ಸುಧಾರಣೆ ಚರ್ಚೆಗಳು ಶರುವಾಗಿವೆ. ಅಪಘಾತವಾದಾಗೆಲ್ಲಾ ಈ ಚರ್ಚೆ ನಡೆದು ಮುಂದೆ ಜನ, ಜನ ನಾಯಕರು ಎಲ್ಲರೂ ಮರೆಯುತ್ತಿರೋದರಿಂದಲೇ ದುರಂತಗಳ ಪುನರಾವರ್ತನೆಯಾಗುತ್ತಿದೆ.

ಕಲ್ಯಾಣ ನಾಡಿನ ಹಲವು ಪ್ರಗತಿಪರ ಯೋಜನೆಗಳನ್ನು ಡಬ್ಬಲ್‌ ಇಂಜಿನ್‌ ಬಿಜೆಪಿ ಸರ್ಕಾರ ಕಿತ್ತುಕೊಂಡಿದ್ದು ಇತಿಹಾಸ, ಆದರೆ ಕಲ್ಯಾಣ ನಾಡಿನ ಬೀದರ್‌, ಕಲಬುರಗಿ ಜಿಲ್ಲೆಯ ಜನರ ಜೀವದ ಜೊತೆ ನೇರ ಸಂಬಂಧ ಬೆಸೆದಿರುವ ಹೆದ್ದಾರಿ ಮೇಲ್ದರ್ಜೆ ಬೇಡಿಕೆಗಾದರೂ ಸ್ಪಂದಿಸಬೇಕಿತ್ತು. ದುರಂತಗಳ ಸರಮಾಲೆಯೇ ಶಉರುವಾಗಿರೋದರಿಂದ ಇನ್ನಾದರೂ ಈ ಬೇಡಿಕೆಗೆ ಸ್ಪಂದನೆ ಸಿಗುವುದೆ? ಎಂದು ಕಾದು ನೋಡಬೇಕಿದೆ.ಏಕೆಂದರೆ ಬೀದರ್‌ ಸಂಸದ ಭಗವಂತ ಖಬಾ ಈಗ ಕೇಂದ್ರದಲ್ಲಿ ಪವರ್‌ಫುಲ್‌ ಸಚಿವರು. ಕಲಬುರಗಿ ಸಂಸದ ಡಾ. ಜಾಧವ್‌ ಅವರೂ ಹಲವು ಸ್ಥಾಯಿ ಸಮೀತಿಗಳ ಸದಸ್ಯರಾಗಿದ್ದು ಕೇಂದ್ರದಲ್ಲಿ ತಮ್ಮದೇ ಪ್ರಭಾವ ವಲಯ ಸೃಷ್ಟಿಸಿಕೊಂಡವರು. ಇನ್ನು ರಾಯಚೂರು, ಕೊಪ್ಪಳ, ಬಳ್ಳಾರಿ ಎಲ್ಲಾಕಡೆ ಬಿಜೆಪಿ ಸಂಸದರು. ಹೀಗಿದ್ದರೂ ಹಿಂದುಳಿದ ನೆಲದವರ ಜನಾಗ್ರಹದ ದಶಕಗಳ ಬೇಡಿಕೆ ಹಾಗೇ ಉಳಿದು ನಿತ್ಯವೂ ಜನರ ಪ್ರಾಣವನ್ನೇ ಬೆಟೆಯಾಡುತ್ತಿರೋದೇ ಬಹುದೊಡ್ಡ ದರಂತ.

ಕಲಬುರಗಿ ಪಾಲಿಕೆ ಆಯುಕ್ತ ಶಂಕ್ರಣ್ಣ ವಣಕ್ಯಾಳ 4 ದಿನ ನ್ಯಾಯಾಂಗ ವಶಕ್ಕೆ!

ಟ್ವಿಟ್ಟಿಗರು- ನೆಟ್ಟಿಗರ ಆಕ್ರೋಶ

ರಸ್ತೆ ದುರಂತದ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಇದರಿಂದ ತುಂಬ ನೋವು- ಆತಂಕ ಅನುಭವಿಸಿರುವ ಕಲಬುರಗಿ ಭಾಗದ ಪ್ರಜ್ಞಾವಂತರು ಚತುಶ್ಪಥ ರಸ್ತೆಯನ್ನಾಗಿ ಹುಮ್ನಾಬಾದ್‌- ಹುಬ್ಬಳ್ಳಿ ಹೆದ್ದಾರಿಯನ್ನ ಮೇಲ್ದರ್ಜೆಗೇರಿಸುವುದೇ ಇಂತಹ ಅಪಸವ್ಯಗಳಿಗೆಲ್ಲ ಪರಿಹಾರ ಎಂದು ಟ್ವೀಟರ್‌ ಅಭಿಯಾನವನ್ನೇ ಆರಂಭಿಸಿದ್ದಾರೆ. ಬೀದರ್‌ ಸಂಸದ ಕೇಂದ್ರ ಸಚಿವ ಭಗವಂತ ಭೂಬಾ, ಕಲಬುರಗಿ ಸಂಸದ ಡಾ. ಉಮೇಶ ಜಾಧವ್‌, ರಾಹೆ ಅಭಿವೃದ್ಧಿ ಪ್ರಾಧಿಕಾರ, ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ, ಸಿಎಂ ಬಸವರಾಜ ಬೊಮ್ಮಾಯಿ ಇವರೆಲ್ಲರಿಗೂ ಟ್ಯಾಗ್‌ ಮಾಡುವ ಮೂಲಕ ಸದರಿ ಬಸ್‌ ದುರಂತದ ಹಿನ್ನೆಲೆಯಲ್ಲಿ ಹೆದ್ದಾರಿ ಮೇಲ್ದರ್ಜೆಯ ಅಗತ್ಯತೆ ಸಾರಿ ಹೇಳುವ ಅಭಿಯಾನವನ್ನೇ ನಡೆಸಿದ್ದಾರೆ. ಅನೇಕರು ಹೆದ್ದಾರಿ ಪ್ರಾಧಿಕಾರ, ಸಚಿವಾಲಯದವರ ಕಣ್ಣಾಮುಚ್ಚಾಲೆಯಿಂದ ಹಿಂದುಳಿದ ನೆಲದ ಈ ಬೇಡಿಕೆ ಹಾಗೇ ನೆನೆಗುದಿಗೆ ಬಿದ್ದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಹಲವರು ನಮ್ಮ ಜನನಾಯಕರು, ಸಂಸದರ ಅಲಕ್ಷತನವೂ ಇದಕ್ಕೆ ಕಾರಣವೆಂದು ಟೀಕಿಸಿದ್ದಾರೆ.

ಹುಮ್ನಾಬಾದ್‌ನಿಂದ ಹುಬ್ಬಳ್ಳಿವರೆಗಿನ ವಯಾ ಕಲಬುರಗಿ, ವಿಜಯಪೂರ ದ್ವಿಪಥ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಕೆಲಸ ಶೀಘ್ರ ಕೈಗೆತ್ತಿಕೊಳ್ಳದೆ ವಿಳಂಬ ಧೋರಣೆಯನ್ನೇ ರಾಜ್ಯ, ಕೇಂದ್ರ ಸರ್ಕಾರಗಲು ಮುಂದುವರಿಸಿದರೆ ಉಗ್ರ ಹೋರಾಟ ಸಂಘಟಿಸಲಾಗುತ್ತದೆ. ನಿತ್ಯ ಜನರ ಜೀವ ಬಲಿ ಪಡೆಯುತ್ತಿರುವ ಹೆದ್ದಾರಿ ಇದಾಗಿದೆ. ಈ ಹೆದ್ದಾರಿಗುಂಟ ಸಂಚಾರ ಸುರಕ್ಷತೆಯೇ ಮಾಯವಾಗಿದೆ. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಕಣ್ಣು ಮುಚ್ಚಿದಂತಿದೆ. ಕಲಬುರಗಿ ಸಂಸದ ಡಾ. ಉಮೇಶ ಜಾಧವ್‌, ಬೀದರ್‌ ಸಂಸದ, ಕೇಂದ್ರ ಮಂತ್ರಿ ಭಗವಂತ ಖೂಬಾ ಇಋೂರು ಸಹ ಮೌನ ತಾಳಿರೋದು ಖಂಡನೀಯ ಅಂತ ಕಲಬುರಗಿ ಮುಖಂಡ ಮಹಾದೇವಪ್ಪ ಗೌಡ ಪಾಟೀಲ್‌ ನರಿಬೋಳ್‌ ತಿಳಿಸಿದ್ದಾರೆ.  
 

Follow Us:
Download App:
  • android
  • ios