Asianet Suvarna News Asianet Suvarna News

ಪ್ರೀತಿಯಿಂದ ಸಾಕಿದ ನಾಯಿಗೆ ಮಾಲೀಕನಿಂದ ಸೀಮಂತ; ಅರಿಶಿಣ, ಕುಂಕುಮ ಇಟ್ಟು ಆರತಿ ಬೆಳಗಿದ ಮಹಿಳೆಯರು!

ಜಿಲ್ಲೆಯ ಹೊಸದುರ್ಗ ತಾಲೂಕಿನ ಕರ್ಪೂರದ ಕಟ್ಟೆ ಗ್ರಾಮದ ವ್ಯಕ್ತಿಯೊಬ್ಬರು ಪ್ರೀತಿಯಿಂದ ಸಾಕಿದ ನಾಯಿಗೆ ಅದ್ದೂರಿ ಸೀಮಂತ ಕಾರ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಜಯ್ ಹಾಗೂ ಸಹೋದರಿ ಜ್ಯೋತಿ ಮುದ್ದಿನ ನಾಯಿಗೆ ಸೀಮಂತ ಕಾರ್ಯಕ್ರಮ ನಡೆಸಿದವರು

Baby shower ceremony from owner to beloved dog at chitradurga rav
Author
First Published Jan 12, 2024, 12:40 PM IST

ಚಿತ್ರದುರ್ಗ (ಜ.12) ಜಿಲ್ಲೆಯ ಹೊಸದುರ್ಗ ತಾಲೂಕಿನ ಕರ್ಪೂರದ ಕಟ್ಟೆ ಗ್ರಾಮದ ವ್ಯಕ್ತಿಯೊಬ್ಬರು ಪ್ರೀತಿಯಿಂದ ಸಾಕಿದ ನಾಯಿಗೆ ಅದ್ದೂರಿ ಸೀಮಂತ ಕಾರ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಅಜಯ್ ಹಾಗೂ ಸಹೋದರಿ ಜ್ಯೋತಿ ಮುದ್ದಿನ ನಾಯಿಗೆ ಸೀಮಂತ ಕಾರ್ಯಕ್ರಮ ನಡೆಸಿದವರು. ಗ್ರಾಮದ ಅರಣ್ಯ ಇಲಾಖೆಯಲ್ಲಿ ವಾಚ್‌ಮನ್ ಆಗಿರುವ ಅಜಯ್. ಮನೆಯಲ್ಲೊಂದು ಮುದ್ದಿನ ನಾಯಿ ಬೇಕು ಎಂಬ ಆಸೆಯಿಂದ ಕಳೆದ ಹನ್ನೊಂದು ತಿಂಗಳ ಹಿಂದೆ ಬೆಂಗಳೂರಿನಿಂದ ಲ್ಯಾಬ್ರಡಾರ್ ಜಾತಿಯ ನಾಯಿಯನ್ನು ತಂದಿದ್ದ ಕುಟುಂಬ ಅದಕ್ಕೆ ರೂಬಿ ಎಂದು ನಾಮಕರಣ ಮಾಡಿದ್ದರು. ಅಂದಿನಿಂದ ಮನೆಯ ಮಗುವಂತೆ ಬೆಳೆದು ಕುಟುಂಬದ ಸದಸ್ಯಳಾಗಿದ್ದ ರೂಬಿ.

ಪೊಲೀಸ್ ಇಲಾಖೆ ಸೇರಿದ ಮುದ್ದಿನ ನಾಯಿ ಮರಿ, ಹೆಸರು ಸೂಚಿಸಲು ಸಾರ್ವಜನಿಕರಲ್ಲಿ ಮನವಿ!

 13 ತಿಂಗಳ‌ ವಯಸ್ಸಿನ ರೂಬಿ ಈಗ 2 ತಿಂಗಳ ಗರ್ಭಿಣಿ. ಮನೆಯ ಸದಸ್ಯರಂತೆ ಪ್ರೀತಿಯಿಂದ ಸಾಕಿದ್ದ ಕುಟುಂಬ. ಇದೀಗ ಮುದ್ದಿನ ಶ್ವಾನ ಗರ್ಭಿಣಿಯೆಂಬುದು ತಿಳಿದ ಬಳಿಕ ಸಂತೋಷಗೊಂಡಿರುವ ಕುಟುಂಬ, ಅಕ್ಕಪಕ್ಕದ ಮನೆಯವರನ್ನು ಕರೆದು ಸೀಮಂತ ಕಾರ್ಯ ಮಾಡಿದ್ದಾರೆ.  ಹೂ, ಹಣ್ಣು, ಅರಿಶಿಣ, ಕುಂಕುಮ ಇಟ್ಟು ಆರತಿ ಬೆಳಗಿದ ಮಹಿಳೆಯರು. ಬಳಿಕ ಕೇಕ್ ಕಟ್ ಮಾಡಿ ಸಿಹಿ ಹಂಚಿದ ಸಂಭ್ರಮಿಸಿದ ಮಾಲೀಕರು. ಘಟನೆ ವಿಡಿಯೋ ವೈರಲ್ ಆಗಿದ್ದು, ಶ್ವಾನ ಪ್ರೀತಿ ಕಂಡು ಮಾಲೀಕರಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನಾಪತ್ತೆಯಾಗಿರುವ ಕಮಿಷನರ್ ನಾಯಿಗೆ ಪೊಲೀಸರ ಕಾರ್ಯಾಚರಣೆ, 36 ಗಂಟೆಯಲ್ಲಿ 500 ಮನೆ ಹುಡುಕಾಟ!

Follow Us:
Download App:
  • android
  • ios