ಮೀರತ್ ಕಮಿಷನರ್ ಮುದ್ದಿನ ನಾಯಿ ನಾಪತ್ತೆಯಾಗಿದೆ. ಈ ನಾಯಿ ಹುಡುಕಿಕೊಡುವಂತೆ ಕಮಿಷನರ್ ಪೊಲೀಸರಿಗೆ ಟಾಸ್ಕ್ ನೀಡಿದ್ದಾರೆ. ಇದಕ್ಕಾಗಿ ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕಿರುವ ಪೊಲೀಸರನ್ನು ನಾಯಿ ಹುಡುಕಾಟಕ್ಕೆ ನಿಯೋಜಿಸಲಾಗಿದೆ. ಪೊಲೀಸರು ಸತತ 36 ಗಂಟೆಗಳಿಂದ ಹುಡುಕಾಡುತ್ತಿದ್ದು, 500ಕ್ಕೂ ಹೆಚ್ಚು ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ.

ಮೀರತ್(ಜೂ.27) ಮುದ್ದಿನ ನಾಯಿ ಕಾಣೆಯಾಗಿದೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಕಳಕಳಿಯ ವಿನಂತಿಗಳನ್ನು ನಾವೆಲ್ಲಾ ನೋಡಿದ್ದೇವೆ. ಇನ್ನು ಪೋಸ್ಟರ್ ಅಂಟಿಸಿ ನಾಯಿ ಕಾಣೆಯಾಗಿದೆ ಸುಳಿವು ಸಿಕ್ಕರೆ ಮಾಹಿತಿ ನೀಡಿ ಅನ್ನೋ ಮನವಿ ಕರಪತ್ರಗನ್ನು ನೋಡಿದ್ದೇವೆ. ಇನ್ನು ನಾಯಿ ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ಘಟನೆಗಳು ಸಾಕಷ್ಟವಿದೆ. ಆದರೆ ಕಾಣೆಯಾಗಿರುವ ನಾಯಿ ಹುಡುಕಾಟಕ್ಕೆ ನಗರದ ಎಲ್ಲಾ ಪೊಲೀಸರನ್ನು ಕಾರ್ಯಾಚರಣೆಗೆ ಇಳಿಸಿದ ಘಟನೆ ಇದೇ ಮೊದಲು. ಹೌದು, ಮೀರತ್ ಕಮಿಷನರ್ ಸೆಲ್ವ ಕುಮಾರಿ ಅವರ ಮುದ್ದಿನ ಸಾಕು ನಾಯಿ ನಾಪತ್ತೆಯಾಗಿದೆ. ಇದಕ್ಕಾಗಿ ಮೀರತ್ ನಗರದ ಪೊಲೀಸರನ್ನು ಕಾಣೆಯಾಗಿರುವ ನಾಯಿ ಪತ್ತೆಗೆ ನಿಯೋಜಿಸಲಾಗಿದೆ. ಕಳೆದ 36 ಗಂಟೆಯಿಂದ ಈ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಮನೆಗೆ ತೆರಲಿ ತಪಾಸಣೆ ನಡೆಸಿದ್ದಾರೆ.

ಸೆಲ್ವ ಕುಮಾರಿ ಬಳಿ ಜರ್ಮನ್ ಶೆಫರ್ಡ್ ನಾಯಿ ಸಾಕಿದ್ದರು. ಈ ನಾಯಿ ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಮೀರತ್ ನಗರದಲ್ಲಿ ದಾಖಲೆಗಳ ಪ್ರಕಾರ 19 ಜರ್ಮನ್ ಶೆಫರ್ಡ್ ನಾಯಿಗಳಿವೆ. ಕಮಿಷನರ್ ನಾಯಿಯನ್ನು ಕದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಭಾನುವಾರ(ಜೂ. 25) ಸಂಜ 6 ಗಂಟೆ ಹೊತ್ತಿಗೆ ಸೆಲ್ವ ಕುಮಾರಿ ಅವರ ನಾಯಿ ನಾಪತ್ತೆಯಾಗಿದೆ. 

ಅಬ್ಬಬ್ಬಾ..ಜಸ್ಟ್ ನಾಯಿ ನೋಡಿಕೊಳ್ಳೋದಷ್ಟೇ ಕೆಲ್ಸ, ತಿಂಗಳಿಗೆ ಭರ್ತಿ 1 ಕೋಟಿ ರೂ.ಸಂಬಳ!

ಸಂಜೆ 6 ಗಂಟೆ ಹೊತ್ತಿಗೆ ಸಾಕು ನಾಯಿ ಕಾಣೆಯಾಗಿದೆ ಅನ್ನೋದು ಖಚಿತಗೊಂಡಿದೆ. ತಕ್ಷಣವೇ ಕಮಿಷನರ್ ಮನೆಗೆ ಪೊಲೀಸರು ದೌಡಾಯಿಸಿದ್ದಾರೆ. ಕಮಿಷನರ್ ಮನೆ ಹಾಗೂ ಸುತ್ತ ಮುತ್ತ ಹುಡುಕಾಟ ಆರಂಭಿಸಿದ್ದಾರೆ. ತಕ್ಷಣವೇ ಹೆಚ್ಚುವರಿ ಪೊಲೀಸರನ್ನು ಕರೆಯಿಸಿಕೊಂಡು ನಿವಾಸ ಸುತ್ತು ಮುತ್ತ ಹುಡುಕಾಟ ಶುರುವಾಗಿದೆ. ಮಧ್ಯರಾತ್ರಿ 12 ಗಂಟೆ ಹೊತ್ತಿಗೆ ಮುನ್ಸಿಪಲ್ ಕಾರ್ಪೋರೇಶನ್ ಪ್ರಾಣಿ ಕಲ್ಯಾಣ ಮಂಡಶಿ ಅಧಿಕಾರಿ ಡಾ.ಹರಿಪಾಲ್ ಸಿಂಗ್ ಕಮಿಷನರ್ ಸೆಲ್ವ ಕುಮಾರಿ ಮನೆಗೆ ಆಗಮಿಸಿದ್ದಾರೆ. 

ಸೆಲ್ವ ಕುಮಾರಿ ಬಳಿಯಿಂದ ನಾಯಿ ಫೋಟೋ ಪಡೆದುಕೊಂಡು ಪ್ರಾಣಿ ಕಲ್ಯಾಣ ಮಂಡಳಿ ತಂಡ ಹುಡುಕಾಟ ಆರಂಭಿಸಿದೆ. ಪೊಲೀಸರು ಹಾಗೂ ಪ್ರಾಣಿ ಕಲ್ಯಾಣ ಮಂಡಳಿ ತಂಡ ರಾತ್ರಿಯಿಡಿ ಕಾರ್ಯಾಚರಣೆ ಶುರುವಾಗಿದೆ. ಸತತ 36 ಗಂಟೆಗಳ ಕಾಲ ಕಾರ್ಯಾಚರನೆ ನಡೆಸಿದರೂ ನಾಯಿ ಪತ್ತೆಯಾಗಿಲ್ಲ. 500ಕ್ಕೂ ಹೆಚ್ಚು ಮನಗಳಿಗೆ ತೆರಳಿ ಪೊಲೀಸರು ತಪಾಸಣೆ ನಡೆಸಿದ್ದಾರೆ.

ಆಟವಾಡುತ್ತಿದ್ದ ಮಕ್ಕಳಿಗೆ ಕಚ್ಚಿದ ಪ್ರಾಂಶುಪಾಲರ ಪ್ರೀತಿಯ ಶ್ವಾನ: ಪೋಷಕರ ಆಕ್ರೋಶ

ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ಆಧಾರದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.ಕೆಲ ಸ್ಥಳೀಯ ಮಾಧ್ಯಮಗಳು ನಾಯಿ ಪತ್ತೆಯಾಗಿದೆ ಅನ್ನೋ ಮಾಹಿತಿ ನೀಡಿದೆ. ಆದರೆ ಸೆಲ್ವಕುಮಾರಿ, ಪೊಲೀಸರು ನಾಯಿ ಸಿಕ್ಕಿರುವ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ. ಮೂಲಗಳ ಪ್ರಕಾರ ಪೊಲೀಸರು ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಇತ್ತ ನಾಯಿ ನಾಪತ್ತೆಯಿಂದ ಕಮಿಷನರ್ ಸೆಲ್ವ ಕುಮಾರಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.