ಮೈಸೂರು (ಡಿ.15):  ಮೈಸೂರು ಮೃಗಾಲಯದಲ್ಲಿ ಆನೆ ಮರಿಯೊಂದು ಅನಾರೋಗ್ಯದಿಂದ  ಸಾವನ್ನಪ್ಪಿದೆ.  

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ರಕ್ಷಿಸಿದ್ದ ಆನೆಮರಿ ಇದೀಗ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದೆ. 

ಆರು ತಿಂಗಳ ಹಿಂದೆ ಆನೆ ಮರಿಯನ್ನು ರಕ್ಷಣೆ ಮಾಡಲಾಗಿತ್ತು. ಮೃಗಾಲಯದಲ್ಲಿ ರಕ್ಷಣೆ ಮಾಡಿದ್ದ ಆನೆಮರಿಗೆ ‘ವೇದಾವತಿ’ ಎಂದು ಹೆಸರಿಡಲಾಗಿತ್ತು.

ಮೈಸೂರು; ಅಮ್ಮನಿಂದ ತಪ್ಪಿಸಿಕೊಂಡಿದ್ದ ಆನೆ ಮರಿ ಅರಣ್ಯಕ್ಕೆ; ವಿಡಿಯೋ

ಆನೆ ಮರಿ ನೋಡಿಕೊಳ್ಳಲು ಸೋಮು ಎಂಬ ಸಿಬ್ಬಂದಿ ನಿಯೋಜಿಸಲಾಗಿತ್ತು.ಇದೀಗ ಸೋಂಕಿಗೆ ತುತ್ತಾಗಿ ಆನೆ ಮರಿ ಮೃತಪಟ್ಟಿದೆ. 
 
ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.