ಸದಾ ಹಕ್ಕು ಚ್ಯುತಿ ಹಾಕುವದರಲ್ಲಿಯೇ ಮಗ್ನರಾಗುವ ಅರಳಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದು ನಗರಾಭಿವೃದ್ಧಿಯ ಮೇಲೂ ಪೆಟ್ಟು ಬಿದ್ದಿದೆ. ಜಿಲ್ಲೆಗೆ ಇಲ್ಲಿಯವರೆಗೆ ಬಂದು ಹೋಗಿರುವ ನಾಲ್ಕೈದು ಜಿಲ್ಲಾಧಿಕಾರಿಗಳ ಮೇಲೆಯೂ ಇವರು ಹಕ್ಕುಚ್ಯುತಿ ಮಂಡಿಸಿದ್ದು ಬೇಸರ ತರಿಸುವಂತಿದೆ ಎಂದ ಬಾಬು ವಾಲಿ. 

ಬೀದರ್‌(ಮಾ.21): ಬೀದರ್‌ ಜಿಲ್ಲೆಯು ಕಾಂಗ್ರೆಸ್‌ಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೊಡುಗೆಯಾಗಿ ನೀಡಿದರೆ ಖರ್ಗೆ ಅವರು ಬೀದರ್‌ ಜಿಲ್ಲೆಗೆ ಅಭಿವೃದ್ಧಿಗೆ ಕಂಟಕವಾಗಿರುವ ಅರವಿಂದ ಅರಳಿ ಅವರನ್ನು ಶಾಪವಾಗಿ ನೀಡಿದ್ದಾರೆ ಎಂದು ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಆರೋಪಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದಾ ಹಕ್ಕು ಚ್ಯುತಿ ಹಾಕುವದರಲ್ಲಿಯೇ ಮಗ್ನರಾಗುವ ಅರಳಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದು ನಗರಾಭಿವೃದ್ಧಿಯ ಮೇಲೂ ಪೆಟ್ಟು ಬಿದ್ದಿದೆ. ಜಿಲ್ಲೆಗೆ ಇಲ್ಲಿಯವರೆಗೆ ಬಂದು ಹೋಗಿರುವ ನಾಲ್ಕೈದು ಜಿಲ್ಲಾಧಿಕಾರಿಗಳ ಮೇಲೆಯೂ ಇವರು ಹಕ್ಕುಚ್ಯುತಿ ಮಂಡಿಸಿದ್ದು ಬೇಸರ ತರಿಸುವಂತಿದೆ ಎಂದರು.

ಮಗು ಜೀವ ಉಳಿಸಲು ಹೋಗಿ ಸ್ಕಾರ್ಪಿಯೋ ಪಲ್ಟಿ: ಓರ್ವ ಸಾವು, ಐವರು ಗಂಭೀರ

ಇವರು ಅಕ್ರಮ ನಿವೇಶನವನ್ನು ಸಕ್ರಮ ಮಾಡಿಕೊಡುವಂತೆ ಆಗ್ರಹಿಸಿದ್ದು ಈಡೇರಿಸದಿದ್ದಾಗ ಬ್ಲಾಕ್‌ಮೇಲ್‌ ಅಸ್ತ್ರ ಉಪಯೋಗಿಸುತ್ತಿದ್ದಾರೆ. ಇದಲ್ಲದೆ ಇವರು ಯಾವುದೋ ಲೆಕ್ಕಾಚಾರದಲ್ಲಿ ಬೀದರ್‌ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆಸಿ ಹಾಕಿದ್ದು ಸ್ಪಷ್ಟವಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗಳೆ ಬಿಡಿಎ ಪತ್ರ ಉತ್ತರಿಸಿ ತಿಳಿಸಿದ್ದಾರೆ ಎಂದು ಬಿಡಿಎ ಅಧ್ಯಕ್ಷ ಬಾಬು ವಾಲಿ ಗಂಭೀರ ಆರೋಪ ಮಾಡಿದರು.

ಬಿಡಿಎದಿಂದ ನಿವೇಶನ ಹಂಚಿಕೆಯಲ್ಲಿ ಯಾವುದೇ ಅವ್ಯವಹಾರ, ಭ್ರಷ್ಟಾಚಾರ ನಡೆದಿಲ್ಲ. ಬಿಡಿಎ ಸಂಸ್ಥೆಯ ಹೆಸರನ್ನು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಕಾನೂನು ಬಾಹಿರ ಕೆಲಸಗಳನ್ನು ಮಾಡಿಕೊಡದ ಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ಯಾವುದೆ ಬೆದರಿಕೆಗೆ ಹೆದರುವುದಿಲ್ಲ. ಲೋಕಾಯುಕ್ತ, ಸಿಐಡಿ ಯಾವುದೇ ತನಿಖೆಗೂ ನಾನು ಸಿದ್ಧ ಎಂದು ಹೇಳಿದರು.