ಬಳ್ಳಾರಿ(ಮಾ.13): ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯನ್ನಾಗಿ ಸರ್ಕಾರ ನೇಮಿಸಿದರೆ ಚಿತ್ರದುರ್ಗ ಜತೆಗೆ ಬಳ್ಳಾರಿಯನ್ನೂ ನಿಭಾಯಿಸುವೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಈ ಮೂಲಕ ಬಳ್ಳಾರಿ ಜಿಲ್ಲಾ ಮಂತ್ರಿಯಾಗುವ ಆಸೆಯನ್ನು ಸಚಿವ ಶ್ರೀರಾಮುಲು ಹೊರ ಹಾಕಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಶ್ರೀರಾಮುಲು, ಬಳ್ಳಾರಿ ನನ್ನ ಸ್ವಂತ ಜಿಲ್ಲೆ. ಗದಗ, ರಾಯಚೂರು, ಚಿತ್ರದುರ್ಗ ಜಿಲ್ಲೆಯಲ್ಲಿ ಉಸ್ತುವಾರಿ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿಗಳು ಬಳ್ಳಾರಿ ಜಿಲ್ಲಾ ಜವಾಬ್ದಾರಿಯನ್ನು ಕೊಟ್ಟರೆ ನಿರ್ವಹಿಸುತ್ತೇನೆ ಎಂದ ಶ್ರೀರಾಮುಲು, ಸಿಎಂ ಅವರು ಮನಸ್ಸು ಮಾಡಿದರೆ ಖಂಡಿತ ಸಾಧ್ಯವಿದೆ ಎಂದು ತಿಳಿಸಿದರು.

ಬಳ್ಳಾರಿಯಲ್ಲಿ ಆಫ್ರಿಕಾ ವೈರಸ್ ಸೋಂಕು ಪತ್ತೆ, ತೀವ್ರ ಆತಂಕ!

ಬಳ್ಳಾರಿ ಜಿಲ್ಲಾ ವಿಭಜನೆಗೊಂಡು ವಿಜಯನಗರ ಜಿಲ್ಲಾ ಅಸ್ತಿತ್ವಕ್ಕೆ ಬಂದ ಬಳಿಕ ಜಿಲ್ಲಾ ಉಸ್ತುವಾರಿ ಮಂತ್ರಿಯಾಗುವ ವಿಚಾರದಲ್ಲಿ ನಡೆದಿದ್ದ ಚರ್ಚೆಯಲ್ಲಿ, ಶ್ರೀರಾಮುಲು ಬಳ್ಳಾರಿ ಜಿಲ್ಲಾ ಸಚಿವರಾಗಲು ಬಯಸಿದರೆ ನಾನು ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಹಾಲಿ ಜಿಲ್ಲಾ ಸಚಿವ ಆನಂದ ಸಿಂಗ್‌ಹೇಳಿಕೆ ನೀಡಿದ್ದರು. ವಿಜಯನಗರ ಜಿಲ್ಲೆ ಪ್ರತ್ಯೇಕವಾದ ಬಳಿಕ ಬಳ್ಳಾರಿಗೆ ಯಾರು ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಗಳು ನಡೆದಿರುವ ಬೆನ್ನಲ್ಲೇ, ಸಚಿವ ಶ್ರೀರಾಮುಲು ಅವರು ಜಿಲ್ಲಾ ಉಸ್ತುವಾರಿ ಹೊತ್ತುಕೊಳ್ಳುವ ಉತ್ಸುಕದ ಮಾತನಾಡಿದ್ದಾರೆ.