ಗದಗ(ಫೆ.09): ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಯಾವುದೇ ಭಯವಿಲ್ಲ, ಸರ್ಕಾರ ಸುಭದ್ರವಾಗಿರುತ್ತದೆ. ಮುಂದೆಯೂ ಕೂಡ  ಸುಭದ್ರವಾಗಿಯೇ ಇರಲಿದೆ. ಯುಗಾದಿಯ ನಂತರ ಮತ್ತೆ ಭವಿಷ್ಯ ಹೇಳುತ್ತೇನೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ. 

ಭಾನುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶ್ರೀಗಳು, ಪ್ರಕೃತಿಗೆ ಸವಾಲಾಗಿ, ಮನುಷ್ಯ ತನ್ನ ಬುದ್ದಿ ಶಕ್ತಿಯಿಂದ ಹೊಸ ಹೊಸ ಆವಿಷ್ಕಾರ ಮಾಡತ್ತಾ ಬರುತ್ತಿದ್ದಾನೆ. ರೆಕ್ಕೆ ಇಲ್ಲದ ಹಕ್ಕಿಗಳು ಹಾರಾಡಿವೆ, ಎತ್ತುಗಳು ಇಲ್ಲದ ಗಳೆಯನ್ನು ಹೊಡೆದಾರು, ಎಣ್ಣೆ ಇಲ್ಲದ ದೀಪವನ್ನು ಉರಿಸ್ಯಾರು, ಅನೇಕ ಅನೇಕ ವಿಜ್ಞಾನ ಆವಿಷ್ಕಾರ ಮಾಡಿ ಮನುಷ್ಯ ಜಗತ್ತನ್ನು ತಲ್ಲಣಗೊಳಿಸಿದ್ದಾರೆ. ಮನುಷ್ಯ ಬಹಳ ಎತ್ತರಕ್ಕೆ ಜಗತ್ತಿನಲ್ಲಿ ಒಂದು ಶಕ್ತಿಯಾಗಿ ಬೆಳೆದಿದ್ದಾನೆ. ಇದರಲ್ಲಿ ಒಂದು ಶಕ್ತಿ ಅಡಗಿದೆ. ಅದು ಇಡೀ ಜಗತ್ತನ್ನು ನಿಯಂತ್ರಣ ಮಾಡುತ್ತಿದೆ. ಅದನ್ನೆ ನಾವು ದೈವ ಶಕ್ತಿಯಂದು ಕರೆಯುತ್ತೇವೆ. ಅಂತಹ ದೈವ ಶಕ್ತಿ ಮುನಿದರೆ ಮನುಷ್ಯನ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತವೆ‌ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಚಂದ್ರಯಾನ ವಿಫಲವಾಗಲು, ದೈವ ಶಕ್ತಿ ನಂಬಿಕೆ ಕೊರತೆಯಿಂದ ವಿಫಲವಾಗಿದೆ ಎನ್ನುವದು ನನ್ನ ಅಭಿಪ್ರಾಯವಾಗಿದೆ. ಪ್ರಕೃತಿಯ ಒಳ್ಳಗುಟ್ಟನ್ನು ಬೇಧಿಸುತ್ತಾ ಹೊದಂತೆ ಪ್ರಕೃತಿ ಮನುಷ್ಯನಿಗೆ ಸಹಕಾರಿಯಾಗುತ್ತೆ. ಹಾಗಯೇ ವಿಷ ಕಾರಿಯು ಆಗುತ್ತದೆ.  ನೀರು, ಬೆಂಕಿ, ಗಾಳಿ, ಮನಕುಲಕ್ಕೆ ವಿನಾಶಕಾರಿಯಾಗುತ್ತಿವೆ. ಜೊತೆ ಜೊತೆಗೆ ಹೊಸ ಹೊಸ ರೋಗಗಳು ಉತ್ಪತಿಯಾಗುತ್ತವೆ. ಮನುಷ್ಯ ಹೆಚ್ಚು ಹಣ ಸಂಪಾದನೆ ಮಾಡಬೇಕು ಅಂತಾ ಪ್ರಕೃತಿಯನ್ನು ದುರುಪಯೋಗ ಪಡಿಸಿಕೊಂಡಿದ್ದು ಅಪಾಯಕಾರಿಯಾಗಿದೆ ಎಂದು ಶ್ರೀಗಳು ನುಡಿದಿದ್ದಾರೆ. 

ಈ ವರ್ಷವೂ ಕೂಡಾ ವಿಪರೀತ ಮಳೆಯಾಗುತ್ತದೆ‌, ಗಾಳಿ, ಬೆಂಕಿ ಅವಘಡಗಳು ಆಗುತ್ತವೆ. ಭೂಮಿ ತಲ್ಲಣ್ಣಗೊಳ್ಳತ್ತದೆ. ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತದೆ. ಹೀಗಾಗಿ ಮನುಷ್ಯ ಎಲ್ಲಿ‌ ಎಡವಿದ್ದಾನೆ ಅಲ್ಲಿಯೇ ಸರಿ ಪಡಿಸಿಕೊಳ್ಳಬೇಕು. ಮುಂದೆ ಔಷಧಿಗಳು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಇನ್ನೂ ಹೆಚ್ಚು ಹೆಚ್ಚು ಪ್ರಾಕೃತಿಕ ದತ್ತವಾದ ರೋಗಗಳು ಆವರಿಸುತ್ತವೆ. ಮನುಷ್ಯನಿಗೆ ಮದ್ದಿಲ್ಲದ ಕಾಯಿಲೆಗಳು ಬರುತ್ತವೆ. ಹಾಗಾಗಿ ಭಗವಂತನ ಮೊರೆ ಹೋಗುವುದು ಒಂದೆ ದಾರಿಯಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.