ದಾವಣಗೆರೆ(ಮಾ. 18)  ಬಹುರೂಪಿ ಬೆಂಗಳೂರು ಹಾಗೂ ದಾವಣಗೆರೆ ನಗರವಾಣಿ ಸಂಯುಕ್ತಾಶ್ರಯದಲ್ಲಿ ಬಿ.ಎನ್.ಮಲ್ಲೇಶ್ ಅವರ `ತೆಪರೇಸಿ ರಿಟರ್ನ್ಸ್' ವಿನೋದ ಬರಹಗಳ ಕೃತಿ ಬಿಡುಗಡೆ ಸಮಾರಂಭ ದಾವಣಗೆರೆಯಲ್ಲಿ ನಡೆಯಲಿದೆ.

ಕೃತಿಯನ್ನು  ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ ಬಿಡುಗಡೆ ಮಾಡಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ, ಕತೆಗಾರ, ಕನ್ನಡಪ್ರಭ ಪುರವಣಿ ಸಂಪಾದಕ  ಜೋಗಿ, ಪ್ರಜಾವಾಣಿ ಬ್ಯೂರೋ ಮುಖ್ಯಸ್ಥ(ದಾವಣಗೆರೆ)  ವಿಶಾಖ ಎನ್, ದಾವಣಗೆರೆ ನಗರವಾಣಿ ಸಂಪಾದಕ ಸಿ.ಕೆ. ಜಯಂತ್,  ಹಿರಿಯ ಪತ್ರಕರ್ತ ಬಹುರೂಪಿ ಸಂಸ್ಥೆಯ ಜಿ.ಎನ್. ಮೋಹನ್ ಪಾಲ್ಗೊಳ್ಳಲಿದ್ದಾರೆ.

ಹಾಲುಗಲ್ಲದ ಚಿಣ್ಣರಿಗೆ ಕನ್ನಡ ಓದು..! ವನಿತಾ ಅಣ್ಣಯ್ಯ ಅವರ ಐಡಿಯಾ ಸೂಪರ್...

ಮಾರ್ಚ್  20 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ದಾವಣಗೆರೆ ಎಂಸಿ ಕಾಲನಿ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಸಮಾರಂಭ ನಡೆಯಲಿದೆ.