Asianet Suvarna News Asianet Suvarna News

ಬಿ. ಹರ್ಷವರ್ಧನ್‌ ಅಭಿವೃದ್ಧಿಯ ಹರಿಕಾರ : ಸಿ. ಚಿಕ್ಕರಂಗನಾಯಕ

ಮಾಜಿ ಶಾಸಕ ಬಿ. ಹರ್ಷವರ್ಧನ್ ಅವರು ನಂಜನಗೂಡು ಕ್ಷೇತ್ರಕ್ಕೆ ಸುಮಾರು 838 ಕೋಟಿ ಅನುದಾನವನ್ನು ತಂದು ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ಅಭಿವೃದ್ದಿಯ ಹರಿಕಾರ ಎನಿಸಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ ಹೇಳಿದರು.

B. Harsh Vardhan Development Initiator : C. Chikkaranganayak snr
Author
First Published Jan 7, 2024, 11:10 AM IST | Last Updated Jan 7, 2024, 11:10 AM IST

  ನಂಜನಗೂಡು :  ಮಾಜಿ ಶಾಸಕ ಬಿ. ಹರ್ಷವರ್ಧನ್ ಅವರು ನಂಜನಗೂಡು ಕ್ಷೇತ್ರಕ್ಕೆ ಸುಮಾರು 838 ಕೋಟಿ ಅನುದಾನವನ್ನು ತಂದು ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ಅಭಿವೃದ್ದಿಯ ಹರಿಕಾರ ಎನಿಸಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ ಹೇಳಿದರು.

ತಾಲೂಕಿನ ಹರತಲೆ ಗ್ರಾಮದಲ್ಲಿ ಮಾಜಿ ಶಾಸಕ ಬಿ. ಹರ್ಷವರ್ದನ್ ಅವರ ಹುಟ್ಟುಹಬ್ಬದ ಅಂಗವಾಗಿ ಚಿಕ್ಕರಂಗನಾಯಕ ಅಭಿಮಾನಿ ಬಳಗದ ವತಿಯಿಂದ ಬಡವರಿಗೆ ಹೊದಿಕೆಗಳನ್ನು ನೀಡಿ, ಶಾಲಾ ಮಕ್ಕಳಿಗೆ ಸಿಹಿ ಹಂಚಿ, ಶಾಲಾ ಆವರಣದಲ್ಲಿ ಗಿಡ ನೆಡುವಂತಹ ಸಾಮಾಜಿಕ ಚಟುವಟಿಕೆಗಳನ್ನು ನೆರವೇರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿ ಅವರು ಮಾತನಾಡಿದರು.

ಈ ಭಾಗದ ರೈತರಿಗೆ ನೆರವಾಗುವಂತಹ ಶ್ರೀಕಂಠೇಶ್ವರ ದೇವಾಲಯದ ಅಭಿವೃದ್ದಿ, ಬೆಳ್ಳಿ ರಥ ನಿರ್ಮಾಣ, ನುಗು ಏತ ನಿರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆ, ಎಲ್ಲ ಗ್ರಾಮಗಳಲ್ಲೂ ಸಹ ಸಿಸಿ ರಸ್ತೆ, ಚರಂಡಿ, ಎಲ್ಲ ವರ್ಗದ ಜನರಿಗೂ ಸಹ ಸಮುದಾಯ ಭವನಗಳ ನಿರ್ಮಾಣದಂತಹ ಶಾಶ್ವತ ಕೆಲಸಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ಅವರಿಗೆ ದೇವರು ಆಯಸ್ಸು, ಆರೋಗ್ಯ, ಉನ್ನತ ಅಧಿಕಾರಗಳನ್ನು ನೀಡಿ ಕಾಪಾಡಲಿ ಎಂದು ಶ್ರೀಕಂಠೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದರು.

ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಪರಶಿವಮೂರ್ತಿ, ರಾಜು, ಪುಟ್ಟಸ್ವಾಮಿ, ಚಿಕ್ಕಣ್ಣ, ಗ್ರಾಪಂ ಸದಸ್ಯರಾದ ಗೋವಿಂದರಾಜು, ನಾಗರಾಜು, ಕಾಂತರಾಜು, ಶಿವನಾಯಕ, ಮಹಾಲಕ್ಷ್ಮಿ ಸೇರಿದಂತೆ ಸಿ. ಚಿಕ್ಕರಂಗನಾಯಕ ಅಭಿಮಾನಿ ಬಳಗದವರು ಇದ್ದರು.

Latest Videos
Follow Us:
Download App:
  • android
  • ios