ಬೆಂಗಳೂರು(ಅ.24): ಸತತ ಮೂರು ದಿನಗಳ ಕಾಲ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ವಿಧಾನಸೌಧದ ಹಲವು ಕಚೇರಿಗಳಲ್ಲಿ ಎರಡು ದಿನ ಮೊದಲೇ ಆಯುಧ ಪೂಜೆ ಆಚರಿಸಲಾಗಿದೆ. 

ನಾಲ್ಕನೇ ಶನಿವಾರ, ಭಾನುವಾರ ಆಯುಧ ಪೂಜೆ ಹಾಗೂ ಸೋಮವಾರ ವಿಜಯದಶಮಿ ನಿಮಿತ್ತ ಸರ್ಕಾರ ರಜೆ ಇರುವುದರಿಂದ ವಿಧಾನಸೌಧ, ವಿಕಾಸಸೌಧ, ಬಹು ಮಹಡಿ ಕಟ್ಟಡದ ಅನೇಕ ಕಚೇರಿಗಳಲ್ಲಿ ಸಿಬ್ಬಂದಿ ಶುಕ್ರವಾರವೇ ಆಯುಧ ಪೂಜೆ ನೆರವೇರಿಸಿದ್ದಾರೆ. 

ಆಯುಧಪೂಜೆಗೆ ರಂಗೇರಿದ ಮಾರುಕಟ್ಟೆ: ಕೊರೋನಾ ಭೀತಿ ನಡುವೆಯೂ ಹಬ್ಬಕ್ಕೆ ಸಿದ್ಧತೆ ಜೋರು

ಬೆಳಗ್ಗೆಯೇ ಹಲವು ಕಚೇರಿಗಳಲ್ಲಿ ಸರಳವಾಗಿ ಪೂಜೆ ನಡೆಯಿತು. ಕಚೇರಿಗಳ ಮುಂದೆ ರಂಗೋಲಿ ಹಾಕಿ, ಹೂವು, ಮಾವಿನ ಎಲೆಯಿಂದ ಕಚೇರಿಗಳನ್ನು ಸಿಂಗರಿಸಲಾಗಿತ್ತು. ರಾಜ್ಯ ಸರ್ಕಾರ ಕುಂಬಳಕಾಯಿ ಒಡೆಯುವಾಗ ಕುಂಕುಮ ಸೇರಿದಂತೆ ಇತ್ಯಾದಿ ಬಣ್ಣಗಳನ್ನು ಬಳಸದಂತೆ ನೀಡಿದ್ದ ಸೂಚನೆಯನ್ನು ಪಾಲಿಸಲಾಯಿತು. ಪೂಜೆ ನಂತರ ಸಿಬ್ಬಂದಿಗೆ ಸಿಹಿ ವಿತರಿಸಲಾಯಿತು. ಕೆಲವು ಕಡೆ ಸರ್ಕಾರಿ ವಾಹನಗಳನ್ನು ಹೂವುಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಯಿತು.