Asianet Suvarna News Asianet Suvarna News

ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ, ಶೃಂಗೇರಿ ಮಠದ ಪ್ರತಿನಿಧಿಯಾಗಿ ಅಯೋಧ್ಯೆಗೆ ಗೌರಿಶಂಕರ್

ಅಯೋಧ್ಯೆಯ ರಾಮ ಮಂದಿರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಶಂಕರರ ನಾಲ್ಕು ಪೀಠಗಳಲ್ಲಿ ಮೂರು ಪೀಠಗಳು ಹೋಗೋದಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ದವು. ಆದ್ರೀಗ, ಶೃಂಗೇರಿ ಮಠದ ಗುರುವತ್ರಯರು ಅಯೋಧ್ಯೆಗೆ ಹೋಗದಿರೋದನ್ನ ಸ್ಪಷ್ಟಪಡಿಸಿದ್ದಾರೆ. 

Ayodhya Ram Mandir  Gauri Shankar  as representative of Sringeri Mutt in  ram lalla idol installation gow
Author
First Published Jan 18, 2024, 8:30 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜ.18): ಅಯೋಧ್ಯೆಯ ರಾಮ ಮಂದಿರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಶಂಕರರ ನಾಲ್ಕು ಪೀಠಗಳಲ್ಲಿ ಮೂರು ಪೀಠಗಳು ಹೋಗೋದಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ದವು. ಆದ್ರೆ, ಶಂಕರಚಾರ್ಯರು ಸ್ಥಾಪಿಸಿದ ಮೊದಲ ಮಠ ಶೃಂಗೇರಿಯ ಮಠ  ಯಾವುದೇ ಸ್ಪಷ್ಟ ಸಂದೇಶ ನೀಡದ ಕಾರಣ ರಾಮ ಮಂದಿರ ಟ್ರಸ್ಟ್ ಹಾಗೂ ಭಕ್ತರಲ್ಲೂ ತೀವ್ರ ಕುತೂಹಲ ಮೂಡಿಸಿತ್ತು. ಆದ್ರೀಗ, ಶೃಂಗೇರಿ ಮಠದ ಗುರುವತ್ರಯರು ಅಯೋಧ್ಯೆಗೆ ಹೋಗದಿರೋದನ್ನ ಸ್ಪಷ್ಟಪಡಿಸಿದ್ದು ಮಠದ ಪರವಾಗಿ ಆಡಳಿತಾಧಿಕಾರಿ ಅಯೋಧ್ಯೆಗೆ ತೆರಳಲಿದ್ದಾರೆ. 

ಮಠವೇ ತನ್ನ ಅಧಿಕೃತ ವೆಬ್ ಸೈಟ್ ನಲ್ಲೇ ಮಾಹಿತಿ : 
ಐದು ಶತಮಾನಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಆದ್ರೆ, ಶಂಕರಾಚಾರ್ಯರು ಸ್ಥಾಪಿಸಿದ್ದ ನಾಲ್ಕು ಪೀಠಗಳು ರಾಮಲಲ್ಲನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಿಂದ ದೂರ ಉಳಿದಿವೆ. ಶೃಂಗೇರಿಯ ನಾಲ್ಕು ಮಠಗಳಲ್ಲಿ ಮೂರು ಮಠಗಳು ಪೂರ್ಣವಾಗದ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತಪಡಿಸಿದ್ದವು. ಅಯೋಧ್ಯೆಗೆ ಹೋಗದಿರೋದನ್ನ ಸ್ಪಷ್ಟಪಡಿಸಿದ್ದವು.

24 ದಿನಗಳ ಬಳಿಕ ಘೋಷಣೆಯಾದ ಉದಯೋನ್ಮುಖ ಕನ್ನಡ ನಟಿಯ ಮರಣದ ಸುದ್ದಿ, ಗಿಣಿಶಾಸ್ತ್ರದಿಂದ ಸಾವಿನ ಸುಳಿವು ಸಿಕ್ಕಿತ್ತಾ?

ಆದ್ರೆ, ಶೃಂಗೇರಿ ಮಠ ಯಾವುದನ್ನೂ ಸ್ಪಷ್ಟಪಡಿಸಿರಲಿಲ್ಲ. ಶೃಂಗೇರಿ ಮಠದ ಮೌನ ಸರ್ಕಾರ, ರಾಮ ಮಂದಿರ ಟ್ರಸ್ಟ್ ಹಾಗೂ ಭಕ್ತರಲ್ಲೂ ತೀವ್ರ ಕುತೂಹಲ ಮೂಡಿಸಿತ್ತು. ಆದ್ರೀಗ, ಮಠವೇ ತನ್ನ ಅಧಿಕೃತ ವೆಬ್ ಸೈಟ್ ನಲ್ಲೇ ಮಾಹಿತಿ ನೀಡಿದ್ದು ಶತಮಾನಗಳ ಬಳಿಕ ಅಯೋಧ್ಯೆಯಲ್ಲಿ ನಡೆಯುತ್ತಿರೋ ಕಾರ್ಯಕ್ರಮಕ್ಕೆ ಮಠದ ಇಬ್ಬರು ಗುರುವತ್ರಯರು ಹೋಗದಿರೋದನ್ನ ಸ್ಪಷ್ಟಪಡಿಸಿದ್ದು ಮಠದ ಪ್ರತಿನಿಧಿಯಾಗಿ ಆಡಳಿತಾಧಿಕಾರಿ ಗೌರಿ ಶಂಕರ್ ಅಯೋಧ್ಯೆಗೆ ತೆರಳಲಿದ್ದಾರೆ. ಈ ಮೂಲಕ ಶಂಕರಚಾರ್ಯರು ಸ್ಥಾಪಿಸಿದ್ದ ನಾಲ್ಕು ಮಟ್ಟದ ಮಠಾಧೀಶರು ಕೂಡ ಅಯೋಧ್ಯ ರಾಮಮಂದಿರ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮದಿಂದ ದೂರ ಉಳಿದಂತಾಗಿದೆ. 

ರಾಮತಾರಕ ಜಪ ಪಠಿಸುವಂತೆ ಕರೆ : 
ಕರ್ನಾಟಕದಲ್ಲಿ ನಾಲ್ವರು ರಾಮಮಂದಿರ ಟ್ರಸ್ಟ್ ನ ಸದಸ್ಯರಿದ್ದು ಅವರಲ್ಲಿ ಶೃಂಗೇರಿ ಮಠದ ಗುರುಗಳು ಒಬ್ರು. ಟ್ರಸ್ಟ್ ನ ಸದಸ್ಯರು ಆಗಿರುವ ಶೃಂಗೇರಿ ಮಠದ ಗುರುಗಳೇ ಗೈರಾಗಾಲಿದ್ದು ಭಕ್ತರು ಬೇಸರಿಸಿಕೊಂಡಿದ್ದಾರೆ. ತಿಂಗಳ ಹಿಂದೆಯೇ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಶೃಂಗೇರಿ ಮಠ ರಾಮಮಂದಿರಕ್ಕೆ ವಿರೋಧ ಮಾಡ್ತಿದೆ ಎಂದು ಅಪಪ್ರಚಾರ ಮಾಡಿದ್ರು. ಅದಕ್ಕೆ ಮಠ ಕೂಡ ಸ್ಪಷ್ಟನೆ ನೀಡಿತ್ತು. ಗುರುಗಳು ಕೂಡ ವದಂತಿಗಳಿಗೆ ಯಾರೂ ಕಿವಿಗೊಡಬೇಡಿ. ಜನವರಿ 22ಕ್ಕೆ ಎಲ್ಲರೂ ರಾಮತಾರಕ ಜಪ ಪಠಿಸುವಂತೆ ಕರೆ ನೀಡಿದ್ರು.

ಜನಪ್ರಿಯ ನಟರುಗಳಿಗೆ ಧಮ್ಕಿ ಹಾಕಿದ ಪ್ರಸಿದ್ಧ ನಟಿಯ ವೃತ್ತಿ ಜೀವನ ಮುಂಗೋಪಕ್ಕೆ ಬಲಿಯಾಯ್ತು! 

ಆದ್ರೆ, ಸಿಎಂ ಸಿದ್ದರಾಮಯ್ಯ ಅಯೋಧ್ಯೆ ರಾಮಮಂದಿರ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಶೃಂಗೇರಿಯ ನಾಲ್ಕು ಮಠಗಳು ವಿರೋಧ ಮಾಡ್ತಿವೆ ಎಂದು ಹೇಳಿದ್ರು.ಒಟ್ಟಾರೆ, ಅಯೋಧ್ಯೆಯಲ್ಲಿ ಐನೂರು ವರ್ಷಗಳ ಬಳಿಕ ರಾಮಮಂದಿರ ಪುನರ್ ಪ್ರತಿಷ್ಠಾಪನೆಯಾಗ್ತಿರೋದು ಭಾರತೀಯರಿಗೆ ರಾಷ್ಟ್ರೀಯ ಹಬ್ಬದಂತಾಗಿದೆ. ಈಗಾಗಲೇ ಮನೆ-ಮನಗಳಲ್ಲಿ ರಾಮನಾಮ ಶುರುವಾಗಿದೆ. ಆದ್ರೆ, ದೈವದತ್ತವಾದ ಈ ಪುಣ್ಯಭೂಮಿಯಲ್ಲಿನ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮಠಾಧೀಶರು ಕಾರಣಾಂತರಗಳಿಂದ  ಗೈರಾದರೂ ಕೂಡ ಆಶೀರ್ವಾವಂತು ಕಾರ್ಯಕ್ರಮದ ಮೇಲೆ ಇದ್ದೇ ಇದೆ.

Follow Us:
Download App:
  • android
  • ios